ನೂತನ ಕ್ರಿಮಿನಾಶಕ ಮಳಿಗೆ ಉದ್ಘಾಟನೆ

0
18

ಕನ್ನಡಮ್ಮ ಸುದ್ದಿ-ಹಿರೇಕೆರೂರು: ರೈತರಿಗೆ ಉತ್ತಮ ಕ್ರಮಿನಾಶಕಗಳನ್ನು ಪೂರೈಸುವ ಮೂಲಕ ದೇಶದ ರೈತರ ಹಿತ ಕಾಪಾಡುವಲ್ಲಿ ಇಫ್ಕೋ ಸಂಸ್ಥೆಯು ಮಹತ್ವದ ಪಾತ್ರವನ್ನು ವಹಿಸುವ ಮೂಲಕ ದೇಶದ ನಂಬರ ಓನ್‌ ಸಂಸ್ಥೆ ಯಾಗಿದೆ ಎಂದು ಇಫ್ಕೋ ಸಂಸ್ಥೆಯ ನವದೆಹಲಿಯ ವ್ಯವಸ್ಥಾಪಕ ನಿರ್ದೇಶಕ ಅರವಿಂದ ರಾಯ್‌ ಹೇಳಿದರು.
ಪಟ್ಟಣದ ತರಳಬಾಳು ಸಾಂಸ್ಕೃತಿಕ ಕೇಂದ್ರದಲ್ಲಿ ಇಫ್ಕೋ ಸಂಸ್ಥೆ ಹಾಗೂ ತಾಲೂಕ ವ್ಯವಸಾಯ ಉತ್ಪನ್ನ ಸಹಕಾರಿ ಮಾರಾಟ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನೂತನ ಕ್ರಿಮಿನಾಶಕ ಮಳಿಗೆ ಉದ್ಘಾಟನೆ ಮತ್ತು ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶದಲ್ಲಿ ಹಲವಾರು ಕಂಪನಿಗಳು ರೈತರಿಗೆ ಕ್ರಿಮಿನಾಶಕಗಳನ್ನು ವಿತರಿಸುತ್ತಿವೆ ಆದರೆ ಇಫ್ಕೋ ಸಂಸ್ಥೆ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಕ್ರಿಮಿನಾಶಕಗಳನ್ನು ಒದಗಿಸುವ ಮೂಲಕ ಉತ್ತಮ ಬೆಳೆ ಬರಲು ಸಹಕರಿಸುತ್ತಿದೆ. ಅಲ್ಲದೆ ಈಗ ಇಫ್ಕೋ ಸಂಸ್ಥೆ ಕೆಲವೇ ಕಲವು ರಾಜ್ಯಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು ಮುಂದಿನ ದಿನಗಳಲ್ಲಿ ಇಡೀ ದೇಶದ ಉದ್ದಗಲಕ್ಕೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿಎಪಿಸಿಎಮ್‌ಎಸ್‌ ಅಧ್ಯಕ್ಷ ಎಸ್‌.ಎಸ್‌.ಪಾಟೀಲ, ತಾಲೂಕಿನಲ್ಲಿ ತಾಲೂಕ ವ್ಯವಸಾಯ ಉತ್ಪನ್ನ ಸಹಕಾರಿ ಮಾರಾಟ ಸಂಘವು ತಾಲೂಕಿನ ಮುಂಗಾರು ಹಾಗೂ ಹಿಂಗಾರಿನ ಸಂಧರ್ಭದಲ್ಲಿ ರೈತ ಮಿತ್ರರಿಗೆ ಅಗತ್ಯ ರಸಗೊಬ್ಬರಗಳನ್ನು ವಿತರಿಸುತ್ತಾ ಬಂದಿದೆ. ಅಲ್ಲದೆ ತಾಲೂಕಿನಲ್ಲಿ ಅತೀ ಹೆಚ್ಚು ರಸಗೊಬ್ಬರವನ್ನು ವಿತರಿಸಿದ ಸಂಘವು ಸಹ ನಮ್ಮದಾಗಿದೆ. ಇದು ಅಲ್ಲದೆ ರೈತ ಸಮುದಾಯಕ್ಕೆ ವಿವಿಧ ರೀತಿಯ ಲಾಭವನ್ನು ನೀಡುವ ತಾಲೂಕಿನಲ್ಲಿ ಅತ್ಯಂತ ಕ್ರೀಯಾ ಶೀಲಾ ಹಾಗೂ ಅತೀ ದೊಡ್ಡ ತಾಲೂಕ ವ್ಯವಸಾಯ ಉತ್ಪನ್ನ ಸಹಕಾರಿ ಮಾರಾಟ ಸಂಘ ಇದಾಗಿದೆ ಎಂದರು
ಬಳಿಕ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರಿಗೆ ಸುಮಾರು 3000 ಕ್ಕೂ ಹೆಚ್ಚಿನ ಸಸಿಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಹಾವೇರಿ ಇಫ್ಕೋ ಸಂಸ್ಥೆಯ ಜಂಟಿ ನಿರ್ದೇಶಕ ವ್ಹಿ.ಸದಾಶಿವ, ರಾಜ್ಯ ಮಾರಾಟ ವ್ಯವಸ್ಥಾಪಕ ಸಿ.ಎಸ್‌.ಪಾಟೀಲ, ಉಪಾಧ್ಯಕ್ಷ ಈ. ಎಸ್‌.ಬಣಕಾರ, ಎಪಿಎಮ್‌ಸಿ ಅಧ್ಯಕ್ಷ ಹನುಮಂತಪ್ಪ ಹಡಗದ, ಎಸ್‌.ಬಿ.ತಿಪ್ಪಣ್ಣನವರ, ಆರ್‌.ಎನ್‌.ಗಂಗೋಳ, ದುರ್ಗಪ್ಪ ನೀರಲಗಿ, ಯು.ಯು.ಬಣಕಾರ, ಹೆಚ್‌.ಎಸ್‌.ಕಬ್ಬಕ್ಕಿ, ಟೆ.ಎಚ್‌.ಬಂದಕ್ಕಳವರ, ಬಿ.ಬಿ.ಗುಬ್ಬಿ, ನೀಲಮ್ಮ ಮಾವಿನತೋಪ, ಜಯಮ್ಮ ಸನ್ನೇರ, ಆರ್‌.ಎಸ್‌.ಪಾಟೀಲ, ಹೆಚ್‌.ಎಂ.ಬಣಕಾರ, ಎಚ್‌.ಎಂ.ಶಂಕರನಹಳ್ಳಿ, ಎಂ.ಎಸ್‌.ಕೋರಿಗೌಡರ ಇತರರಿದ್ದರು.

loading...