ನೆರೆ ಸಂತ್ರಸ್ತರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಅಗತ್ಯ ಸಾಮಗ್ರಿ ಸಂಗ್ರಹ

0
21

ಕನ್ನಡಮ್ಮ ಸುದ್ದಿ-ಹಾನಗಲ್ಲ: ಕೊಡಗಿನ ನೆರೆ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ ಪಟ್ಟಣದಲ್ಲಿ ಸೋಮವಾರ ಅಸಂಘಟಿತ ಕಾರ್ಮಿಕರ ಕಾಗ್ರೆಸ್ ಸಮಿತಿ ಕಾರ್ಯಕರ್ತರು ಹಣ, ವಿವಿಧ ಸಾಮಗ್ರಿ ಸಂಗ್ರಹಿಸುವ ಕಾರ್ಯ ಕೈಗೊಂಡಿದ್ದರು.
ಪಟ್ಟಣ್ ರಂಜನಿ ಟಾಕೀಸ್ ಸರ್ಕಲ್ ಬಳಿ ಈ ಕಾರ್ಯಕ್ಕೆ ಮಾಜಿ ಸಚಿವ ಮನೋಹರ ತಹಶೀಲ್ದಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಕೃತಿ ಮುನಿಸಿದೆ, ಕೊಡಗಿನ ಜನರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಧಾವಿಸುವ ಮಾನವೀಯತೆಯು ನಾಡಿನಾಧ್ಯಂತ ಪ್ರದರ್ಶಿತವಾಗುತ್ತಿದೆ ಎಂದರು.ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ‘ನೆರೆ ಸಂತ್ರಸ್ತರ ನೆರವಿಗೆ ಸಾಕಷ್ಟು ಮನಸ್ಸುಗಳು ತುಡಿಯುತ್ತಿವೆ, ಹಣ, ಆಹಾರ ಧಾನ್ಯ, ಬಿಸ್ಕೆಟ್, ಬಟ್ಟೆ, ಚಾಪೆ ಮತ್ತಿತರ ಸಾಮಗ್ರಿಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದರು.
ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ನಿಯಾಜ್ ಶೇಖ್, ಯಲ್ಲಪ್ಪ ನಿಂಬಣ್ಣನವರ, ಬಸವರಾಜ ಡುಮ್ಮಣ್ಣನವರ, ವಿಜಯಕುಮಾರ ದೊಡ್ಡಮನಿ, ಕಂಡೋಜಿ ಬೊಸ್ಲೆ, ನಂದೀಶ ಗೋದಿ, ವಿಶ್ವನಾಥ ದೊಡ್ಡಮನಿ, ಮೆಹಬೂಬಲಿ ಹುಡೇದ, ರಮೇಶ ಹರಿಜನ ಇದ್ದರು.

loading...