ಪುರಸಭೆ ಹಲವಾರು ಸಮಸ್ಯೆಗಳು ಎದುರಾಗುತ್ತಲಿವೆ

0
15

ಕನ್ನಡಮ್ಮ ಸುದ್ಧಿ-ರೋಣ: ಪುರಸಭೆಯ ವ್ಯಾಪ್ತಿಯಲ್ಲಿನ ಹಲವಾರು ಸಮಸ್ಯೆಗಳು ಎದುರಾಗುತ್ತಲಿದ್ದು, ಇದಕ್ಕೆ ಮುಖ್ಯಾಧಿಕಾರಿಗಳು ಯಾವದೇ ಕ್ರಮವನ್ನು ಜರುಗಿಸದಿರುವುದು ತಮ್ಮದೇ ಕರ್ತವ್ಯವಾಗಿರುತ್ತದೆ.ಇಂದು ತಮ್ಮ ಕಾರ್ಯ ವೈಖರಿಯು ಸಮಂಜಸವಾಗಿರುವುದಿಲ್ಲಾವೆಂದು ಪುರಸಭೆ ಸದಸ್ಯ ಮುತ್ತಣ್ಣ ಸಂಗಳದ ಪುರಸಭೆಯ ಮುಖ್ಯಾಧಿಕಾರಿಯ ಕೆಲಸದ ಕುರಿತು ಶಾಸಕರಿಗೆ ತಿಳಿಸಿದರು.
ಪಟ್ಟಣದ ಪುರಸಭೆಯಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಪಟ್ಟಣಕ್ಕೆ ಸಂಬಂಧಿಸಿದ ಹಾಗೇ ಯಾವ ಕಾರ್ಯವನ್ನು ಸಮಂಜಸವಾಗಿ ನಿಭಾಯಿಸಿದ್ದಿರಿ? ಇಂದು ಜನತೆಯು ಸಮಸ್ಯೆಗಳಲ್ಲಿ ಹೊರಳಾಡುತ್ತಲಿದ್ದಾರೆ.ಯಾವುದನ್ನು ನೀವು ಸರಿಯಾಗಿ ಕ್ರಮವನ್ನು ಕೈಗೊಂಡಿರುವುದಿಲ್ಲಾ. ಪಟ್ಟಣದ ಸ್ವಚ್ಛತೆಯಲ್ಲಿ ಪ್ರಮುಖವಾಗಿ ಪೌರ ಕಾರ್ಮಿಕರ ಕಾರ್ಯವು ಅಮೋಘವಾಗಿರುತ್ತದೆ. ಆ ನಿಟ್ಟಿನಲ್ಲಿ ಅವರ ವೇತನದಲ್ಲಿ ವ್ಯತ್ಯಯವಾಗುತ್ತಲಿರುವುದು ಕಂಡು ಬರುತ್ತದೆ ಇದಕ್ಕೆ ಉತ್ತರವನ್ನು ನೀಡಿ ಎಂದು ಮುಖ್ಯಾಧಿಕಾರಿಯನ್ನು ಸಭೆಯಲ್ಲಿ ಪ್ರಶ್ನಿಸಿದರು.
ಶಾಸಕ ಕಳಕಪ್ಪ ಬಂಡಿ ಮಾತನಾಡಿ ಇದು ನಮ್ಮ ವ್ಯವಸ್ಥೆಗೆ ಕಳಂಕಪ್ರಾಯವಾಗುತ್ತದೆ.ಸಂಬಂಧಿಸಿದ ಪೌರ ಕಾರ್ಮಿಕರ ವೇತನವು ಯಾವದೇ ಕಾರಣಕ್ಕೂ ವಿಳಂಬವಾಗಬಾರದು.ನಗರದ ಸ್ವಚ್ಛತೆಯ ಕುರಿತು ತಮ್ಮದೇ ಶ್ರಮವನ್ನು ವಹಿಸಿ ನಗರವನ್ನು ಸ್ವಚ್ಛತೆಯನ್ನು ಒದಗಿಸುತ್ತಲಿದ್ದಾರೆ.ವೇತನದಲ್ಲಿ ವ್ಯತ್ಯವಾದರೇ ಸಹಿಸಲಾಗುವುದು. ವಸೂಲಿ ಕರ ಎಷ್ಟಾಗುತ್ತಲಿದೆ. ಸಂಪೂರ್ಣವಾದ ಮಾಹಿತಿಯನ್ನು ನೀಡಿ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಉತಾರ ಹಾಗೂ ಖಾತೆ ಬದಲಾವಣೆಯ ಕುರಿತು ಪುರಸಭೆಯ ನಿಸ್‌ಖಾಳಜಿಯ ವರ್ತಣೆಯು ನಮ್ಮ ಗಮನಕ್ಕೆ ಬಂದಿದ್ದು, ಇನ್ನೂ ಮುಂದೆ ಯಾವದೇ ರೀತಿಯಿಂದಲೂ ಜನತೆಯು ತಮ್ಮ ಸಂಪರ್ಕಕ್ಕೆ ಬಂದರೂ ಸಹಿತ ಅವರಿಗೆ ಯೋಗ್ಯ ಸೇವೆ ದೊರೆಯಬೇಕು ಎಂದು ಅಧಿಕಾರಿಗಳಿಗೆ ಎಚ್ಛರಿಕೆಯ ಘಂಟೆಯನ್ನು ನೀಡಿದರು.
