ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

0
40

ಕನ್ನಡಮ್ಮ ಸುದ್ದಿ
ಬೆಳಗಾವಿ: ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಹೊಣೆ ಪೆÇೀಷಕರಿಗೆ ಇದೆ ಎಂದು ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮಂಗಳವಾರ ಇಲ್ಲಿನ ಅಜಂನಗರದಲ್ಲಿರುವ ಶ್ರೀ ರೇಣುಕಾಶ್ರಮದಲ್ಲಿ ಏರ್ಪಡಿಸಲಾಗಿದ್ದ ಹುಣ್ಣಿಮೆಯ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಆಧುನಿಕತೆಯ ಹೆಸರಿನಲ್ಲಿ ಇಂದು ಮನುಷ್ಯ ತನ್ನ ನಡೆ ನುಡಿಗಳಲ್ಲಿ ಎಲ್ಲವೂ ಇದ್ದರೂ ಸಿನಿಕತನದಿಂದ ಹೃದಯ ಸಂಪತ್ತು ಕಳೆದುಕೊಂಡು ಪ್ರೀತಿ ಪ್ರೇಮ ಮರೆತು ಬಡವರಾಗುತ್ತಿದ್ದೇವೆ ಎಂದು ಅವರು ಹೇಳಿದರು.
ಮಹಾಲಿಂಗಪುರದ ಸ್ವಾಮೀಜಿ ಮಾತನಾಡಿ, ದುಶ್ಚಟಗಳ ದಾಸರಾಗುತ್ತಿರುವ ನಾವು ನಮ್ಮ ಜೀವನ ಸಂಸ್ಕಾರ ಮರೆಯುತ್ತಿದ್ದೇವೆ. ದೇವರ ನಾಮಸ್ಮರಣೆಯಲ್ಲಿರುವ ಸುಖ, ಶಾಂತಿ, ಸಂತೃಪ್ತಿ ಹಾಗೂ ಅದರಲ್ಲಿರುವ ಶಕ್ತಿ ಜಗತ್ತಿನ ಯಾವುದರಲ್ಲೂ ಇಲ್ಲ ಎಂದು ಅವರು ಹೇಳಿದರು.
ಧರ್ಮ ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ ಎಂದು ಶಾಸ್ತ್ರೀಜಿ ಅವರು ಹೇಳಿದರು. ಪ್ರತಿಯೊಬ್ಬರೂ ತಮ್ಮ ವ್ತಕ್ಯಿತ್ವವನ್ನು ಉತ್ತಮದ ಕಡೆ ಬದಲಾಯಿಸಿಕೊಂಡಾಗ ಎಲ್ಲಾ ಮನೆಗಳು ಮಹಾಮನೆಯಾಗುತ್ತವೆ ಎಂದು ವೈ.ಎಸ್. ಪಾಟೀಲ ಅವರು ಹೇಳಿದರು.
ಪೂಜ್ಯ ಗಂಗಮಾತೆ ಅವರು ಭಕ್ತರಿಗೆ ಆರ್ಶೀವಚನ ನೀಡಿದರು. ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದರು. ಸುನೀತಾ ಪಾಟೀಲ್, ನೈನಾ ಗಿರಿಗೌಡರ್, ಮುಗಳಖೊಡ ಭಜನಾ ತಂಡದವರಿಂದ ಸಂಗೀತ ಸೇವೆ ನಡೆಯಿತು.

loading...