ಪಕ್ವ ಮಾತು

0
52

ಮಡಿಕೇರಿಯಲ್ಲಿ ನಡೆದ 80 ನೇ ಅಖಿಲ ಸಾಹಿತ್ಯ ಸಮ್ಮೇಳನ ಅಧ್ಯಕ್ಷ  ನಾ. ಡಿಸೋಜಾ ಅವರು ಕನ್ನಡ ನಾಡಿನ ಘನತೆ, ಮಾನ ಮರ್ಯಾದೆ ಕಾಯುವಂತಹ  ಮಾತುಗಳನ್ನು  ಅತ್ಯಂತ ಪಕ್ವವಾಗಿ ಹೇಳಿದ್ದಾರೆ. ಅವರು ಉದ್ಘರಿಸಿದ ಕೆಲವು ಮಾತುಗಳನ್ನು ಕರ್ನಾಟಕ ಸರಕಾರ ಗಂಭೀರವಾಗಿ ತೆಗೆದುಕೊಂಡರೆ ರಾಜ್ಯದಲ್ಲಿ ಆರ್ಥಿಕ ತೊಂಧರೆ ಇರುವದಿಲ್ಲ ಜೊತೆಗೆ ಸಾಮಾಜಿಕ ಸಮಾನತೆ ಬದ್ಧತೆಯ ಅಂಶವು ಮಹತ್ವ ಪಡೆದುಕೊಳ್ಳುತ್ತದೆ. ಕಳೆದ 4 ದಶಕಗಳಲ್ಲಿ ಈ ಕುರಿತು ಯವ ರಾಜ್ಯ ಸರಕಾರವೂ ಆಲೋಚನೆ ಮಾಡಿಲ್ಲ. ಶಾಲಾ ಮಕ್ಕಳಿಗೆ ಸೌಲಭ್ಯ ಒದಗಿಸುವ ನೆಪದಲ್ಲಿ ಸಾಕಷ್ಟು ಹಣ ಪೋಲೋ ಮಾಡುತ್ತಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಸಮುದಾಯಗಳನ್ನು ಭಿಕ್ಷುಕರ ಸಾಲಿನನಲ್ಲಿ ನಿಲ್ಲಿಸಿದೆ ಎಂದು ಹೇಳಿದ ನಾ. ಡೀಸೋಜಾ ಸರಕಾರ ಈ ಕ್ರಮವು ಕನ್ನಡಿಗರ ಆತ್ಮಾಭಿಮಾನಕ್ಕೆ ತೀವ್ರ ಧಕ್ಕೆ ಉಂಟು ಮಾಡಿದೆ ಎಂಬ ಅವರ ಮಾತಿನಲ್ಲಿ ಸತ್ಯಾಂಶ ಅಡಗಿದೆ.  ಯಾವುದೆ ರಾಜಕಾರಣಿ ಇದನ್ನು ಹೃದಯ ಪೂರ್ವಕವಾಗಿ ಸ್ವಾಗತ ಮಾಡಿದರೆ  ರಾಜ್ಯದಲ್ಲಿ  ಸಮಾನತೆಯ ಭಾವ ಮೂಡಿ  ಅಂಗಲಾಚುವ ವ್ಯವಸ್ಥೆಗೆ ಗುಡ್ ಬೈ ಹೇಳುವದು ಸಾಧ್ಯವೂ ಅನಿವಾರ್ಯವೂ ಆಗಬಹುದು. ನಿಜವಾಗಿಯೂ ಸರಕಾರ ಅನ್ನಭಾಗ್ಯದಂತ

ಹ ಜನಪ್ರೀಯ ಚಿಲ್ಲರೆ ಯೋಜನೆಯನ್ನು ಜಾರಿಗೆ ತಂದು ಹಾಗೂ ಉದ್ಯೌಗ ಖಾತ್ರಿ ಯೋಜನೆಯನ್ನು ಜನರ  ಮೈಯೊಳಗೆ ಇಂಜೆಕ್ಟ್ ಮಾಡಿ ಜನರು ಸೋಮಾರಿಗಳು ಆಗುವಂತೆ ಮಾಡಿರುವದು ಅತ್ಯಂತ ಕಟ್ಟು ಸತ್ಯ. ಖಾತ್ರಿ ಯೋಜನೆ ಜಾರಿಯಾದಾಗ ಜನ ದುಡಿಯುವದನ್ನೆ ಮರೆತರು. ರೈತಾಪಿ ಜನ ಹೊಲಗಳನ್ನು ಬಿಟ್ಟು ಬರದ ನೆಪದಲ್ಲಿ ಉದ್ಯೌಗ ಖಾತ್ರಿಗೆ ಶರಣಾಗಿ ತಿಂಗಳಿಗೊಮ್ಮೆ ದೊರುಕುವ ಅನಾಯಾಸ ವೇತನ ನಂಬಿ ಬದುಕು ಸಾಗಿಸತೊಡಗಿದರು. ಅನ್ನಭಾಗ್ಯ ಯೋಜನೆ ರಾಜ್ಯದಲ್ಲಿ ಜಾರಿಯಾದ ನಂತರ ದುಡಿಯುವ ಕೈಗಳಿಗೆ ಸಂಪೂರ್ಣ ರಜೆ ದೊರಕಿದಂತೆ ಆಗಿದೆ. ಪ್ರಾಯಶಃ ಭವಿಷ್ಯದಲ್ಲಿ ಈ ಭಾಗ್ಯಗಳನ್ನು ನಂಬಿದ ಜನರನ್ನು ಮತ್ತೆ ಕೆಲಸಕ್ಕೆ ಅನಿಗೊಳಿಸುವದು ತುಂಬ ಕಷ್ಟಕರ ಕಾರ್ಯ. ಇದನ್ನು ಸರಕಾರ ಮೊದಲೇ ಯೋಚಿಸಿ ಭಾಗ್ಯಗಳ ಸರಣಿಯನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಈ ದಿಶೆಯಲ್ಲಿ ರಾಜ್ಯ ಸರಕಾರವಾಗಲಿ ಕೇಂದ್ರ ಸರಕಾರವಾಗಲಿ ಯಾವುದೇ ರೀತಿಯ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದಿರುವದು ದುರದುಷ್ಟಕರ ಈಗಲೂ ಕಾಲ ಮಿಂಚಿಲ್ಲ ಸಾಲ ಮಾಡಿ ಬೇರೆ ರಾಝ್ಯಗಳಿಂದ ಅಕ್ಕಿಯನ್ನು ತರೆಸಿ ಇಲ್ಲಿ ರೂಪಾಯಿ ಲೆಕ್ಕದಲ್ಲಿ ಮಾರುವ ಇದ್ದರಿಂದ ರಾಜ್ಯದ ಭೊಕ್ಕಸಕ್ಕೆ  ಭಾರೀ ನಷ್ಟ ಉಂಟು ಮಾಡುವ ಯೋಜನೆಯನ್ನು ತಕ್ಷಣವೇ ಹಿಂದೆ ತೆಗೆದುಕೊಳ್ಳಬೇಕು ಈ ಸಂದರ್ಭದಲ್ಲಿ ನಾ, ಡಿಸೋಜಾ ಭಾಗ್ಯಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಯೋಗ್ಯವೇ ಆಗಿದೆ.

loading...

LEAVE A REPLY

Please enter your comment!
Please enter your name here