ಪಶು ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ

0
207

 

ಖಾನಾಪುರ: ತಾಲೂಕಿನ ಭೂರಹಿತ, ಸಣ್ಣ ಹಾಗೂ ಅತಿ ಸಣ್ಣ ರೈತರಿಂದ ಪಶು ಭಾಗ್ಯ ಯೋಜನೆಯಡಿ ಪಶು ಸಂಗೋಪನೆ ಹಾಗೂ ಕುರಿ ಸಾಕಾಣಿಕೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯಡಿ ಪಶು ಸಂಗೋಪನೆಗೆ ಎರಡು ರಾಸುಗಳ ಖರೀದಿ, ಸಾಗಾಣಿಕೆ, ಒಂದು ತಿಂಗಳ ಪಶು ಆಹಾ ವೆಚ್ಚ, ಮೇವು ಬೆಳೆಯುವುದು ಸೇರಿದಂತೆ ಒಟ್ಟು 1.20 ಲಕ್ಷ ವೆಚ್ಚ ಮಾಡಲು ಹಾಗೂ ಕುರಿ ಸಾಕಾಣಿಕೆಗೆ 10 ಕುರಿ, 1 ಮೇಕೆಗಳ ಖರೀದಿ, ಆಹಾರ ವೆಚ್ಚಗಳು ಸೇರಿದಂತೆ ಒಟ್ಟು 0.67 ಲಕ್ಷ ವೆಚ್ಚ ಮಾಡಲು ಅವಕಾಶವಿದೆ. ಜೊತೆಗೆ ಕೊಟ್ಟಿಗೆ ಮತ್ತು ಕುರಿ ದೊಡ್ಡಿ ನಿರ್ಮಾಣಕ್ಕೆ ಉದ್ಯೋಗ ಖಾರತಿ ಯೋಜನೆಯಡಿ ಸಹಾಯಧನವನ್ನು ಪಡೆಯಬಹುದಾಗಿದೆ.
ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡ, ಅಲ್ಪಸಂಖ್ಯಾತ, ಮಹಿಳೆ, ಅಂಗವಿಕಲ ಹಾಗೂ ಸಾಮಾನ್ಯ ಫಲಾನುಭವಿಗಳಿಗೆ ಹೈನುಗಾರಿಕೆಗೆ 25 ಹಾಗೂ ಕುರಿ ಸಾಕಾಣಿಕೆಗೆ 27 ಸೇರಿದಂತೆ ಒಟ್ಟು 52 ಫಲಾನುಭವಿಗಳನ್ನು ಆಯ್ಕೆ ಮಾಡಲು ಅವಕಾಶವಿದ್ದು, ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಶೇ.50 ಹಾಗೂ ಇತರರಿಗೆ ಶೇ.25ರಷ್ಟು ಸಹಾಯಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಅ.1 ರಿಂದ ಅ.5ರ ವರೆಗೆ ಅವಕಾಶವಿದ್ದು, ಆಸಕ್ತರು ಅರ್ಜಿಯೊಂದಿಗೆ ಆಧಾರ ಕಾರ್ಡ್, ರೇಶನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಭೂರಹಿತ, ಸಣ್ಣ ಹಾಗೂ ಅತಿ ಸಣ್ಣ ರೈತರ ಪ್ರಮಾಣಪತ್ರ ಹಾಗೂ ಜಾತಿ ಪ್ರಮಾಣಪತ್ರದ ಪ್ರತಿಗಳನ್ನು ಪಟ್ಟಣದ ಪಶು ಆಸ್ಪತ್ರೆಯಲ್ಲಿ ದ್ವಿಪ್ರತಿಯಲ್ಲಿ ಸಲ್ಲಿಸಬೇಕೆಂದು ಪಶು ಸಂಗೋಪನೆ ಮತ್ತು ಪಶು ಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುರಾಜ ಮನಗೂಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here