ಪಾಕ್ ಸಾರ್ವತ್ರಿಕ ಚುನಾವಣೆ: ಬಿಗಿ ಭದ್ರತೆ

0
9

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು ಭಾರೀ ಭದ್ರತೆ ಕಲ್ಪಿಸಲಾಗಹಿದೆ.
ರಾಷ್ಟ್ರೀಯ ಅಸ್ಲೆಂಬಿಯ ಒಟ್ಟು 272 ಸ್ಥಾನಗಳಿಗೆ ಒಟ್ಟು 3,459 ಅಭ್ಯರ್ಥಿಗಳು ಕಣದಲ್ಲಿದ್ದು ಮತದಾನದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ನವಾಜ್ ಷರೀಫ್ ಪಕ್ಷವು ಇತರ ಪಕ್ಷಗಳು ಮತ್ತು ಸ್ವತಂತ್ರ್ಯ ಅಭ್ಯರ್ಥಿಗಳೊಂದಿಗೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನೊಂದು ಸಮೀಕ್ಷೆ ಪ್ರಕಾರ, ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನವಾಜ್ ಪಕ್ಷಕ್ಕೆ ದೊಡ್ಡ ಕಳಂಕ ಅಂಟಿಕೊಂಡಿದ್ದು. ಅದು ಇಮ್ರಾನ್ ನೇತೃತ್ವದ ಪಿಟಿಐಗೆ ವರದಾನವಾಗಲಿದೆ.
ಇಮ್ರಾನ್ ಈ ಬಾರಿ ಜಯ ಸಾಧಿಸಿ ದೇಶದ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ.

loading...