ಪಂತ್ ಟೀಂ ಇಂಡಿಯಾದ ಭವಿಷ್ಯದ ತಾರೆ: ದ್ರಾವಿಡ್

0
19

ನವದೆಹಲಿ:- ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲು ಆಯ್ಕೆಯಾಗಿರುವ ಭಾರತ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಬಗ್ಗೆ ಇಂಡಿಯಾ ‘ಎ’ ಕೋಚ್ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಯುಕೆ ಪ್ರವಾಸ ಕೈಗೊಂಡಿದ್ದ ಇಂಡಿಯಾ ‘ಎ’ ತಂಡದಲ್ಲಿದ್ದ ರಿಷಬ್ ಪಂತ್ ಅವರು ಉತ್ತಮ ಪ್ರದರ್ಶನ ನೀಡಿದ್ದರು. ವೆಸ್ಟ್ ಇಂಡೀಸ್ ಎ ಹಾಗೂ ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂತ್ ಅರ್ಧಶತಕ ಬಾರಿಸಿದ್ದರು.
ಕ್ರಿಕೆಟ್ ನ ಮೂರು ಮಾದರಿಗೂ ರಿಷಬ್ ಪಂತ್ ಅವರು ಒಗ್ಗಿಕೊಂಡು ಆಡುವ ಪ್ರತಿಭೆ ಹೊಂದಿದ್ದಾರೆ. ತ್ವರಿತಗತಿಯಲ್ಲಿ ರನ್ ಗಳಿಕೆ, ಆಕ್ರಮಣಕಾರಿ ಆಟವೊಂದೇ ರಿಷಬ್ ಪಂತ್ ಅವರ ಹೆಗ್ಗುರುತಲ್ಲ, ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟುವ ಛಾತಿಯನ್ನು ಹೊಂದಿದ್ದಾರೆ ಎಂದು ಬಿಸಿಸಿಐ.ಟಿವಿ ಜತೆ ಮಾತನಾಡುತ್ತಾ ದ್ರಾವಿಡ್ ಹೇಳಿದರು. 2016-17ರ ರಣಜಿ ಸೀಸನ್ ನಲ್ಲಿ 900 ಪ್ಲಸ್ ರನ್ ಗಳಿಸಿ, 100ಕ್ಕೂ ಅಧಿಕ ಸ್ಟ್ರೈಕ್ ರೇಟ್ ಹೊಂದಿದ್ದ ಪಂತ್ ಅವರು ಐಪಿಎಲ್ ನಲ್ಲೂ ತಮ್ಮ ಫಾರ್ಮ್ ಮುಂದುವರೆಸಿದರು.
ಇಂಡಿಯಾ ಎ ಪರ ಆಡುತ್ತಾ ಇಂಗ್ಲೆಂಡ್ ಲಯನ್ಸ್ ವಿರುದ್ಧ ತ್ರಿಕೋನ ಸರಣಿಯಲ್ಲಿ 64ರನ್ ಹಾಗೂ ವೆಸ್ಟ್ ಇಂಡೀಸ್ ಎ ವಿರುದ್ಧ ಜಯಂತ್ ಯಾದವ್ ಜತೆ 100ರನ್ ಜೊತೆಯಾಟವಾಡಿ ಇನ್ನಿಂಗ್ಸ್ ಕಟ್ಟಿದರು. ಇಂಡಿಯಾ ಎ ತಂಡದ ಯುಕೆ ಪ್ರವಾಸದಿಂದ ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕೃನಾಲ್ ಪಾಂಡ್ಯ, ಕರುಣ್ ನಾಯರ್ ಅವರು ಟೀಂ ಇಂಡಿಯಾಕ್ಕೆ ಮರಳಳು ಈ ರೀತಿ ‘ಶ್ಯಾಡೋ ಪ್ರವಾಸ’ ಅನುಕೂಲಕರ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.

loading...