ನೆಟ್ಸ್‌ನಲ್ಲಿ ಸತತ ಅಭ್ಯಾಸವೇ ಯಾರ್ಕರ್‌ ಯಶಸ್ಸಿನ ಗುಟ್ಟು: ಬುಮ್ರಾ

0
4

ಬರ್ಮಿಂಗ್‌ಹ್ಯಾಮ್:- ಪಂದ್ಯದಲ್ಲಿ ಸತತ ಯಾರ್ಕರ್‌ ಪ್ರಯೋಗ ಯಶಸ್ವಿಯಾಗಿ ಪ್ರಯೋಗಿಸಬೇಕಾದರೆ ನೆಟ್ಸ್‌ನಲ್ಲಿ ಹೆಚ್ಚು ಅಭ್ಯಾಸ ಮಾಡಿರುತ್ತೇನೆ ಎಂದು ಭಾರತ ತಂಡದ ವೇಗಿ ಜಸ್ಪ್ರಿತ್‌ ಬುಮ್ರಾ ತಿಳಿಸಿದರು.
ಅಭ್ಯಾಸದ ವೇಳೆ ಪ್ರಯೋಗಿಸಿದ ಯಾರ್ಕರ್‌ನಿಂದ ಈಗಾಗಲೇ ವಿಜಯ್‌ ಶಂಕರ್‌ ಕಾಲು ಬೆರಳುಗಳಿಗೆ ಗಾಯವಾಗಿ ವಿಶ್ವಕಪ್‌ ಟೂರ್ನಿಯಿಂದ ಹೊರ ನಡೆದಿದ್ದಾರೆ. ಅಲ್ಲದೇ, ಮಂಗಳವಾರ ಕೂಡ ತಮ್ಮ ಯಾರ್ಕರ್‌ ಎಸೆತಗಳಿಂದ ಬಾಂಗ್ಲಾದೇಶವನ್ನು ವಿಶ್ವಕಪ್‌ ಟೂರ್ನಿಯಿಂದ ಹೊರ ಕಳುಹಿಸಿದರು.
ಈ ಬಗ್ಗೆ ಸುದ್ದಿಗಾರರಿಗೆ ಉತ್ತರಿಸಿದ ಅವರು, “ನೆಟ್ಸ್‌ನಲ್ಲಿ ಸತತ ಅಭ್ಯಾಸ ನಡೆಸುತ್ತೇನೆ. ಅತಿ ಹೆಚ್ಚು ಅಭ್ಯಾಸ ಮಾಡಿದಷ್ಟು ತನ್ನ ಬೌಲಿಂಗ್‌ನಲ್ಲಿ ಇನ್ನಷ್ಟು ಗುಣಮಟ್ಟ ಹೆಚ್ಚಾಗುತ್ತದೆ. ಇದರಿಂದಾಗಿ ಪಂದ್ಯದ ಡೆತ್‌ ಓವರ್‌ಗಳಲ್ಲಿ ಸತತ ಯಾರ್ಕರ್‌ ಪ್ರಯೋಗ ಮಾಡುತ್ತೇನೆ ಎಂದು ಬುಮ್ರಾ ಹೇಳಿದರು.
ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವಾಗ ಎಲ್ಲ ಸನ್ನಿವೇಶಗಳಿಗೆ ತಕ್ಕಂತೆ ಬೌಲಿಂಗ್‌ ಮಾಡುತ್ತೇನೆ. ಹೊಸ ಚೆಂಡು, ಹಳೆ ಚೆಂಡು ಹಾಗೂ ಡೆತ್‌ ಓವರ್‌ ಸನ್ನಿವೇಶ ಎಂದು ಬಿಂಬಿಸಿಕೊಂಡು ಬೌಲಿಂಗ್‌ ಅಭ್ಯಾಸ ನಡೆಸುತ್ತೇನೆ ಎಂದು ಬುಮ್ರಾ ಹೇಳಿದರು.
” ನೆಟ್ಸ್ ನಲ್ಲಿ ಅಭ್ಯಾಸ ಯಶಸ್ವಿಯಾದಲ್ಲಿ ಪಂದ್ಯದಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಮುಕ್ತ ಮನಸ್ಸಿನಿಂದ ಪ್ರಯೋಗ ಮಾಡಲು ಮುಂದಾಗುತ್ತೇನೆ ಎಂದು ಹೇಳಿದರು.

loading...