ಪಂಡಿತ ದೀನ ದಯಾಳ ಉಪಾಧ್ಯಾಯರ ಜನ್ಮಶತಾಬ್ದಿ ವರ್ಷಾಚರಣೆ

0
146

ಗೋಕಾಕ 25: ಪಂಡಿತ ದೀನ ದಯಾಳರು ಕಟ್ಟ ಕಡೆಯ ವ್ಯಕ್ತಿಯ ಅಭಿವೃದ್ಧಿಯಿಂದಲೇ ಸಮಷ್ಠಿಯ ಅಭಿವೃದ್ದಿ ಸಾಧ್ಯವೆಂದು ಪ್ರತಿಪಾದಿಸಿದ್ದರು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ರವಿವಾರದಂದು ಅರಭಾವಿ ಬಿಜೆಪಿ ಮಂಡಲ ಏರ್ಪಡಿಸಿದ್ದ ಪಂಡಿತ ದೀನ ದಯಾಳ ಉಪಾಧ್ಯಾಯರ ಜನ್ಮಶತಾಬ್ದಿ ವರ್ಷಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೀನ ದಯಾಳರು ಅಂತ್ಯೋದಯ ಎಂಬ ಶ್ರೇಷ್ಠ ಚಿಂತನೆಯನ್ನು ದೇಶದೆಲ್ಲಡೆ ಬಿತ್ತಿದ್ದರು. ಆರ್ಥಿಕ ಯೋಜನೆಗಳು ಮತ್ತು ಪ್ರಗತಿಯ ಅಳತೆಯು ಇವರನ್ನು ಆಧರಿಸಿ ನಡೆಯಬೇಕೆ ವಿನಹ ಸಮಾಜದ ಮೆಟ್ಟಿಲನ್ನೇರಿರುವವರನ್ನಲ್ಲ ಎಂದು ಹೇಳಿದ್ದರೆಂದು ತಿಳಿಸಿದರು.
ರಾಜಕೀಯ ವ್ಯವಸ್ಥೆಯಲ್ಲಿ ದೇಶ ಮೊದಲು ಎಂಬ ಪರಂಪರೆಯನ್ನು ಹುಟ್ಟು ಹಾಕಿದ್ದರು. ಸಂಘಟನಾಕಾರಿ, ರಾಜಕೀಯದಲ್ಲಿ ಸಾಂಸ್ಕøತಿಯ ರಾಯಭಾರಿಯಾಗಿ, ಸ್ಪಷ್ಟ ವಿಚಾರ ಮಂಡನೆಗಳ ಮೂಲಕ ದಾರ್ಶನಿಕರಾಗಿ ಮುಂದಿನ ಪೀಳಿಗೆಗೆ ದೀನ ದಯಾಳು ಆದರ್ಶರಾಗಿದ್ದರು. ಜನ ಸಂಘದ ಸ್ಥಾಪಕ ಡಾ.ಶ್ಯಾಮ ಪ್ರಸಾದ ಮುಖರ್ಜಿ ಅವರು ನನಗೆ ಇಬ್ಬರೂ ದೀನ ದಯಾಳರು ಇದ್ದಿದ್ದರೇ ಇಡಿ ಭಾರತದ ರಾಜಕೀಯ ನಕ್ಷೆಯನ್ನೆ ಬದಲಾಯಿಸುತ್ತಿದ್ದೆ ಎಂಬ ಹೇಳಿಕೆಯು ದೀನ ದಯಾಳರ ಆಗಾಧ ಪ್ರತಿಭೆಗೆ ಸಾಕ್ಷಿಯಾಗಿತ್ತು ಎಂದು ಹೇಳಿದರಲ್ಲದೇ ಏಕಾತ್ಮ ಮಾನವತಾದ ಮೂಲಕ ಮತ್ತೆ ಭಾರತೀಯ ಸಂಸ್ಕøತಿಯ ಶ್ರೇಷ್ಠತೆಯನ್ನು ಸಾರಿದ ಅವರ ಚಿಂತನೆಗಳು ಹಾಗೂ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಜಗತ್ತಿನಲ್ಲಿಯೇ ಭಾರತ ಪ್ರಬಲ ದೇಶವಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಮಹತ್ವಾಂಕ್ಷೆಯ ಯೋಜನೆಗಳನ್ನು ರೂಪಿಸಿ ಮುನ್ನಡೆಯುತ್ತಿದ್ದಾರೆ. ದೀನ ದಯಾಳ ಉಪಾಧ್ಯಾಯ ಯೋಜನೆ, ದೀನ ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆ, ಜನಧನ್‍ನಿಂದ ಜನ ಸುರಕ್ಷಾ, ಕೃಷಿ ವಿಮಾ ಯೋಜನೆ, ಮುದ್ರಾ ಯೋಜನೆ, ಪ್ರಧಾನ ಮಂತ್ರಿ ವಸತಿ ಯೋಜನೆ, ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ, ಸ್ವಚ್ಚ ಭಾರತದಂತಹ ಜನಪ್ರಿಯ ಯೋಜನೆಗಳನ್ನು ರೂಪಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ. ಮೋದಿ ಅವರ ದೂರದೃಷ್ಠಿ ಆಲೋಚನೆಯಿಂದ ವಿಶ್ವದಲ್ಲಿಯೇ ಭಾರತ ಅಭಿವೃದ್ದಿಶೀಲ ದೇಶವಾಗಿ ಹೊರಹೊಮ್ಮುತ್ತದೆ ಎಂದು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಂಡಿತ ದೀನ ದಯಾಳ ಉಪಾಧ್ಯಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮಶತಾಭ್ದಿ ವರ್ಷಾಚರಣೆಗೆ ಚಾಲನೆ ನೀಡಿದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಸುಭಾಶ ಪಾಟೀಲ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಜಿಲ್ಲಾ ಎಸ್‍ಸಿ ಮೋರ್ಚಾ ಅಧ್ಯಕ್ಷ ಅಶೋಕ ಛಲವಾದಿ, ಶಂಕರ ಬಿಲಕುಂದಿ, ಪರಸಪ್ಪ ಬಬಲಿ, ಬಸು ಮಾಳೆದವರ, ರೇವಣ್ಣಾ ಕನಿಕಿಕೊಡಿ, ಅರಭಾಂವಿ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ನಿಂಗಪ್ಪ ದೊಡಮನಿ, ಕಲ್ಲಪ್ಪ ಕುದರಿ, ಶಬ್ಬೀರ ತಾಂಬಿಟಗಾರ, ಇಬ್ರಾಹಿಂ ಮುಲ್ಲಾ, ಸಂಪತ್ ಕರಬನ್ನವರ, ನಾಗು ಕುದರಿ, ಸಂಜು ಹೊಸಕೋಟಿ ಮುಂತಾದವರು ಉಪಸ್ಥಿತರಿದ್ದರು.
****ಪಂಡಿತ ದೀನ ದಯಾಳ ಉಪಾಧ್ಯಯರ ಜನ್ಮಶತಾಭ್ದಿ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಎನ್‍ಎಸ್‍ಎಫ್ ಕಚೇರಿಯಲ್ಲಿ ಹಾಕಲಾಗಿದ್ದ ಬೃಹತ ಪರದೆಯ ಮೇಲೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರೊಂದಿಗೆ ವಿಕ್ಷಿಸಿದರು.
****ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ಸಂಪೂರ್ಣ ಗ್ರಾಮೀಣ ಉದ್ಯೋಗ ಯೋಜನೆ, ಅಂತ್ಯೋದಯ ಧಾನ್ಯ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ಕೃಷಿಕರ ಕ್ರೆಡಿಟ್ ವ್ಯವಸ್ಥೆ, ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಭಾರತದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದರು. ದೇಶದ ಅಭಿವೃದ್ದಿಯಲ್ಲಿ ವಾಜಪೇಯಿ ಅವರ ಕೊಡುಗೆ ಅಪಾರವಾಗಿದೆ. ಬಾಲಚಂದ್ರ ಜಾರಕಿಹೊಳಿ ಶಾಸಕರು ಅರಭಾವಿ

loading...

LEAVE A REPLY

Please enter your comment!
Please enter your name here