ಪುರಸಭೆ ಚುನಾವಣೆ: 70 ಅಭ್ಯರ್ಥಿಗಳು ಕಣದಲ್ಲಿ

0
30

ಕನ್ನಡಮ್ಮ ಸುದ್ದಿ-ಹಳಿಯಾಳ: ಪುರಸಭೆ ಚುನಾವಣೆಯ ಕಣ ಸ್ಪಷ್ಟಗೊಂಡಿದ್ದು ಒಟ್ಟು 70 ಅಭ್ಯರ್ಥಿಗಳು ಕಣದಲ್ಲಿದ್ದಾರೆ. (ಪಕ್ಷೇತರರಾಗಿ ಸ್ಪರ್ಧಿಸಿದ್ದ ಐವರು ನಾಮಪತ್ರ ಹಿಂಪಡೆದಿದ್ದಾರೆ.) ಎಲ್ಲ 23 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಹಾಗೂ ಭಾಜಪ ಗಳ ಹುರಿಯಾಳುಗಳು ಕಣಕ್ಕಿಳಿದಿದ್ದರೆ ಜೆಡಿಎಸ್‌ 16 ವಾರ್ಡ್‌ಗಳಲ್ಲಿ ಮತ್ತು ಪಕ್ಷೇತರರು 9 ವಾರ್ಡ್‌ಗಳಲ್ಲಿ ಪಕ್ಷೇತರರಿದ್ದಾರೆ.
ವಾರ್ಡ್‌ವಾರು ಸ್ಪರ್ಧಿಗಳ ವಿವರ:- ವಾರ್ಡ್‌ 1- ಶ್ರೀನಿವಾಸ ಹ. ಬಡಿಗೇರ (ಕಾಂಗ್ರೆಸ್‌), ಚಂದ್ರಕಾಂತ ಗಂಗರಾಮ ಕಮ್ಮಾರ (ಭಾಜಪ), ಅನ್ವರಹ್ಮದ ಜ. ಮುಲ್ಲಾ (ಜೆಡಿಎಸ್‌), 2- ರುದ್ರಪ್ಪಾ ಯಲ್ಲಪ್ಪಾ ಕೆಸರೇಕರ (ಕಾಂ), ಶಂಕರ ರಾಮರಾವ ಪಟ್ಟೇಕರ (ಭಾ), ಸನಾವುಲ್ಲಾ ಎಂ. ಚಿಗರಿ (ಜೆ), 3- ನವೀನ ಪ್ರಕಾಶ ಕಾಟ್ಕರ್‌ (ಕಾಂ), ನಾಗರಾಜ ಯಲ್ಲಪ್ಪಾ ಸಾಣಿಕೊಪ್ಪ (ಭಾ), 4- ಪ್ರಭಾಕರ ಕೇಶವ ಗಜಾಕೋಶ (ಕಾಂ), ಮಂಜುನಾಥ ಪರಶುರಾಮ ಗಜಾಕೋಶ (ಭಾ), ರವಿ ರಮೇಶ ವಡ್ಡರ್‌ (ಜೆ), ಸುಶಾಂತ ಸುಭಾಸ ಚವ್ಹಾಣ (ಪಕ್ಷೇತರ), 5- ತುಕಾರಾಮ ಯ. ಜಾವಳ್ಳಿ (ಕಾಂ), ಸಂತೋಷ ವಿಷ್ಣು ಘಟಕಾಂಬಳೆ (ಭಾ), ಅಣ್ಣಪ್ಪಾ ಓಬಳೇಶ ವಡ್ಡರ್‌ (ಜೆ), ಸಿದ್ರಾಮಪ್ಪಾ ದಾನಪ್ಪನವರ (ಪ), 6- ಅಝರುದ್ದೀನ ರಫೀಕ ಬಸರಿಕಟ್ಟಿ (ಕಾಂ), ಪ್ರಕಾಶ ಕೋನಪ್ಪನವರ (ಭಾ), ಪ್ರಕಾಶ ಹರಕುಣಿ (ಜೆ), 7- ಸಂತೋಷ ಬಿ. ಬೆಳಗಾಂವಕರ (ಕಾಂ), ಶಿವಾಜಿ ನರಸಾನಿ (ಭಾ), ರಮೇಶ ಪೂಜಾರಿ (ಜೆ), ಪಕ್ಷೇತರರು- ವಾಮನ ಪೂಜಾರಿ, ಶಂಕರ ಬೆಳಗಾಂವಕರ, ಪ್ರಸಾದ ಹುಣ್ಸವಾಡಕರ, 8- ಮುಸರತ್‌ಜಹಾ ಬಸಾಪುರ (ಕಾಂ), ಸಲಿಮಾಬಿ ಎಮ್‌ ಇಟ್ಟಂಗಿವಾಲೆ (ಭಾ), ನಜ್ಮಾ ಕೊಲ್ಹಾಪುರಿ (ಜೆ), 9- ಸುರೇಶ ವಗರಾಯ (ಕಾಂ), ಗೋಪಾಲ ಗರಗ (ಭಾ), 10- ಮೋಹನ ಮೇಲಗಿ (ಕಾಂ), ಆನಂದ ಕಂಚನಾಳಕರ (ಭಾ), 11- ದ್ರೌಪದಿ ಅ. ಅಗಸರ (ಕಾಂ), ರಾಜಶ್ರೀ ವಾಸುದೇವ ಪೂಜಾರಿ (ಭಾ), ಬಿಬಿಸಫಿಯಾ ಎಂ. ದುರ್ಗಾಡಿ (ಜೆ), 12- ಸಾಹೀರಾ ಮಹ್ಮದರಫೀಕ ಮುಗದ (ಕಾಂ), ನಸ್ರುತಾ ಶೇಖ (ಭಾ), ಶಬಾನಾ ಸೈಯದಅಲಿ ಅಂಕೋಲೆಕರ (ಜೆ), ಅಮೀನಾಬಿ ಹಸ್ನಾರ ಹಾಜಿಬೇರಿ (ಪ), 13- ಪೂಜಾ ದೇಸಾಯಿಸ್ವಾಮಿ (ಕಾಂ), ರಾಜಶ್ರೀ ಲಿಂಗರಾಜ ಹಿರೇಮಠ (ಭಾ), ಚಾಂದಬಿ ನದಾಫ (ಜೆ), 14- ಸತ್ಯಜೀತ ಗಿರಿ (ಕಾಂ), ಉದಯ ಶ್ರೀಕಾಂತ ಹೂಲಿ (ಭಾ), ಕಾಮೇಲ್‌ ಡಿ. ಸಿಕ್ವೇರಾ (ಪ), 15- ಹನೋರಿಯಾ ಮಾಲಾ ಬೃಗಾಂಜಾ (ಕಾಂ), ಶಾಂತಾ ಹನುಮಂತ ಹಿರೇಕರ (ಭಾ), 16- ಸುವರ್ಣಾ ಮಾದರ (ಕಾಂ), ನೀತಾ ಗೋವಿಂದ ಭಂಡಗಿ (ಭಾ), ಲಕ್ಷ್ಮೀ ಕೆ. ಗದಗ (ಜೆ), 17- ಸುರೇಶ ತಳವಾರ (ಕಾಂ), ಯಲ್ಲಪ್ಪಾ ಹೋನ್ನಜಿ (ಭಾ), 18- ರೇಷ್ಮಾ ಮನಿಯಾರ್‌ (ಕಾಂ), ರೂಪಾ ಅನಿಲ ಗಿರಿ (ಭಾ), 19- ಲಕ್ಷ್ಮೀ ಅ. ವಡ್ಡರ್‌ (ಕಾಂ), ಯಲ್ಲವ್ವಾ ಕರೆಪ್ಪಾ ಭಂಜತ್ರಿ (ಭಾ), 20- ಫಯಾಜ್‌ ಅಹ್ಮದ ಶೇಖ (ಕಾಂ), ಸುಭಾಸ ನಾಯ್ಕ (ಭಾ), ಜಾನುಲ್ಲಾ ಎ. ಬಳಗಾರ (ಜೆ), 21- ಅನಿಲ ಪಿ. ಗೌಳಿ (ಚವ್ಹಾಣ) (ಕಾಂ), ಸಂತಾನ ಸಾವಂತ (ಭಾ), ಪ್ರಕಾಶ ಗಿರಿ (ಜೆ), 22- ಸುನೀತಾ ಮಾ. ಜಾಧವ (ಕಾಂ), ಸಂಗೀತಾ ಜಾಧವ (ಭಾ), ಮೆಹಬೂಬಿ ಐ. ಮುಲ್ಲಾ (ಜೆ), 23- ಶಮೀಮಬಾನು ರೆಹಮಾನ ಜಂಬೂವಾಲೆ (ಕಾಂ), ಮಾಲಾ ರಮೇಶ ಹುಂಡೇಕರ (ಭಾ), ಶಾರದಾ ಎಂ. ಡೊಂಬರ್‌ (ಜೆ), ಪಕ್ಷೇತರರು- ಲಕ್ಷ್ಮೀ ವೆಂಕಟೇಶ ಅನಗೊಂಡ, ಪ್ರೇಮಾ ಹನುಮಂತ ಹರಿಜನ.
