ಪೆಟ್ರೋಲ್ ಲೀಟರ್ ಗೆ 7 ಪೈಸೆ ಏರಿಕೆ; ಡೀಸೆಲ್ 5 – 6 ಪೈಸೆ ಇಳಿಕೆ

0
7


ನವದೆಹಲಿ: ಗುರುವಾರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 6 – 7 ಪೈಸೆ ಏರಿಕೆಯಾಗಿದೆ. ಡೀಸೆಲ್ ದರ ಲೀಟರ್ ಗೆ 5 – 6 ಪೈಸೆ ಇಳಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ 72.48 ರೂ ಗೆ ಮಾರಾಟವಾಗುತ್ತಿದೆ. ಈ ದರ ಬುಧವಾರದಂದು 72.41 ರೂ ನಷ್ಟಿತ್ತು. ಡೀಸೆಲ್ ಬುಧವಾರ 67.37 ರೂ ಇದ್ದರೆ ಗುರುವಾರ 67.32 ರೂ ನಷ್ಟಿದೆ.
ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ 78.11 ರೂ ಹಾಗೂ ಡೀಸೆಲ್ 70.64 ರೂ ನಷ್ಟಿದೆ.
ಭಾರತೀಯ ತೈಲ ನಿಗಮದ ಜಾಲತಾಣದಲ್ಲಿನ ಮಾಹಿತಿಯಂತೆ ಕೋಲ್ಕತಾದಲ್ಲಿ ಒಂದು ಲೀಟರ್ ಪೆಟ್ರೋಲ್ 74.56 ರೂ ಮತ್ತು ಡೀಸೆಲ್ 69.11 ರೂ ನಷ್ಟಿದೆ. ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ 75.27 ರೂ ಹಾಗೂ ಡೀಸೆಲ್ 71.15 ರೂ ನಷ್ಟಿದೆ.

loading...