ಪೋರ್ಟಲ್‌ ನೊಂದಣಿ ಮಾಡಿಸಿಕೊಳ್ಳಲು ಸೂಚನೆ

0
36

ಕನ್ನಡಮ್ಮ ಸುದ್ದಿ-ನರಗುಂದ: ಕೃಷಿಗೆ ಸಂಬಂಧಿಸಿದ ಇಲಾಖೆಗಳಾದ ಕೃಷಿ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇಲಾಖೆ ಇವುಗಳ ಪ್ರಯೋಜನ ಹಾಗೂ ಇತರೆ ಸೌಲಭ್ಯ ಪಡೆಯಲು ತಾಲೂಕಿನ ಎಲ್ಲ ರೈತರು ಒಂದು ಬಾರಿ ಪೋರ್ಟಲ್‌ ನೊಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ಈ ನೋಂದಣಿಯನ್ನು ಇದೇ ವರ್ಷದ ಹಿಂಗಾರು ಆರಂಭಕ್ಕೆ ಪೂರ್ವ ಮಾಡಿಸಿಕೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಚನ್ನಪ್ಪ ಅಂಗಡಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ರೈತರು ಒಂದು ಬಾರಿ ತಮ್ಮ ದಾಖಲಾತಿಗಳನ್ನು ನೊಂದಣಿ ಮಾಡಿಸುವುದು ಅಗತ್ಯವಿದೆ. ಈ ಕುರಿತು ಸರ್ಕಾರದ ಆದೇಶವಾಗಿದ್ದರಿಂದ ಇದನ್ನು ರೈತರು ಕಡ್ಡಾಯವಾಗಿ ಮಾಡಬೇಕು. ವಿಧ್ಯುನ್ಮಾನ ಆಡಳಿತ ಹಾಗೂ ಎನ್‌ಐಸಿ (ರಾಷ್ಟ್ರೀಯ ಇಂಟರ್‌ನೆಟ್‌ ಸೆಂಟರ್‌) ವತಿಯಿಂದ ಸಾಮಾನ್ಯ ರೈತರ ನೊಂದಣಿ ( ಸಿಎಫ್‌ಆರ್‌) ಪೋರ್ಟಲ್‌ ಸಿದ್ದಪಡಿಸಿದ ತಾಂತ್ರಿಕ ಮೂಲಕ ರೈತರ ಹೆಸರುಗಳನ್ನು ನೊಂದಣೆ ಮಾಡಲಾಗುವುದು.
ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗಳಲ್ಲಿ ತಮ್ಮ ಪಹಣಿ ಪತ್ರಿಕೆ ಮತ್ತು ಆಧಾರ ಕಾರ್ಡ, ಬ್ಯಾಂಕ್‌ ಪಾಸ್‌ ಪುಸ್ತಕ ನಕಲು, ಮೋಬೈಲ್‌ ನಂಬರ್‌ ಎಲ್ಲ ಮಾಹಿತಿ ಪ್ರತಿಗಳನ್ನು ಸಲ್ಲಿಸಬೇಕು. ನೊಂದಣೆ ಮಾಡಿಸಿದ ರೈತರಿಗೆ ಸಂಖ್ಯೆಯನ್ನು ನೀಡಲಾಗುತ್ತದೆ. ಆ ಸಂಖ್ಯೆ ಮುಖಾಂತರ ಆಯಾ ರೈತನಿಗೆ ಸಂಬಂಧಿಸಿದ ದತ್ತಾಂಶದ ಎಲ್ಲ ಮಾಹಿತಿ ಪೋರ್ಟಲ್‌ನಲ್ಲಿ ದೊರೆಯಲಿದೆ. ಎಸ್‌ಸಿ/ಎಸ್‌ಟಿ ವರ್ಗದ ರೈತರಿದ್ದಲ್ಲಿ ಜಾತಿ ಪ್ರಮಾಣ ಪತ್ರ ನೀಡುವುದು ಕಡ್ಡಾಯವಾಗಿದೆ ಎಂದು ಚನ್ನಪ್ಪ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...