-: ಹಳೆ-ಹೊಸ ಮುಖಗಳು :-
ಪುರಸಭೆಯಲ್ಲಿ ಈ ಹಿಂದೆ ಜನಪ್ರತಿನಿಧಿಯಾಗಿದ್ದು ಮತ್ತೊಮ್ಮೆ ಮರುಆಯ್ಕೆ ಬಯಸಿ ಕೆಲವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ವಾರ್ಡ್‌ 7 ರಲ್ಲಿ ನಿರ್ಗಮಿತ ಅಧ್ಯಕ್ಷ ಶಂಕರ ಬೆಳಗಾಂವಕರ ಕಾಂಗ್ರೆಸ್‌ ಟಿಕೇಟ್‌ ವಂಚಿತರಾದ ಕಾರಣ ಬಂಡಾಯಗಾರರಾಗಿ ಪಕ್ಷೇತರರಾಗಿದ್ದಾರೆ. ವಾರ್ಡ್‌ 14 ರಲ್ಲಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಆರ್ಥಿಕ ಸ್ಥಾಯಿ ಸಮಿತಿ ಚೇರಮನ್‌ ಸತ್ಯಜೀತ ಗಿರಿ, ವಾರ್ಡ್‌ 15 ರಲ್ಲಿ ಮಾಜಿ ಅಧ್ಯಕ್ಷೆ ಮಾಲಾ ಬೃಗಾಂಜಾ, ವಾರ್ಡ್‌ 17 ರಲ್ಲಿ ಈ ಹಿಂದೆ ಎರಡು ಬಾರಿ ಸದಸ್ಯರಾಗಿದ್ದ ಸುರೇಶ ತಳವಾರ, ವಾರ್ಡ್‌ 20 ರಲ್ಲಿ ಮಾಜಿ ಉಪಾಧ್ಯಕ್ಷರುಗಳಾದ ಫಯಾಜ್‌ ಶೇಖ ಹಾಗೂ ಸಂತಾನ ಸಾವಂತ ಸ್ಪರ್ಧಾ ಕಣದಲ್ಲಿದ್ದಾರೆ. ಇವರುಗಳಲ್ಲಿ ಸಂತಾನ ಸಾವಂತ ಭಾಜಪದಿಂದ ಸ್ಪರ್ಧಿಸಿದ್ದು ಉಳಿದವರು ಕಾಂಗ್ರೆಸ್‌ ಸ್ಪರ್ಧಾಳುಗಳಾಗಿದ್ದಾರೆ. ವಾರ್ಡ್‌ 12 ರಲ್ಲಿ ಮಾಜಿ ಸದಸ್ಯ ಸೈಯದಅಲಿ ಅಂಕೋಲೆಕರ ಪತ್ನಿ ಶಬಾನಾ ಇವರು ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ.
-: ಸಭೆ :-
ತಾಲೂಕಾ ಕಚೇರಿಯಲ್ಲಿ ಗುರುವಾರ ಸಂಜೆ ಚುನಾವಣಾಧಿಕಾರಿಗಳು ಎಲ್ಲ ಸ್ಪರ್ಧಾಳುಗಳ ಸಭೆ ನಡೆಸಿ ಚುನಾವಣೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಹಾಗೂ ನೀತಿ ಸಂಹಿತೆಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

loading...