ಪಾರಿಶ್ವಾಡದ ಹನಿವೆಲ್‌ ಶಾಲೆಯಲ್ಲಿ ಕನಕ ಜಯಂತಿ ಆಚರಣೆ

0
49

ಕನ್ನಡಮ್ಮ ಸುದ್ದಿ-ಖಾನಾಪುರ: ತಾಲೂಕಿನ ಪಾರಿಶ್ವಾಡ ಗ್ರಾಮದ ಹನಿವೆಲ್‌ ಇಂಟರನ್ಯಾಶನಲ್‌ ಶಾಲೆಯಲ್ಲಿ ಸೋಮವಾರ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಸಭಾಗೃಹದಲ್ಲಿ ಜರುಗಿದ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯ ಅನೀಲಕುಮಾರ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಶಿವಾನಂದ ಗುಡ್ಲಿ, ಶಿವಾನಂದ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ಗ್ರಾಮದ ನಾಗರಿಕರು ಇದ್ದರು.

loading...