ಪ್ರತಿಯೊಂದು ವಾರ್ಡನಲ್ಲಿ ಕುಡಿಯುವ ನೀರಿನ ಸಮಸ್ಯೆಯು ಪಟ್ಟಣದಲ್ಲಿ ಕಾಣುತ್ತಲಿದೆ.ಅದಕ್ಕೆ ಅಧಿಕಾರಿಗಳು ಏನು?ಮಾಡುತ್ತಲಿದ್ದೀರಿ?ಏನು ಕಥೆ ನಿಮ್ಮದು ಎಂದು ಪುರಸಭೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೇ ಬಸನಗೌಡ ಬಸನಗೌಡ್ರ ಮಾತನಾಡಿ ಮೊದಲು ಟೆಂಡರಾದವರಿಗೆ ಬಿಲ್‌ ವಿತರಿಸಬೇಕು. ಅದು ನಮ್ಮ ಪುರಸಭೆಯು ದೂರ ಉಳಿದಿದೆ. ಮುಂದಿನ ಕಾಮಗಾರಿಗಳಿಗೆ ಟೆಂಡರ ಕರೆಯಬೇಕಾದರೇ ಯಾರು ಕೂಡಾ ಮುಂದೆ ಬರುತ್ತಿಲ್ಲಾ. ಇದಕ್ಕೆ ಸರಿಯಾಗಿ ವೇತನ ನೀಡದಿರುವುದು ಎಂದು ಶಾಸಕರ ಮುಂದೆ ಪ್ರಸ್ತಾಪಿಸಿದರು.
ಶಾಸಕರು ಮಾತನಾಡಿ ಹಿಂದೆ ಹೇಗೆ ನಡೆದಿದಿದೆ ಗೊತ್ತಿಲ್ಲಾ.ನಮ್ಮಲ್ಲಿ ಬರುವ ಜನತೆಗೆ ಸೇವೆಯನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ.ನನಗೆ ಯೋಜನೆಯ ಸಂಪೂರ್ಣವಾದ ವರದಿಯನ್ನು ಕೂಡಲೇ ಒಪ್ಪಿಸಬೇಕು.ಹಕ್ಕು ಬದಲಾವಣೆಯ ವಿಷಯವಾಗಿ ಬರುವ ಸಾರ್ವಜನಿಕರ ಸೇವೆಯನ್ನು 21 ದಿನಗಳಲ್ಲಿ ಇತ್ಯರ್ಥವಾಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಸದಸ್ಯ ಶಫೀಕ ಮೂಗನೂರ ಮಾತನಾಡಿ ತಾವುಗಳು ಅಧಿಕಾರವನ್ನು ವಹಿಸಿಕೊಂಡ ನಂತರ ಎಷ್ಟೂ ಬಾರಿ ಜನರಲ್‌ ಬಾಡಿ ಸಭೆಯನ್ನು ಕರೆದಿದ್ದಿರಿ? ಯಾವ ಯೋಜನೆಗಳ ಕುರಿತು ಪ್ರಸ್ತಾಪಿಸಿದ್ದೀರಿ?ಎಂದು ಪ್ರಶ್ನಿಸಿದಾಗ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಕಕ್ಕಾಭಿಕ್ಕಿಯಾದರು.
ತಡವರಿಸಿ ಮಾತನಾಡಿದ ಮುಖ್ಯಾಧಿಕಾರಿ ನಾನು ರಜೆಯನ್ನು ಹೊಂದಿರುವ ಹಿನ್ನಲೆಯಲ್ಲಿ ಕರೆಯಲಾಗಲಿಲ್ಲಾವೆಂದು ಜಾರಿಕೊಂಡರು.
ಸಭೆಯಲ್ಲಿ ಪುರಸಭೆಯ ಅಧ್ಯಕ್ಷ ಶಿವಪ್ಪ ಕರಿಲಿಂಗಣ್ಣವರ,ವಿಜಯ ಗಡಗಿ,ಮುತ್ತಣ್ಣ ಸಂಗಳದ,ತೋಟಪ್ಪ ನವಲಗುಂದ,ಮಂಜುನಾಥ ಹಾಳಕೇರಿ,ಗದಿಗೆಪ್ಪ ಕಿರೇಸೂರ,ಅಜ್ಜಪ್ಪ ರಡ್ಡೇರ,ಶರಣಪ್ಪ ದೊಡ್ಡಮನಿ,ಖಾದರ ಸಂಕನೂರ,ಆನಂದ ಬಂಗ್ಲಿ,ಬಸವರಾಜ ನೀಲಗಾರ,ಶರಣಪ್ಪ ಗಾಣಿಗೇರ ಸೇರಿದಂತೆ ಪುರಸಭೆಯ ಅಧಿಕಾರಿಗಳು ಇದ್ದರು.
======ಬಾಕ್ಸ==========
ಇನ್ನು ಮುಂದೆ ಇಂತಹ ವಾತಾವರಣ ಸಲ್ಲದು.ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರವನ್ನು ನೀಡಬೇಕು.ನಮ್ಮಲ್ಲಿ ಭೇಧ ಭಾವನೆಯನ್ನು ಮರೆತು ಕಾರ್ಯವನ್ನು ತೃಪ್ತಿದಾಯಕವಾಗಿ ನಡೆದುಕೊಳ್ಳಬೇಕು.
ಕಳಕಪ್ಪ ಬಂಡಿ. —ಶಾಸಕ ರೋಣ ಮತಕ್ಷೇತ್ರ.

loading...