ಪೊಲೀಸ್ ಆಯುಕ್ತರ ಸರ್ವಾಧಿಕಾರದಿಂದ ಹದಗೆಟ್ಟ ನಗರ ರಾಜಕಾರಣಿಗಳಿಗೆ ಮಣೆ – ಕಾನೂನಿಗೆ ಕಿಮ್ಮತ್ತಿಲ್ಲ

0
16

 

ಕನ್ನಡಮ್ಮ ವರದಿ

ಬೆಳಗಾವಿ:30 ನಗರದಲ್ಲಿ ಪೊಲೀಸ್ ಕಮಿಷನರೇಟ್ ಬಂದಾದ ಮೂರು ತಿಂಗಳಿನಿಂದ ಕೋಮು ಗಲಭೆಯಿಂದ ಹಿಡಿದು ವಿವಿಧ ಪ್ರಕರಣವನ್ನು ತಡೆಯುವಲ್ಲಿ ಆಯುಕ್ತರು ತಮ್ಮ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವ ನೆಪದಲ್ಲಿ ನಗರವನ್ನು ಹತೋಟಿ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪೊಲೀಸ್ ಆಯುಕ್ತರ ಸರ್ವಾಧಿಕಾರಿ ಧೋರಣೆಯಿಂದ ರಾಜಕಾರಣಿಗಳ ಬೆಂಬಲವಿರುವವರಿಗೆ ಬಿಟ್ಟು ಬೇಕಾದವರ ಮೇಲೆ ಕಾನೂನಿನ ರುಚಿ ತೋರಿಸುತ್ತಾರೆ. ಅಲ್ಲದೆ ಕೆಲ ದಿನಗಳ ಹಿಂದೆ ಯುವ ಕಾಂಗ್ರೆಸ್ ವೇದಿಕೆಯ ಕಾರ್ಯಕರ್ತರು ಕೇಂದ್ರ ಅಂಚೆ ಕಚೇರಿಗೆ ಬಿಗ್ ಹಾಕಿ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳಬೇಕಾದ ಆಯುಕ್ತರು ಪ್ರಭಾವಿ ರಾಜಕಾರಣಿಗಳ ಮಾತನ್ನು ಕೇಳಿ ಅವರಿಗೆ ಬಿಡುವುದು ನ್ಯಾಯವೇ ಅದೇ ಕನ್ನಡ ಸಂಘಟನೆಗಳು ಸಂಚಾರಿ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ನ್ಯಾಯ ಕೇಳಲು ಹೋದವರ ಮೇಲೆ ಮನಬಂದಂತೆ ಆಯುಕ್ತರು ಅವರ ಮೇಲೆ ಪ್ರಕರಣ ದಾಖಲಿಸಲು ಸೂಚಿಸುತ್ತಾರೆ ಎಂಬ ಆರೋಪ ಬುದ್ಧಿಜೀವಿಗಳದ್ದಾಗಿದೆ.

ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲರಿಗೂ ಒಂದೇಯಾಗಿರುತ್ತದೆ. ಪೊಲೀಸ್ ಆಯುಕ್ತರು ಮಾತ್ರ ರಾಜಕಾರಣಿಗಳ ಕೈಗೊಂಬೆಯಾಗಿ ಕಾರ್ಯಮಾಡುತ್ತಿರುವುದರಿಂದ ಅಮಾಯಕರಿಗೆ ನ್ಯಾಯ ಸಿಗದಂತಾಗಿದೆ ಎನ್ನುವ ಆಕ್ರೋಶ ಸಾರ್ವಜನಿಕವಲಯದ್ದಾಗಿದೆ.

