ಪಾಕಿಸ್ತಾನದಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ತ್ರಿವರ್ಣ ದೀಪಾಲಂಕಾರ

0
28

ಇಸ್ಲಾಮಾಬಾದ್​: ದೇಶÀ ೭೨ನೇ ಸ್ವಾತಂತ್ರ‍್ಯ ದಿನಾಚರಣೆ ಸಂಭ್ರಮದಲ್ಲಿದೆ ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿರುವ ಇಂಡಿಯನ್​ ಹೈ ಕಮಿಷನ್​ ಕಚೇರಿಯ ಕಟ್ಟಡಗಳಿಗೆ ತ್ರಿವರ್ಣ ಧ್ವಜದ ದೀಪಾಲಂಕಾ ಮಾಡಿ ಶೃಂಗಾರ ಮಾಡಿದ್ದು ಕಂಡು ಬಂದಿದೆ.

ಮಂಗಳವಾರ ಪಾಕಿಸ್ತಾನವು ೭೨ನೇ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂಡಿಯನ್​ ಹೈ ಕಮಿಷನ್​ ಅಧಿಕಾರಿ ಅಜಯ್​ ಬಿಸ್ರಾ ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್ ಖಾನ್​ ಅವರಿಗೆ ಭಾರತ ಕ್ರಿಕೆಟ್​ ತಂಡದ ಆಟಗಾರರ ಆಟೋಗ್ರಾಫ್​ ಇರುವ ಬ್ಯಾಟ್​ನ್ನು ಗಿಫ್ಟ್​ ಆಗಿ ನೀಡಿದ್ದರು. ಅಲ್ಲದೆ ಇಂದು ನಮ್ಮ ದೇಶದ ಸ್ವಾತಂತ್ರ‍್ಯೊತ್ಸವ ಸಂಭ್ರಮದ ಕಾರಣ ಪಾಕ್​ನಲ್ಲಿ ಇಂಡಿಯನ್​ ಹೈ ಕಮಿಷನ್​ ಕಚೇರಿಗೆ ಅಲಂಕಾರ ಮಾಡಲಾಗಿದೆ.

ಅಲ್ಲದೆ ವಾಘಾ ಗಡಿಯಲ್ಲಿ ಪಾಕ್​ ಹಾಗೂ ಭಾರತದ ಸೈನಿಕರು ಪರಸ್ಪರ ಸಿಹಿ ಹಂಚುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡಿದ್ದರು. ಇನ್ನು ಸ್ವಾತಂತ್ರ‍್ಯೊತ್ಸವ ಹಿನ್ನೆಲೆಯಲ್ಲಿ ಪಾಕಿಸ್ತಾನವು ಭಾರತದ ೩೦ ಕೈದಿಗಳನ್ನು ಬಿಡುಗಡೆಗೊಳಿಸಿದೆ, ಅದರಲ್ಲಿ ೨೭ ಜನ ಮೀನುಗಾರರೂ ಸೇರಿದ್ದಾರೆ.

loading...