ನೆಮ್ಮದಿಯ ಆಡಳಿತಕ್ಕೆ ಬಿಜೆಪಿ ಗೆಲ್ಲಿಸಿ: ಶಾಸಕ ರಾಜು

0
26

ರಬಕವಿ-ಬನಹಟ್ಟಿ: ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಹಳ್ಳ ಹಿಡಿರುವ ಸರ್ಕಾರ ಮತ್ತೆ ನಾಚಿಕೆ ಬಿಟ್ಟು ಸ್ಥಳೀಯ ಸಂಸ್ಥೆಗಳಲ್ಲಿ ಗುಪ್ತ್ ಗುಪ್ತ್ ಒಳಒಪ್ಪಂದ ಮಾಡಿಕೊಂಡು ಜೆಡಿಎಸ್ ಜೊತೆ `ಕೈ’ ಜೋಡಿಸಿರುವ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೊಮ್ಮೆ ತೀವ್ರ ಮುಖಭಂಗ ಅನುಭವಿಸಲು ಸನಿಹದಲ್ಲಿದೆ ಎಂದು ಕುಡಚಿ ಶಾಸಕ ಪಿ. ರಾಜು ಹೇಳಿದರು.
ನಗರಸಭೆಯ ಚುನಾವಣೆ ಪ್ರಾಚಾರಾರ್ಥವಾಗಿ ಲಕ್ಷಿö್ಮÃ ನಗರ, ಮೊಳೆಗಾಂವಿ ಲೇನ್ ಸೇರಿದಂತೆ ವಿವಿಧೆಡೆ ಮತಯಾಚನೆ ನಡೆಸಿ ನಂತರ ಮಾತನಾಡಿದ ಅವರು, ಪಾರದರ್ಶಕ ಹಾಗು ಪ್ರಾಮಾಣಿಕತೆಯ ಆಡಳಿತ ನಡೆಸಲು ಸ್ಥಳೀಯ ನಗರಸಭೆಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಲ್ಲಿ ಮಾತ್ರ ಸಾಧ್ಯವೆಂದರು.

ಸಂಪೂರ್ಣ ಹತಾಶೆ ಭಾವನೆಯಲ್ಲಿ ಸ್ಥಳೀಯ ಸಂಸ್ಥೆಗಳನ್ನು ಎದುರಿಸುತ್ತಿರುವ ಕಾಂಗ್ರೆಸ್ ತನ್ನ ಬಲ ಕಳೆದುಕೊಂಡಿದೆ. ಆ ಕಾರಣದಿಂದಲೇ ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಜನತೆಯ ಕಣ್ಣಿಗೆ ಮೋಸ ಮಾಡಲು ಸನ್ನದ್ಧವಾಗಿದೆ. ಜಾಣ ಮತದಾರರು ಇದ್ಯಾವುದಕ್ಕೂ ಕಿವಿಗೊಡುವದಿಲ್ಲವೆಂದು ಶಾಸಕ ಪಿ. ರಾಜು ತಿಳಿಸಿದರು.
ಇದೇ ಸಂದರ್ಭ ವಿದ್ಯಾಧರ ಸವದಿ, ಭೀಮಶಿ ಮಗದುಮ್, ನಗರ ಘಟಕದ ಅಧ್ಯಕ್ಷ ರಾಜು ಅಂಬಲಿ, ಸಿದ್ರಾಯಪ್ಪ ಕರಲಟ್ಟಿ, ಮಲ್ಲು ಬೀಳಗಿ, ಎಸ್.ಬಿ. ಗೌಡಪ್ಪನವರ, ಸುರೇಶ ವಾಲಿಕಾರ, ಶೇಖರ ಹಕ್ಕಲದಡ್ಡಿ, ರಾಜು ಬಾಣಕಾರ, ಕುಮಾರ ಕದಮ, ಸಂಗೀತಾ ಖಾನಾಪುರ, ವೈಷ್ಣವಿ ಬಾಗೇವಾಡಿ, ಸುವರ್ಣ ಕೊಪ್ಪದ ಸೇರಿದಂತೆ ಅನೇಕರಿದ್ದರು.

loading...