ಕೆಲ ದಿನಗಳ ಹಿಂದೆ ಖಾನಾಪುರ ರಸ್ತೆಯಲ್ಲಿರುವ ಜಿಐಟಿ ಕಾಲೇಜಿನ ವಿದ್ಯಾರ್ಥಿಯೊರ್ವಳು ಹದಗೆಟ್ಟ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಟ್ಟಿದ್ದನ್ನು ಖಂಡಿಸಿ ಆಕೆಯ ಸಹಪಾಠಿಗಳು ಹಾಗೂ ಕೆಎಲ್‍ಇ ಇಂಜನಿಯರಿಂಗ್ ಹಾಗೂ ಎಬಿವಿಪಿ ಕಾರ್ಯಕರ್ತರು ಸೇರಿಕೊಂಡು ಸುಮಾರು ಎರಡೂವರೆ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಅವರ ಮೇಲೆ ಪೊಲೀಸ್ ಆಯುಕ್ತು ಪ್ರಕರಣ ದಾಖಲಿಸಿರುವುದು ನಾಚಿಕೆಗೇಡು ಸಂಗತಿ. ವಿದ್ಯಾರ್ಥಿಗಳು ಮೃತಪಟ್ಟ ಸಹಪಾಠಿಯ ಹಾಗೇ ಮತ್ತೇಯಾರಿಗೂ ಈ ರೀತಿ ಯಾಗಬಾರದೆಂದು ಪ್ರತಿಭಟನೆ ನಡೆಸಿದ್ದರು, ಅವರೇನು ಬಸ್ಸ್‍ಗೆ ಬೆಂಕಿ ಹಚ್ಚಿಲ್ಲ ಬೇರೆಯವರಿಗೆ ತೊಂದರೆಯುಂಟು ಮಾಡಿಲ್ಲ ಪೊಲೀಸ್ ಆಯುಕ್ತರು ಸರ್ವಾಧಿಕಾರಿಯಂತೆ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಅದೇ ಕೇಂದ್ರ ಅಂಚೆ ಕಚೇರಿಯಲ್ಲಿ ರಾಜಕೀಯ ಕುಟುಂಬದ ಪ್ರತಿಷ್ಠೆಯನ್ನು ಬೆಳೆಸಲು ಅಂಚೆ ಚೀಟಿಗಳ ಮೇಲೆ ತಮ್ಮ ನಾಯಕರ ಭಾವ ಚಿತ್ರ ತೆಗೆದಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಗೆ ಬೀಗ್ ಹಾಕಿ ಪ್ರತಿಭಟನೆ ನಡೆಸಿದರೂ ಪೊಲೀಸ್ ಆಯುಕ್ತರು ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಇದರಿಂದ ಸ್ಪಷ್ಟವಾಗುತ್ತದೆ ಆಯುಕ್ತ ಎಸ್.ರವಿ ಅವರು ಎಷ್ಟು ಪ್ರಾಮಾಣಿಕವಾಗಿ ನಗರದಲ್ಲಿ ಕಾರ್ಯಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರಿಗೆ ಈಗಾಗಲೇ ಪೊಲೀಸ್ ಆಯುಕ್ತರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೊಲೀಸ್ ಆಯುಕ್ತರು ತಮ್ಮ ವ್ಯಾಪ್ತಿಗೆ ಬರುವ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವುದು ಹಾಗೂ ರಾಜಕಾರಣಿಗಳ ಪ್ರಭಾವಕ್ಕೆ ಮಣಿದು ಸೋಮವಾರ ರಾತ್ರಿ ನಡೆದ ಗಲಭೆಯಲ್ಲಿ ಭಾಗಿಯಾದ ಸುಮಾರು ನಾಲ್ಕು ನೂರು ಜನರು ಭಾಗಿಯಾಗಿರುವುದನ್ನು ಸ್ಪಷ್ಟ ಪಡಿಸಿದ ಅವರೇ ಕೇವಲ ಬೇರಳಣಿಕೆಯಷ್ಟು ಜನರನ್ನು ಬಂಧಿಸಿರುವುದು ಯಾವ ಪುರುಷಾರ್ಥಕ್ಕಾಗಿ ಎಂಬುದು ಸಾರ್ವಜನಿಕ ವಯಲದ್ದಾಗಿದೆ.
ಅದೇ ಕೇಂದ್ರ ಅಂಚೆ ಕಚೇರಿಯಲ್ಲಿ ರಾಜಕೀಯ ಕುಟುಂಬದ ಪ್ರತಿಷ್ಠೆಯನ್ನು ಬೆಳೆಸಲು ಅಂಚೆ ಚೀಟಿಗಳ ಮೇಲೆ ತಮ್ಮ ನಾಯಕರ ಭಾವ ಚಿತ್ರ ತೆಗೆದಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕಚೇರಿಗೆ ಬೀಗ್ ಹಾಕಿ ಪ್ರತಿಭಟನೆ ನಡೆಸಿದರೂ ಪೊಲೀಸ್ ಆಯುಕ್ತರು ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಇದರಿಂದ ಸ್ಪಷ್ಟವಾಗುತ್ತದೆ ಆಯುಕ್ತ ಎಸ್.ರವಿ ಅವರು ಎಷ್ಟು ಪ್ರಾಮಾಣಿಕವಾಗಿ ನಗರದಲ್ಲಿ ಕಾರ್ಯಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರಿಗೆ ಈಗಾಗಲೇ ಪೊಲೀಸ್ ಆಯುಕ್ತರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

loading...

LEAVE A REPLY

Please enter your comment!
Please enter your name here