ಪುಟಾಣಿ ಮಕ್ಕಳಿಂದ ಸಂಭ್ರಮದ ಮಕ್ಕಳ ದಿನ ಆಚರಣೆ

0
57

makkala dinacharane

 

 

 

 

ಬೆಳಗಾವಿ : ಬೈಲಹೊಂಗಲ ತಾಲೂಕಿನ ದೇವರಶೀಗಿಹಳ್ಳಿ ಗ್ರಾಮದಲ್ಲಿ ಗುರುವಾರ ಇದೇ ಮೊದಲ ಬಾರಿಗೆ ಶಿಶು ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಮಕ್ಕಳ ವಲಯ ಮಟ್ಟದಲ್ಲಿ ಸಂಭ್ರಮದ ಮಕ್ಕಳ ದಿನೋತ್ಸವವನ್ನು ಆಚರಿಸಲಾಯಿತು.
ದಿನಾಚರಣೆ ಅಂಗವಾಗಿ ಮಕ್ಕಳಿಂದ ವೇಶಭೂಷಣ ಮತ್ತು ನೃತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಮಕ್ಕಳಿಂದ ಸ್ವಾಗತಗೀತೆ ಹಾಡಿಸುವ ಮೂಲಕ ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ನೆಹರೂಜೀ ಅವರ ವೇಶಧರಿಸಿ ಗಮನ ಸೆಳೆದರು. ಚಿಕ್ಕ ಚಿಕ್ಕ ಮಕ್ಕಳ ಬಾಯಲ್ಲಿ ದೇಶದ ಸ್ವಾತಂತ್ರ್ಯ ಕುರಿತು ಮಾತನ್ನು ಕೇಳುವುದೇ ಒಂದು ಸಂಭ್ರಮದಂತೆ ಕಂಡುಬಂತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗ್ರಾಮದ ಚೇರಮನ್ ಮಂಜುನಾಥ ಪೂಜೇರ ಮಾತನಾಡಿ ಮಕ್ಕಳ ಮನಸ್ಸು ಹೂವಿನಂತೆ ಅವರಿಂದ ಈ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ಅಭಿನಂದನೀಯ ಎಂದರು. ಕಾರ್ಯಕ್ರಮದ ಅಥಿತಿಗಳಾದ ಗ್ರಾಮದ ಪಂಚಾಯತ ಅಭಿವೃದ್ಧಿ ಅಧಿಕಾರಿ ಪೂಜಾರ ಮಾತನಾಡಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕೆಲಸವನ್ನು ಕೊಂಡಾಡಿದರು. ಮತ್ತು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವಂತೆ ಪಾಲಕರಿಗೆ ಕಿವಿಮಾತು ಹೇಳಿದರು.
ಇನ್ನುಳಿದಂತೆ ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವೀಚಾರಕಿಯಾರಾದ ಶ್ರೀಮತಿ ಎಸ್.ಡಿ.ರಾವಳ್ ಮತ್ತು ಪಾಟೀಲ ಹಾಗೂ ವಲಯ ವೈದ್ಯಾಧೀಕಾರಿ ಚೌಡಪ್ಪನವರ ಮತ್ತು ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಬಾಗವಾನ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಎಮ್.ಆಯ್. ಮಾನಿಕಬಾಯಿ ಮತ್ತು ಶ್ರೀಮತಿ ಸಾವಿತ್ರಿ ಸಾಂಬ್ರಾಯಿಣಿ ಹಾಗೂ ಇನ್ನುಳಿದಂತೆ ಗ್ರಾಮದ ಪ್ರಮುಖರು ಮತ್ತು ಎಲ್ಲ ಮಕ್ಕಳ ಪೊಷಕರು ಹಾಗು ಕಾರ್ಯಕ್ರಮದ ಮೂಲಕಾರಿಣಿಭೂತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು.
ಕೋಟ್ : ಕನ್ಮಣ ಸೆಳೆದ ಮಕ್ಕಳ ನೃತ್ಯಪ್ರದರ್ಶನ
ಪುಟಾಣಿ ಮಕ್ಕಳು ತೋರಿದ ಆ ವಿವಿಧ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಸೇರಿದ ಜನರನ್ನು ಮೂಕ ವಿಸ್ಮಿತರನ್ನಾಗಿ ಮಾಡಿತು. ಕೊರವಂಜಿ, ರಾಣಿ ಚೆನ್ನಮ್ಮನ ಪ್ರದರ್ಶನಗಳಿಗೆ ಪ್ರಮಾಣ ಪತ್ರ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು. ಸ್ವಾತಂತ್ರ್ಯದ ಕಿಚ್ಚನ್ನು ನೆನಪಿಸಿದ ಆ ಮಕ್ಕಳ ನಟನೆ ಅದ್ಭುತವಾಗಿತ್ತು.

loading...

LEAVE A REPLY

Please enter your comment!
Please enter your name here