ನ್ಯಾಶನಲ್ ಚೆಸ್ ಚಾಂಪಿಯನ್‌ಶಿಪ್ ಎರಡನೇ ಸ್ಥಾನ ಪಡೆದ ಬೆಳಗಾವಿಯ ನಿರಂಜನ್

0
51

ನ್ಯಾಶನಲ್ ಚೆಸ್ ಚಾಂಪಿಯನ್‌ಶಿಪ್ ಎರಡನೇ ಸ್ಥಾನ ಪಡೆದ ಬೆಳಗಾವಿಯ ನಿರಂಜನ್

ಕನ್ನಡಮ್ಮ ಸುದ್ದಿ-ಬೆಳಗಾವಿ:ಮದ್ಯ ಪ್ರದೇಶದ ಭೂಪಾಲ್‌ನಲ್ಲಿ ಆಗಸ್ಟ ೨೧ ರಿಂದ ೨೭ ವರೆಗೆ ನಡೆದ ೨೫ ವರ್ಷದ ಒಳಗಿನ ನ್ಯಾಶನಲ್ ಯೂಥ್ ಅಂಡರ್ ೨೫ ಚೆಸ್ ಚಾಂಪಿಯನ್‌ಶಿಪ್ ಪಂಧ್ಯಾವಳಿಯಲ್ಲಿ ಬೆಳಗಾವಿಯ ನಿರಂಜನ ನವಲಗುಂದ ಎರಡನೇ ಸ್ಥಾನ ಪಡೆದಿದ್ದಾರೆ.
ಮದ್ಯ ಪ್ರದೇಶ ಚೆಸ್ ಅಸೋಸಿಯೇಷನ್ ಆಯೋಜಿಸಿದ್ದ ಈ ಪದ್ಯಾವಳಿಯಲ್ಲಿ ದೇಶದ ಎಲ್ಲ ಭಾಗದ ೮೬ ಸ್ಪರ್ಧಾಳುಗಳು ಭಾಗವಹಿಸಿದ್ದರು.ಕರ್ನಾಟಕದಿಂದ ೪ ಜನ ಭಾಗವಹಿಸಿದ್ದರು.ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಆಂದ್ರದ ಮಾಸ್ಟರ್ ವೈ ಗಣೇಶ ಪಡೆದರೆ,ಎರಡನೇ ಸ್ಥಾನವನ್ನು ಬೆಳಗಾವಿಯ ನಿರಂಜನ ನವಲಗುಂದ ಪಡೆದುಕೊಂಡಿದ್ದಾರೆ.ನಿರಂಜನ ಚೆಸ್ ಆಟದಲ್ಲಿ ರಾಷ್ಟ ಮಟ್ಟದಲ್ಲಿ ಸಾಧನೆ ಮಾಡಿದಕ್ಕೆ ಕುಟುಂಬಸ್ಥರು ಹರ್ಷ ವ್ಯಕ್ತ ಪಡೆಸಿದ್ದಾರೆ.

loading...