ಕನ್ನಡಮ್ಮ ಸುದ್ದಿ-ನರಗುಂದ: ಪ್ಲಾಸ್ಟರ್ ಆಫ್ ಪ್ಯಾರೀಸ್, ರಾಸಾಯನಿಕ ಗಣೇಶ ಮೂರ್ತಿಗಳನ್ನು ತಯಾರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ ಆದೇಶವಿದೆ. ಇಂತಹ ಗಣೇಶ ಮೂರ್ತಿಗಳನ್ನು ಸಿದ್ದಪಡಿಸುವ ತಯಾರಕರ ಮೇಲೆ ಕಾನೂನು ಪ್ರಕಾರ ಕ್ರಿಮಿನಲ್ ಕೇಸ್ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಜೇಡಿ ಮಣ್ಣಿನಿಂದ ರಚಿಸಿ ಮಾರಾಟಮಾಡಬೇಕೆಂದು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಬಿ. ರುದ್ರೇಶ ಸೂಚಿಸಿದರು.
ಮುಂಬರುವ ಗಣೇಶ ಹಬ್ಬದ ಪ್ರಯುಕ್ತ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣೇಶ ಮೂರ್ತಿ ತಯಾರಕ ಕಲಾವಿದರ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ವರ್ಷ ಗದಗ ಜಿಲ್ಲೆಯ ಮುಂಡರಗಿ, ರೋಣ, ನರೇಗಲ್ನಲ್ಲಿ ಪ್ರತಿಷ್ಠಾಪಿಸಿದ ಮತ್ತು ಮಾರಾಟಮಾಡುವ ಪಿಓಪಿ ಗಣೇಶ ಮೂರ್ತಿಗಳನ್ನು ಜಿಲ್ಲಾ ಮಾಲಿನ್ಯ ನಿಯಂತ್ರಣಮಂಡಳಿ ದಾಳಿಮಾಡಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡು ಅಂತವರ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ಈ ಭಾರಿಯೂ ಮಾಲಿನ್ಯ ನಿಯಂತ್ರಮಂಡಳಿ ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಸಂಚರಿಸಿ ಪರಿಶೀಲನೆ ನಡೆಸಲಾಗುವುದು. ರಾಸಾಯಾನಿಕದಿಂದ ತಯಾರಿಸಿದ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ದ ಗಣೇಶ ಮೂರ್ತಿಗಳನ್ನು ಕೆರೆ ಕಟ್ಟೆ ಮತ್ತು ಬಾವಿಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲಚರಗಳು ಹಾನಿಯಾಗುತ್ತಿವೆ. ಜನತೆಯ ಆರೋಗ್ಯವೂ ಹಾಳಾಗುತ್ತಿರುವುದರಿಂದ ಇಂತಹ ಗಣೇಶ ಮೂರ್ತಿ ರಚನೆಮಾಡುವುದು ತಪ್ಪು ಎಂದು ತಿಳಿಸಿದರು.ನರಗುಂದ ತಾಲೂಕಿನಲ್ಲಿ ಅನೇಕ ಗಣೇಶ ಮೂರ್ತಿ ಕಲಾವಿದರಿದ್ದಾರೆ. ಯಾರು ಲೈಸೆನ್ಸ್ ಪಡೆದುಕೊಂಡಿಲ್ಲ. ಈ ಭಾರಿ ಕಡ್ಡಾಯವಾಗಿ ಲೈಸೆನ್ಸ್ನ್ನು ಪುರಸಭೆಯಿಂದ ಪಡೆದುಕೊಳ್ಳಬೇಕು. ಲೈಸೆನ್ಸ್ ಇರದೇ ಗಣೇಶ ಮೂರ್ತಿ ಮಾರಾಟಗೊಳಿಸುವ ಯಾವುದೇ ಮಾಹಿತಿ ಬಂದಲ್ಲಿ ಅಂತವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಮಹರಾಷ್ಟ, ಸಾಂಗಲಿ, ಹಾಗೂ ಸೊಲ್ಲಾಪುರ ಅನೇಕ ಭಾಗಗಳಿಂದ ಪಿಓಪಿ ಗಣೇಶಮೂರ್ತಿಗಳನ್ನು ನರಗುಂದ ಪಟ್ಟಣಕ್ಕೆ ತಂದು ಮಾರಾಟಮಾಡಲಾಗುತ್ತಿದೆ ಎಂಬಮಾಹಿತಿ ಇದೆ. ಈ ಭಾರಿ ಅಂತಹ ಮಾರಾಟಗಾರರ ಮೇಲೆ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು. ಅ.6 ರಂದು ಗದಗದಲ್ಲಿ ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಗಣೇಶ ಹಬ್ಬದ ನಿಮಿತ್ತ ಕೈಗೊಳ್ಳಲಾಗುವ ಕ್ರಮಗಳ ಕುರಿತು ವಿವರ ನೀಡಿದ್ದು. ಆ ನಿಯಮ ಪಾಲನೆ ಮಾಡಲು ತಾಲೂಕ ಆಡಳಿತ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.ಸಿಪಿಐ ಶ್ರೀನಿವಾಸ ಮೇಟಿ ಮಾತನಾಡಿದರು. ಸಭೆಯಲ್ಲಿ ವಿ.ಬಿ, ಮಣ್ಣೂರ, ಎಚ್.ಎಲ್. ಲಿಂಗನಗೌಡ್ರ, ಪ್ರವೀಣ ಗೌಡ್ರ, ವಿಜಯ ಮೊರಬದ, ವಿನಾಯಕ ಎಸ್.ಜಿ. ನಾಗರಾಜ ಚಿತ್ರಗಾರ, ಮಂಜು ಚಿತ್ರಗಾರ, ಆನಂದ ಬನಪ್ಪನವರ, ಹನುಮಂತ ಸಿದ್ದನ್ನವರ, ರವೀದ್ರ ಬಡಿಗೇರ, ರಾಘವೇಂದ್ರ ಚಿತ್ರಗಾರ, ಶಂಕರ ಚಿತ್ರಗಾರ, ಶರಣು ಶಿಲ್ಪಿ, ಯೋಗಾನಂದ ಬಡಿಗೇರ, ಬಸವರಾಜ ಮುಳ್ಳೂರ, ಎಸ್.ಬಿ. ಪತ್ತಾರ, ವಿಕ್ರಮ ವ್ಹಿ.ಬಿ ಇದ್ದರು.
loading...