ಪಪಂ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಶಾಸಕ ಆಚಾರ್ ವಿಶ್ವಾಸ

0
18

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಮುಂಬರುವ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಸಂದೇಹ ಬೇಡ ಎಂದು ಶಾಸಕ ಹಾಲಪ್ಪ ಆಚಾರ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಬಿಜೆಪಿ ಯಲಬುರ್ಗಾ ಮಂಡಳದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಯಲಬುರ್ಗಾ ಪಟ್ಟಣವನ್ನು ಅಭಿವೃದ್ಧಿ ಪಡಿಸುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ಆಡಳಿತ ವಿರೋಧಿ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಕಲಿಸಿದ ಸೋಲಿನ ರುಚಿ ಯಲಬುರ್ಗ ಪಟ್ಟಣದ ಸಾರ್ವಜನಿಕರು ಮತ್ತೆ ಸೋಲಿಸುತ್ತಾರೆಂಬ ವಿಶ್ವಾಸವಿದ್ದು, ಈ ನಿಟ್ಟಿನಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಯಾಗಿ ಎಲ್ಲ 15 ವಾರ್ಡುಗಳ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಈ ತಾಲೂಕನ್ನು 30 ವರ್ಷದಿಂದ ಆಳಿದ ಬಸವರಾಜ ರಾಯರೆಡ್ಡಿ ಅವರು ತಮ್ಮ ಸೋಲಿನಿಂದ ಹತಾಶೆ ಮನೋಭಾವನೆಯಿಂದ ಮಾತನಾಡುತ್ತಿದ್ದಾರೆ. ಮಾತಿನಲ್ಲಿ ಹಿಡಿತದಿಂದ ಮತ್ತು ಬದ್ಧತೆಯಿಂದ ಮಾತನಾಡಬೇಕು. ಜನನಾಯಕರಾದವರು ಜನರ ಮಧ್ಯೆ ಬೆಳೆದು, ಅವರ ವಿಶ್ವಾಸಕ್ಕೆ ಅರ್ಹರಾಗಿ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುವಂತಹ ಕೆಲಸ ಮಾಡಿದಾಗ ಜನರು ನಮ್ಮನ್ನು ಪ್ರೀತಿಯಿಂದ ಕಾಣುತ್ತಾರೆ. ಇಲ್ಲಿದಿದ್ದರೆ ಕಾಂಗ್ರೆಸ್ ಕಸವನ್ನು ಹೇಗೆ ಕಿತ್ತು ಹಾಕುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ವಿರುದ್ಧ ಶಾಸಕ ಹಾಲಪ್ಪ ಆಚಾರ್ ವಾಗ್ದಾಳಿ ನಡೆಸಿದರು.
ರತನ ದೇಸಾಯಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಪಾಟೀಲ್, ಹಿರಿಯ ಮುಖಂಡರಾದ ಬಸವಲಿಂಗಪ್ಪ ಭೂತೆ, ಸಿ.ಎಚ್.ಪೊಲೀಸ್ ಪಾಟೀಲ್, ಶಿವನಗೌಡ ಬನಪ್ಪಗೌಡ್ರ, ವೀರಣ್ಣ ಹುಬ್ಬಳ್ಳಿ, ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣನವರ್, ತಾಪಂ ಸದಸ್ಯ ಶರಣಪ್ಪ ಈಳಗೇರ, ಪ್ರಭುರಾಜ ಕಲಬುರ್ಗಿ, ಶಕುಂತಲಾದೇವಿ ಮಾಲಿಪಾಟೀಲ್, ಅರವಿಂದಗೌಡ ಪಾಟೀಲ್, ಶರಣಪ್ಪ ಬಣ್ಣದಭಾವಿ, ಶಿವಕುಮಾರ ನಾಗಲಾಪೂರಮಠ, ಅಂದಯ್ಯ ಕಳ್ಳಿಮಠ, ವೀರಭದ್ರಪ್ಪ ಅವಾರಿ, ಸುರೇಶಗೌಡ ಶಿವನಗೌಡ, ಸಿದ್ರಾಮೇಶ ಬೇಲೇರಿ, ವಸಂತ ಭಾವಿಮನಿ, ಷಣ್ಮುಖಪ್ಪ ರಾಂಪೂರು, ಈರಪ್ಪ ಬಣಕಾರ, ಶಿವನಂದ ಬಣಕಾರ ಇದ್ದರು.

loading...