ಪೆಟ್ರೋಲ್ , ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕರವೇ ಪ್ರತಿಭಟನೆ

0
42

ಪೆಟ್ರೋಲ್ ಡಿಜೆಎಲ್ ಬೆಲೆ ಏರಿಕೆ ಖಂಡಿಸಿ ಕರವೇ ಪ್ರತಿಭಟನೆ

ಕನ್ನಡಮ್ಮ ಸುದ್ದಿ- ಬೆಳಗಾವಿ:
ಸಾರ್ವಜನಿಕರು ದಿನ ನಿತ್ಯ ಬಳಕೆಯ  ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸ ಕಾಂಗ್ರೆಸ್   ಭಾರತ ಬಂದ್ ಗೆ ಕರೆ ನೀಡಿದ ಹಿನ್ನಲೆ ಕರ್ನಾಟಕ ರಕ್ಷಣಾ ವೇದಿಕೆ  ಇಂದು   ಪ್ರತಿಭಟನೆ ನಡೆಸಿ ಸಂಪೂರ್ಣ ಬೆಂಬಲ‌ ಸೂಚಿಸಿದರು.ದು ಬೆಳಿಗ್ಗೆ 8ಗಂಟೆಗೆ ಬೆಳಗಾವಿ ಗೋಕಾಕ ರಸ್ತೆಯನ್ನು ರಕ್ಷಣಾ ವೇದಿಕೆ ಬಂದ್ ಮಾಡುವ ಮೂಲಕ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.

ಸಾಮಾನ್ಯರ ದಿನ ನಿತ್ಯ ಬಳಕೆ ಮಾಡುವ ಪೆಟ್ರೊಲ್ ,   ಡಿಸೇಲ್ ,ಗ್ಯಾಸ್ ಬೆಲೆ ಏರಿಕೆ ಸಾರ್ವಜನಿಕರಿಗೆ ಹೊರೆಯಾಗಿದ್ದು,ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಕೇಂದ್ರ ಸರ್ಕಾರ ಬೆಲೆ ಕಡಿಮೆ ಮಾಡಬೇಕೆಂದು ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಗಾರರನ್ನು ಪೊಲೀಸ್ ರು ಬಂಧಿಸಿದರು.

ಈ ಸಂದರ್ಭದಲ್ಲಿ ಕರವೇಯ ದೀಪಕ ಗುಡಗನಟ್ಟಿ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

loading...