ಪರಿಸರ ಸಂರಕ್ಷಣೆ ಅವಶ್ಯ

0
90

ರಾಮದುರ್ಗಃ ಪ್ರತಿಯೊಬ್ಬರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಯೋಗ ಪದ್ದತಿಯನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆಯೋ, ಅದರಂತೆ ತಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡಿ ಸಮಾಜದಲ್ಲಿ ಸಸಿಗಳನ್ನು ನಟ್ಟು ತಮ್ಮ ಮಗುವಿನಂತೆ ಮರಗಳನ್ನು ಬೆಳಸಿದಾಗ ಮಾತ್ರ ಎಲ್ಲರೂ ಆರೋಗ್ಯದಿಂದರಲು ಸಾಧ್ಯವಾಗುತ್ತದೆ ಎಂದು ಭಾರತ ಸ್ವಾಭಿಮಾನ ಟ್ರಷ್ಟ ಅಧ್ಯಕ್ಷ ರಾಜೇಶ ಬೀಳಗಿ ಅಭಿಮತ ವ್ಯಕ್ತ ಪಡಿಸಿದರು.

ಪಟ್ಟಣದ ಬಸವೇಶ್ವರ ಶಾಲಾ ಆವರಣದಲ್ಲಿ ವಿಶ್ವಯೋಗ ದಿನಾಚರಣೆಯ ನಿಮಿತ್ಯವಾಗಿ ಪತಂಜಲಿ ಯೋಗ ಸಮೀತಿ, ಭಾರತ ಸ್ವಾಭಿಮಾನ ಟ್ರಷ್ಟ ರಾಮದುರ್ಗ,ಹಾಗೂ ಬೆಳಗಾವಿ ಇವರ ಸಹಯೋಗದಲ್ಲಿ ಐದು ದಿನಗಳ ಕಾಲ ಹಮ್ಮಿಕೊಂಡ ಯೋಗದಿನಾಚರಣೆ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮದುರ್ಗ ನಗರವಾಸಿಗಳು ಹಾಗೂ ಗ್ರಾಮೀಣ ಭಾಗದ ಜನರು ತಮ್ಮ ಆರೋಗ್ಯ ಸಮೃದ್ದಿಯಿಂದರಲು ಯೋಗ ಅವಶ್ಯವಾಗಿದೆ ಆದ್ದರಿಂದ ಪಟ್ಟಣ ಎಲ್ಲವಾರ್ಡಗಳಲ್ಲಿ ನಾವು ಯೋಗ ತರಬೇತಿ ನೀಡಲು ನಮ್ಮ ತಂಡ ಸಿದ್ದವಿದೆ, ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮಾಜಿ ಪುರಸಭೆ ಅಧ್ಯಕ್ಷ ಶಿವಯೋಗಿ ಚಿಕ್ಕೋಡಿ ಮಾತನಾಡಿ, ಸ್ವಾಭಿಮಾನ ಟ್ರಷ್ಟಬ ತಂಡದವರು ಎಲ್ಲರ ಆರೋಗ್ಯ ರಕ್ಷಣೆಗೆ ಯೋಗ ತರಬೇತಿ ನೀಡಿದ್ದಾರೆ. ಹಾಗೂ ಪರಿಸರ ಸಂರಕ್ಷಣೆ ಮಾಡುವ ಸಲುವಾಗಿ ಸಸಿ ವಿತರಣೆ ಮಾಡುತ್ತಿರುವುದ ಅಧ್ಬುತ ಕಾರ್ಯಕ್ರಮ ಕಾರಣ ಮುಂಬರು ದಿನಗಳಲ್ಲಿ ರಾಮದುರ್ಗ ನಗರವನ್ನು ಹಸಿರು ನಗರವನ್ನಾಗಿ ಮಾಡಲು ಪುರಸಭೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಸಾರ್ವಜನಿಕರಿಗೆ ಭರವಸೆ ನೀಡಿದರು.
ಯೋಗ ಶಿಕ್ಷಕ ರೇವಣಪ್ಪ ಕೋಟಾರವರನ್ನು ಈ ಸಂದರ್ಬದಲ್ಲಿ ಸನ್ಮಾನಿಸಲಾಯಿತು. ವಿರುಪಾಕ್ಷಪ್ಪ ಗಂಗಣ್ಣವರ, ಶಂಕರಲಾಲ ಡುಮಾವುತ, ಗಂಗಾಧರ ನಿಜಗುಲಿ, ರಾಜಶೇಖರ ಜಿರಂಕಳಿ, ಮಹೇಶ ಕಲ್ಯಾಣಿ, ಲತಾ ಪಟ್ಟಣ, ನೀತಾ ಬೀಳಗಿ,ಅನ್ನಪೂರ್ಣ ಜಿರಂಕಳಿ,ಪುರಸಭೆಯ ಸದಸ್ಯೆ ಜ್ಯೋತಿ ಸಜ್ಜನ ಪಂಕಜಾ ಕೊಣ್ಣೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುರೇಶ ಕಲ್ಲೂರ ಕಾರ್ಯಕ್ರಮ ನಿರೂಪಿಸಿದರು, ಎಂ,ಎಸ್.ಕಿತ್ತಲಿ ವಂದಿಸಿದರು.

loading...