ನ.21 ರೊಳಗಾಗಿ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸದಿದ್ದರೆ: ಸುವರ್ಣ ಸೌದಕ್ಕೆ ಮುತ್ತಿಗೆ

0
34

ಕನ್ನಡಮ್ಮ ಸುದ್ದಿ-ಮೋಳೆ
ಐನಾಪೂರದಲ್ಲಿ ಶನಿವಾರ ಏರ್ಪಡಿಸಿದ ಕಬ್ಬು ಬೆಳೆಗಾರರ ಸಭೆಯನ್ನುದ್ದೇಶಿಸಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡುತ್ತಿರುವ ಚಿತ್ರ. ಮೋಳೆ;- ನವ್ಹೆಂಬರ 21 ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದೊಳಗಾಗಿ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕು. ಇಲ್ಲವಾದರೆ ಸಾವಿರಾರು ರೈತರೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಅಥಣಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ಶನಿವಾರ ಪ್ರೇರಣಾ ಟ್ರಸ್ಟ್‌ ವತಿಯಿಂದ ಏರ್ಪಡಿಸಿದ ಅಥಣಿ ಹಾಗೂ ರಾಯಬಾಗ ತಾಲೂಕಿನ ಕಬ್ಬು ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಳೆದ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ಬಾಕಿ ಉಳಿದಿರುವ 500 ರೂ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್‌ ಕಬ್ಬಿಗೆ 3200 ರೂ ಗಳನ್ನು ಘೋಷಿಸಿದ ಬಳಿಕವೇ ಕಾರ್ಖಾನೆಗಳನ್ನು ಆರಂಭಿಸುವಂತೆ ಸರಕಾರ ಕೂಡಲೇ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದಿಲ್ಲ. ಹೀಗಾಗಿ ರೈತಾಪಿ ವರ್ಗದಲ್ಲಿ ಬೃಮನಿರಸನಗೊಳ್ಳುವಂತಾಗಿದ್ದು,ನ.21ರೊಳಗಾಗಿ ಕಬ್ಬು ಬೆಳೆಗಾರರಿಗೆ ಈ ಹಿಂದೆ ಕೊಟ್ಟಿರುವ ಆಶ್ವಾಸನೆಗಳನ್ನು ಇಡೇರಿಸಬೇಕು. ಇಲ್ಲವಾದರೆ ಅಧಿವೇಶನ ಸಂಬರ್ಭದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದೆಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.
ನೆರೆಯ ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಪ್ರತಿ ಟನ್‌ ಕಬ್ಬಿಗೆ 2800 ರೂಗಳನ್ನು ನೀಡಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ಸಂಸದ ರಾಜು ಶೆಟ್ಟಿಯವರ ಬೇಡಿಕೆಯಂತೆ ಪ್ರಸಕ್ತ ಹಂಗಾಮಿಗೆ ಪ್ರತಿ ಟನ್‌ ಕಬ್ಬಿಗೆ 3200 ರೂ ಗಳನ್ನು ನೀಡಲು ಸಕ್ಕರೆ ಕಾರ್ಖಾನೆಗಳು ಒಲವು ತೋರಿಸಿವೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರದ ದರವನ್ನು ಕರ್ನಾಟಕದ ರೈತರಿಗೂ ಕೊಡಿಸಬೇಕೆಂದು ಕೋಡಿಹಳ್ಳಿ ಚಂದ್ರಶೇಖರ ಆಗ್ರಹಿಸಿದರು.
ರೈತವಿರೋಧಿ ನಿಲುವುಗಳನ್ನು ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುವುದಿರಲಿ, ವಿಧಾನ ಸೌಧದ ಕಟ್ಟೆ ಹತ್ತಲು ಆಗುವದಿಲ್ಲವೆಂದು ಕೊಡಿಹಳ್ಳಿ ಚಂದ್ರಶೇಖರ ಭವಿಷ್ಯ ನುಡಿದರು.
ರಾಜ್ಯದಲ್ಲಿರುವ ಬಹುತೇಕ ಸಕ್ಕರೆ ಕಾರ್ಖಾನೆಗಳ ಮಾಲಿಕರು ರಾಜಕಾರಣಿಗಳಾಗಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಗಳಲ್ಲಿ ಅಂತಹ ಕಾರ್ಖಾನೆಗಳ ಮಾಲಿಕರಾಗಿರುವ ರಾಜಕಾರಣಿಗಳನ್ನು ತಿರಸ್ಕರಿಸಬೇಕು. ಸಕ್ಕರೆ ಕಾರ್ಖಾನೆಗಳ ಮೂಲಕ ರೈತರಿಗೆ ಮೋಸ ಮಾಡಿ ಪ್ರತಿವರ್ಷ ಹೊಸಹೊಸ ಕಾರ್ಖಾನೆಗಳನ್ನು ಸ್ಥಾಪಿಸಿ ಕೋಟ್ಯಾಂತರ ರೂ ಪಡೆದುಕೊಂಡು ರೈತರ ಕುತ್ತಿಗೆ ಕೊಯ್ಯೂತ್ತಿದ್ದಾರೆ. ಅಂಥ ನೀಚರನ್ನು ಆಯ್ಕೆಗೊಳಿಸದೆ, ರೈತ ಪ್ರತಿನಿಧಿಗಳನ್ನು ವಿಧಾನಭೆಗೆ ಆಯ್ಕೆ ಮಾಡುವಂತೆ ಕೋಡಿಹಳ್ಳಿ ಚಂದ್ರಶೇಖರ ಚಂದ್ರಶೇಖರ ರೈತರಿಗೆ ಕರೆ ನೀಡಿದರು.
ಮಹಾರಾಷ್ಟ್ರದ ಸಂಸದ ರಾಜು ಶೆಟ್ಟಿ, ಉಗಾರ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮೋಹನರಾವ್‌ ಶಹಾ, ಮುಖಂಡರಾದ ಶೀತಲ ಪಾಟೀಲ, ರವೀಂದ್ರ ಗಾಣಿಗೇರ ಸೇರಿದಂತೆ ಅನೇಕ ಮುಂಖಂಡರು ಮಾತನಾಡಿದರು.
ಈ ವೇಳೆ ಅಥಣಿ, ಹಾಗೂ ರಾಯಬಾಗ ತಾಲೂಕಿನ ಸಾವಿರಾರು ರೈತ ಮುಖಂಡರು ಪಾಲ್ಗೊಂಡು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here