ಪರಿಸರ ಮಾಲಿನ್ಯದಿಂದ ದುಷ್ಪರಿಣಾಮ-ರಾಜು ಕಾಗೆ

0
30

 

ಅಥಣಿ 17- ಪರಿಸರ ಮಾಲಿನ್ಯದಿಂದ ಆಗುವ ದುಷ್ಪರಿ ಣಾಮ ಕುರಿತು ಸಾರ್ವಜನಿಕ ರಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕಾಗ ವಾಡ ಶಾಸಕ ರಾಜು ಕಾಗೆ ಹೇಳಿದರು.

ತಾಲೂಕಿನ ಐನಾಪೂರ ಗ್ರಾಮದಲ್ಲಿಯ ಶ್ರೀ ಸಿದ್ದೇಶ್ವರ ಮಾಳಿ ಸಮಾಜದ ವತಿಯಿಂದ ಬಸವ ಜ್ಯೌತಿ ಸಾಂಸ್ಕ್ಕತಿಕ ಭವನದಲ್ಲಿ ಏರ್ಪಡಿಸಿದ್ದ ವನಮಹೋತ್ಸವ ಕಾರ್ಯಕ್ರಮ ದಲ್ಲಿ ಸನ್ಮಾನ ಸ್ವೀಕರಿಸಿ ಮಾತ ನಾಡಿದರು.ಪರಿಸರ ನಾಶ ಹೆಚ್ಚಾಗುತ್ತಿರುವ ಮಾಲಿನ್ಯದಿಂದ ನೀರಿನ ಕೊರತೆ ಉಂಟಾಗಿದೆ ಎಂದು ಜಿ.ಪಂ. ಮಾಜಿ ಸದಸ್ಯ ಚಂದ್ರಶೇಖರ ಗಾಣಿಗೇರ ಮಾತನಾಡಿದರು. ಮಾಜಿ ತಾ.ಪಂ. ಅಧ್ಯಕ್ಷ ಚಿದಾನಂದ ಡೂಗನವರ ಮಾತನಾಡಿದರು. ಕಾಗವಾಡ ಬ್ಲಾಕ್ ಬಿಜೆಪಿ ಅಧ್ಯಕ್ಷ ಗಜಾನನ ಯರಡೋಲಿ, ಮಾಜಿ ಗ್ರಾ.ಪಂ. ಅಧ್ಯಕ್ಷ ಶಿವನಗೌಡಾ ಪಾಟೀಲ, ಶಿವಶಂಕರ ಕಾಗಲಿ ಉಪಸ್ಥಿತರಿದ್ದರು.

ಮಾಳಿ ಸಮಾಜದ ಅಧ್ಯಕ್ಷ ಸುರೇಶ ಕಾಗಲಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪ್ರೊ. ಜ್ಞಾನೇಶ್ವರ ಪಿರಾಜ ಕಾರ್ಯಕ್ರಮ ನಿರೂಪಿಸಿದರು. ಮಲ್ಲಿಕಾರ್ಜುನ ಬಾಳಿಕಾಯಿ ವಂದಿಸಿದರು.

loading...

LEAVE A REPLY

Please enter your comment!
Please enter your name here