ಪಾರದರ್ಶಕವಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ: ಸಚಿವ ದೇಶಪಾಂಡೆ

0
23

ಕನ್ನಡಮ್ಮ ಸುದ್ದಿ-ಕೊಪ್ಪಳ: ಜಿಲ್ಲೆಯಲ್ಲಿ ಮಳೆ ಇಲ್ಲದೆ ಹಾನಿಯಾದ ಬೆಳೆಗಳನ್ನು ಅಧಿಕಾರಿಗಳು ಡ್ರೋನ್ ಕ್ಯಾಮರಾ ಬಳಸಿ ಪಾರದರ್ಶಕವಾಗಿ ಸಮೀಕ್ಷೆ ನಡೆಸಿ ನೈಜ ಚಿತ್ರಣ ಅ.29ರೊಳಗೆ ಸರಕಾರಕ್ಕೆ ಸಲ್ಲಿಸಬೇಕು ಎಂದು ಕಂದಾಯ ಸಚಿವ ಆರ್.ವಿ ದೇಶಪಾಡೆ ಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲೆಯ ಯಲಬುರ್ಗಾ ತಾಲೂಕು ಬಾಣಾಪೂರ ಪ್ರವಾಸಿ ಮಂದಿರದಲ್ಲಿ ಬುಧವಾರ ಅಧಿಕಾರಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಬೆಯಲ್ಲಿ ಕೈಷಿ ಇಲಾಖೆ ಜಂಟಿ ನಿರ್ದೇಶ ಹೊನ್ನಪ್ಪಗೌಡ ಮಾತನಾಡಿ, ಮುಂಗಾರು ಅಂಗಾಮಿನಲ್ಲಿ ಮಳೆ ನೀರೀಕ್ಷೆಗೆ ಮೀರಿ ಚೆನ್ನಾಗಿ ಸುರಿಯಿತು. ಆದರೆ ಇದರ ವಿಶ್ವಾಸದಿಂದ ಜಿಲ್ಲೆಯಲ್ಲಿ ಸುಮಾರು 2.52ಲಕ್ಷ ಹೇಕ್ಟರ್ ಬಿತ್ತನೆ ಗುರಿಯಲ್ಲಿ ಸುಮಾರು 2.20ಲಕ್ಷ ಹೇಕ್ಟರ್ ಬಿತ್ತನೆಯಾಗದೆ. ಆದರೆ ಬಿತ್ತನೆಯಾದ ನಂತರ ಮಳೆ ಕೈಕೊಟ್ಟಿದ್ದರಿಂದ ಬೆಳೆ ಬಾಡಲಾರಂಬಿಸಿದೆ. ಆದರೆ ಈಗ ಮಳೆಯಾದರೂ ಕೂಡ ಬೆಳೆಗಳು ಕೈಗೆ ಬರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರೀಯಿಸಿದ ಸಚಿವ ದೇಶಪಾಂಡೆ, ಮಳೆಯ ಮುನಿಸಿನಿಂದಾಗಿ ಯಾರು ಏನು ಮಾಡಲು ಆಗುವುದಿಲ್ಲ ಕೂಡಲೇ ಕಂದಾಯ ಇಲಾಖೆ. ಕೃಷಿ ಇಲಾಖೆ. ತೋಟಗಾರಿಕೆ ಇಲಾಖೆ, ಸೇರಿದಂತೆ ಜಂಟಿಯಾಗಿ ಬೆಳೆ ಹಾನಿಯಾಗಿರುವ ಕುರಿತು ಸಮೀಕ್ಷೆ ನಡೆಸಿ ಕೇಂದ್ರ ಸರಕಾರ 2016ರಲ್ಲಿ ಕೆಲವು ಗೈಡ್‍ಲೈನ್‍ನ್ನು ನೀಡಿದೆ. ಅದರ ಆಧಾರದ ಮೇಲೆ ಸಮೀಕ್ಷೆ ನಡೆಸಬೇಕು ಯಾವ ರೈತರಿಗೆ ಅನ್ಯಾಯಗವಾದಂತೆ ಮ್ಯಾನುವಲ್ ಜೋತೆ ಡ್ರೋನ್ ಕ್ಯಾಮರಾ ಬಳಸಿ ಪಾರದರ್ಶಕತೆಯಿಂದ ಸಮೀಕ್ಷೆ ನಡೆಸಬೇಕು. ನಂತರ ಅ.31ರಂದು ನಡೆಯುವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಂಡು ಮುಂದಿನ ಕ್ರಮ ಐಗೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಬರಗಾಲ ಆವಇಸುತ್ತಾ ಬಂದಿದೆ. ಈಗಾಗಿ ಕೂಲಿಕಾರ್ಮಿಕರಿಗೆ ಜನರಿಗೆ ಕಾರ್ಮಿಕರಿಗೆ ರೈತರಿಗೆ ಕೆಲಸವಿಲ್ಲದೆ ಗೂಳೆ ಹೋಗುತ್ತಿದ್ದಾರೆ ಉದ್ಯೋಗ ಖಾಂತ್ರಿ ಕುರಿತು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಇದರಿಂದ ಕಾರ್ಮಿಕರು ಗತಿ ಏನು ಎಂದು ಶಾಸಕ ಹಾಲಪ್ಪ ಆಚಾರ್ ಆರೋಪಿಸಿದರು.
