ನೋಟು ಅಮಾನ್ಯತೆ ಕ್ರಮ ಉತ್ತಮವಾದುದ್ದೆಂದು ಅರ್ಥಶಾಸ್ತ್ರಜ್ಞರು ವ್ಯಕ್ತಪಡಿಸಿಲ್ಲ

0
19

ನವದೆಹಲಿ: 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರಸರ್ಕಾರ ಜಾರಿಗೆ ತಂದ ನೋಟು ಅಮಾನ್ಯತೆ ಕ್ರಮ ಉತ್ತಮವಾದುದ್ದೆಂದು ವಿಶ್ವದಾದ್ಯಂತ ಯಾವುದೇ ಅರ್ಥಶಾಸ್ತ್ರಜ್ಞರು ಪ್ರಶಂಸೆ ವ್ಯಕ್ತಪಡಿಸಲಿಲ್ಲ ಎಂದು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.
ಎನ್ ಎಸ್ ಯುಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ಮೋದಿ ನೋಟು ಅಮಾನ್ಯತೆ ಘೋಷಿಸಿದ್ದಾಗ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಹ್ಮಣ್ಯ ಕೇರಳದಲ್ಲಿದ್ದರು. ಅವರೊಂದಿಗೆ ಸಮಾಲೋಚನೆ ಕೂಡಾ ನಡೆಸಿರಲಿಲ್ಲ.ನೋಟು ಅಮಾನ್ಯತೆ ವಿಷಯ ಗೊತ್ತೇ ಇರಲಿಲ್ಲ. ಮುಖ್ಯ ಆರ್ಥಿಕ ಸಲಹೆಗಾರರಿಗೆ ಗೊತ್ತಿಲ್ಲ ಅಂದರೆ, ಇದೆಂಥಾ ಆರ್ಥಿಕತೆ ಎಂದು ಕಿಡಿಕಾರಿದರು.
ನವೆಂಬರ್ 8, 2016 ರಂದು ಕೇಂದ್ರ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯತೆ ಅರ್ಥವ್ಯವಸ್ಥೆಯ ಕಪ್ಪು ಚುಕ್ಕೆಯಾಗಿದೆ. ಸರ್ಕಾರದ ನಡೆ ಹಲವು ಪ್ರತಿಪಕ್ಷಗಳಿಂದ ಟೀಕೆಗೆ ಗುರಿಯಾಗಿತ್ತು ಎಂದು ತಿಳಿಸಿದರು.
ಇತ್ತೀಚಿಗೆ ಆರ್ ಬಿಐ ನಡೆಸಿದ ಅಧ್ಯಯನದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಜಿಎಸ್ ಟಿ ವಿಧಿಸಿರುವುದು ಹಾಗೂ ನೋಟು ಅಮಾನ್ಯತೆ ಒಟ್ಟಾರೇ, ಸಾಲದ ಮೇಲೆ ಪರಿಣಾಮ ಬೀರಲಿದೆ ಎಂಬುದು ತಿಳಿದುಬಂದಿದೆ. ಆಯುಷ್ಮನ್ ಭಾರತ್ ಆರೋಗ್ಯ ವಿಮೆ ಮಾದರಿ ಎಂದು ಹೇಳಲಾಗುತ್ತಿದೆ. ಆದರ ಬಗ್ಗೆ ಯೋಚಿಸಲು ಸಾಧ್ಯವಾಗಲ್ಲ ಸೌಕರ್ಯಗಳನ್ನು ಕಲ್ಪಿಸಲು ದುಬಾರಿ ವೆಚ್ಚ ತಗುಲಲಿದೆ ಎಂದು ಹೇಳಿದರು.
ಒಬಾಮಾ ಕೇರ್ ವಿಮೆ ಮಾದರಿ ವಿಫಲವಾಗಿದೆ . ಅಮೆರಿಕಾದ ತಲಾ ಆದಾಯ 1.50 ಸಾವಿರ ಡಾಲರ್, ನಮ್ಮ ತಲಾ ಆದಾಯ 1,800 ಡಾಲರ್ ಆಗಿದೆ. ಆಯುಷ್ಮನ್ ಭಾರತ್ ವಿಮೆ ಯೋಜನೆ ತಪ್ಪು ಮಾದರಿಯಾಗಲಿದೆ ಎಂಬುದನ್ನು ಸರ್ಕಾರಕ್ಕೆ ಹೇಳುವವರು ಯಾರು ಎಂದು ಚಿದಂಬರಂ ಪ್ರಶ್ನಿಸಿದರು.

loading...