ಪುರಸಭೆಗಳ ಅಕ್ರಮ ಲೋಕಾಯುಕ್ತರ ತನಿಖೆಗೆ: ಜಾರಕಿಹೊಳಿ

0
22

 

ಬೆಂಗಳೂರು, ಸೆ.15: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಣಕಾಸು ಅಕ್ರಮಗಳನ್ನು ಲೋಕಾಯುಕ್ತರು ತನಿಖೆಗೆ ಒಪ್ಪಿಸಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪೌರಾಡಳಿತ ಸಚಿವ ಬಾಲಚಂದ್ರಜಾರಕಿಹೊಳಿ ಹೇಳಿದ್ದಾರೆ.

ಸ  ುದ್ದಿ ಗ ಾ ರ  ರ ೊಂದಿಗ ೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಐದಾರು ಪಟ್ಟಣ ಪಂಚಾಯಿತಿಗಳಲ್ಲಿ ಹಣಕಾಸು ಅಕ್ರಮ ನಡೆದಿರುವ ಬಗ್ಗೆ ವರದಿ ಬಂದಿದ್ದು, ಅದನ್ನು ಇಲಾಖೆಯ ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.

ಒಂದು ಬಿಗಿ ಕ್ರಮ ಬರಬೇಕು ಎಂಬ ಉದ್ದೇಶದಿಂದ ಯಾವುದೇ ಸ್ಥಳೀಯ ಸಂಸ್ಥೆಯಲ್ಲಿ ಹಣಕಾಸು ಅಕ್ರಮ ನಡೆದಿದ್ದರೆ ಅದನ್ನು ಲೋಕಾಯುಕ್ತರ ತನಿಖೆಗೆ ಒಪ್ಪಿಸಲಾಗುವುದು ಎಂದು ಹೇಳಿದರು.

ನಗರ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ದಿಗೆ 1454 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ವರ್ಷ ಸ್ಥಳೀಯ ಸಂಸ್ಥೆಗಳಿಗೆ 169 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಸ್ತೆಗಳ ಅಭಿವೃದ್ದಿಗಾಗಿ ಜಿಲ್ಲಾ ಮಟ್ಟದಲ್ಲಿ ನಗರಸಭೆಗಳಿಗೆ 10 ಕೋಟಿ ರೂಪಾಯಿ ತಾಲೂಕು ಮಟ್ಟದಲ್ಲಿ 5 ಕೋಟಿ ರೂಪಾಯಿ ಹೊಬಳಿ ಮಟ್ಟದಲ್ಲಿ 3 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ ರಸ್ತೆಗಳ ಗುಣಮಟ್ಟ ತೃಪ್ತಿಕರವಾಗಿ ಇಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ 100 ದೊಡ್ಡ ಗ್ರಾಮ ಪ  ಂ ಚ ಾ ಯಿ ು ತಿ ಗ  ಳ  ನ  ು ್ನ ಪಟ್ಟಣಪಂಚಾಯಿತಿ ಮಟ್ಟಕ್ಕೆ ಏರಿಸಲಾಗುವುದು. ಈ ಸಂಬಂಧದಲ್ಲಿ 400 ಅರ್ಜಿಗಳು ಬಂದಿದ್ದು ಮೊದಲ ಹಂತದಲ್ಲಿ ನೂರು ದೊಡ್ಡ ಗ್ರಾಮ ಪಂಚಾಯಿತಿಗಳನ ು ್ನಪಟ್ಟಣ ಪಂಚಾಯಿತಿಗಳನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದರು.

ರಾಜ್ಯದ ಕೊಳಗೇರಿ ನಿವಾಸಿಗಳ ಜೀವನಧಾರ ಸಮೀಕ್ಷೆ ಮಾಡಲಾಗಿದೆ. ದೇಶವನ್ನು ಈ ರೀತಿ ಸಮೀಕ್ಷೆ ಮಾಡಿದ ಮೊದಲ ರಾಜ ಎಂಬ ಹೆಗ್ಗಳಿಕೆಗೆ ನಾವು ಪಾತ್ರವಾಗಿದ್ದೇವೆ. ಮುಂದಿನ ಡಿಸೆಂಬರ್ 15ರೊಳಗಾಗಿ ಎಲ್ಲ ಸ್ಥಳೀಯ ಸಂಸ್ಥೆಗಳು ಸುಚಿತ್ವ ಕಾಪಾಡಲು ಜೆಟ್ಟಿಂಗ್ ಯಂತ್ರಗಳನ್ನು ಖರೀದಿ ಮಾಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

loading...

LEAVE A REPLY

Please enter your comment!
Please enter your name here