ಇದಕ್ಕೆ ಸಚಿವ ದೇಶಪಾಂಡೆ ಪ್ರತಿಕ್ರಿಯಿಸಿ, ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಜನಪ್ರತನಿಧಿಗಳ ಕುರಿತು ಒಂದು ಸಭೆ ಹೊಸ ಕ್ರೀಯಾ ಯೋಜನೆ ಮಾಡಿ ಜನರು ಗುಳೆ ಹೋಗದಂತೆ ತಡೆದು ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಬೇಕು. ಸರ್ಕಾರಕ್ಕೆ ಹಣದ ಕೊರತೆ ಇಲ್ಲ, ಹೀಗಾಗಿ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಸಮಸ್ಯೆ ತಿಳಿಯುವುದಿಲ್ಲ. ಎಲ್ಲ ತಾಲೂಕು ಹೋಬಳಿ ಗ್ರಾಮಗಳಿಗೆ ಭೇಟಿ ನೀಡಿ ಮೇಲಾಧಿಕಾರಿಗಳು ಮಾಹಿತಿ ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನೀರಿಗೆ ಆದ್ಯತೆ ನೀಡಿ: ಬೆಳೆಗಿಂತ ಕುಡಿಯುವ ನೀರು ಬಹಳ ಮುಖ್ಯ. ಜಾನುವಾರುಗಳಿಗೆ ಮೇವು, ನೀರಿನ ಸೌಲಭ್ಯ ಅಗತ್ಯವಾಗಿದೆ. ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಆವರಿಸಿಕೊಂಡಿರುವ ಹಳ್ಳಿಗಳನ್ನು ಗುರುತಿಸಿ ಮುಂದೆ ಆಗುವ ನೀರಿನ ಸಮಸ್ಯೆಗಳಿಗೆ ಈಗಿಂದಲೇ ತಯಾರು ಮಾಡಿಕೊಳ್ಳಬೇಕು. ಅಂತರ್ಜಲ ಬತ್ತಿ ಹೋಗಿರುವುದರಿಂದಾಗಿ ಬೋರ್ ವೆಲ್ ನವೀಕರಣ ಮಾಡಬೇಕು. ಎಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆಯೋ ಅಲ್ಲಿ ಪೈಪ್‍ಲೈನ್ ಕಾಮಗಾರಿ ನಡೆಸಬೇಕು. ಬೋರ್ ರೀಪ್ರೇಸಿಂಗ್ ಮಾಡುವುದರ ಜೋತೆಗೆ ನೀರಿನ ಸಮಸ್ಯೆಯಾಗದಂತೆ ಮುನ್ನಚ್ಚರಿಕಾ ಕ್ರಮ ವಹಿಸಬೇಕು. ಅದರಂತೆ ಜಾನುವಾರುಗಳಿಗೆ ನೀರಿನ ಜೋತೆಗೆ ಮೇವು ಬ್ಯಾಂಕ್ ಮಾಡಿಕೊಳ್ಳಬೇಕು ಮುಂದೆ ಜಾನುವಾರುಗಳಿಗೆ ಯಾವುದೇ ಸಮಸ್ಯೆ ಆಗದಂತೆ ಈಗ ಎಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಬಸವರಾಜ ದಡೆಸೂಗೂರು, ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್ ಸೇರಿದಂತೆ ಅಧಿಕಾರಿಗಳು ಇದ್ದರು.
ಜಿಲ್ಲಾಧಿಕಾರಿಯು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರತಿ ತಿಂಗಳ ವಿಡಿಯೋ ಕಾನ್ಫರೆನ್ಸ್ ನಡೆಸಿ ಆಯಾ ತಾಲೂಕುಗಳಲ್ಲಿ ಆಗಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಗುಳೆ ಹೋಗುವುದನ್ನು ತಡೆಯಲು ಉದ್ಯೋಗ ಸೃಷ್ಠಿಸಬೇಕು. ಕುಡಿಯುವ ನೀರು ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಕ್ರಮ ವಹಿಸಬೇಕು. ಆರ್.ವಿ.ದೇಶಪಾಂಡೆ ಕಂದಾಯ ಸಚಿವರು.

loading...