ಪ್ರಚಾರದಲ್ಲಿ ಬೆಂಬಲಿಗರ ದಂಡು ಕಟ್ಟಿಕೊಂಡರೆ ಜೋಕೆ !

0
37

ಎ.ಎಚ್.ಖಾಜಿ

ಶಿರಹಟ್ಟಿ: ಬೆಂಬಲಿಗರ ದಂಡನ್ನು ಕಟ್ಟಿಕೊಂಡು ಶಕ್ತಿ ಪ್ರದರ್ಶಿಸಲು ಮುಂದಾಗುವ ಅಭ್ಯರ್ಥಿಗಳ ಬಿಲ್ಡಪ್‍ಗೂ ಆಯೋಗ ಬ್ರೇಕ ಹಾಕಲು ಮುಂದಾಗಿದೆ.
ವಿಧಾನಸಭಾ ಚುನಾವಣೆ ಪ್ರಚಾರ ದರಪಟ್ಟಿ ಪ್ರಕಟಿಸಿರುವ ಚುನಾವಣಾ ಆಯೋಗ ಮಾನವ ಸಂಪನ್ಮೂಲ ಬಳಕೆ ಹೆಸರಲ್ಲಿ ಅಭ್ಯರ್ಥಿ ಪರವಾಗಿ ಪ್ರಚಾರ ಕೈಗೊಳ್ಳುವ ಪ್ರತೀ ಕಾರ್ಯಕರ್ತ, ಬೆಂಬಲಿಗರಿಗೂ ತಲಾ 500 ಅವರ ಬಳಕೆಯ ದರವನ್ನು ನಿಗದಿಪಡಿಸಿದ್ದು, ಚುನಾವಣಾ ವೆಚ್ಚಕ್ಕೆ ಸೇರ್ಪಡೆಗೊಳಿಸಲಿದೆ.

ಹೌದು ವಿಧಾನಸಭಾ ಚುನಾವಣೆಗೆ ಪ್ರತೀ ಅಭ್ಯರ್ಥಿಗೆ 28 ಲಕ್ಷ ವೆಚ್ಚ ಮಿತಿ ನಿಗದಿಪಡಿಸಿರುವ ಚುನಾವಣೆ ಆಯೋಗ, ಚುನಾವಣಾ ಪ್ರಚಾರಕ್ಕೆ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳು ಬಳಸುವ ಪ್ರತೀ ಪ್ರಚಾರ ಸಾಮಗ್ರಿಗಳಿಗೂ ದರ ನಿಗದಿಪಡಿಸಿ ದರಪಟ್ಟಿ ಪ್ರಕಟಿಸಿದೆ. ಈ ಮೂಲಕ ಹೆಚ್ಚು ವೆಚ್ಚ ಮಾಡಿ ಕಡಿಮೆ ಲೆಕ್ಕ ತೋರಿಸುವ ತಂತ್ರಗಾರಿಕೆಗೂ ನಿರ್ಬಂಧ ಹೇರಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ದರಪಟ್ಟಿ ಪ್ರಕಟಿಸಲಾಗಿದ್ದು, ಪ್ರಚಾರಕ್ಕೆ ಬಳಸುವ ಸಾಮಗ್ರಿಗಳ ಬಳಕೆಯ ಆಧಾರದ ಮೇಲೆ ವೆಚ್ಚವನ್ನು ಲೆಕ್ಕ ಹಾಕಲಾಗುತ್ತದೆ.
ಯಾವುದಕ್ಕೆ ಎಷ್ಟೇಷ್ಟು?: ಆಂಪ್ಲಿಪ್ಲೇಯರ್, ಮೈಕ್ರೋ ಪೋನ್, ಧ್ವನಿವರ್ಧಕಗಳ ಮಾನವ ಸಂಪನ್ಮೂಲ ಸೇರಿದಂತೆ ಬಳಕೆಗೆ (ವಾಹನವನ್ನು ಹೊರತುಪಡಿಸಿ) ಪ್ರತಿದಿನಕ್ಕೆ 2 ಸಾವಿರ ರೂಪಾಯಿ, ಪೆಂಡಾಲ್ ಅಥವಾ ಪೊಡಿಯಂ ನಿರ್ಮಾಣಕ್ಕೆ ದಿನಕ್ಕೆ ಪ್ರತಿ ಚದರ ಅಡಿಯ ಉತ್ತಮ ಕ್ವಾಲಿಟಿಗೆ 5 ರೂಪಾಯಿ, ಮಧ್ಯಮ ಕ್ವಾಲಿಟಿಗೆ 3 ರೂಪಾಯಿ, 5 ಮೀ ಬಟ್ಟೆಯ ಬ್ಯಾರ್ನ ಬಳಕೆಗೆ ದಿನಕ್ಕೆ 600 ರೂಪಾಯಿ, 12*8 ಅಳತೆಯ ಬಟ್ಟೆಯ ಫ್ಲಾಗ್ಗೆ 9 ರೂಪಾಯಿ, 14*31 ಅಳತೆಯ ಫ್ಲಾಗ್ಗೆ 15 ರೂಪಾಯಿ,ಕಪ್ಪು, ಬಿಳಿ ಹ್ಯಾಂಡ್ ಬಿಲ್ಗೆ 1,000 ಪ್ರತಿಗಳಿಗೆ ( 70 ಜಿಎಸ್‍ಎಂ ಪೇಪರ) 1/8 ಗೆ 425, 1/6 ಗೆ 250, ಕಲ್ಲರ್ ಡಿಜಿಟಲ್ ಪ್ರಿಂಟ್ ಹ್ಯಾಂಡ್ ಬಿಲ್ 1000 ಪ್ರತಿಗೆ(70ಜಿಎಸ್‍ಎಂ ಪೇಪರ್) 1/8 ಗೆ 4500 ರೂಪಾಯಿ, 1/6 ಗೆ 5,000 ರೂಪಾಯಿ, ಪ್ರತಿ 100 ಪೋಸ್ಟರ್‍ಗೆ ಎರಡು ಕಡೆ ಮುದ್ರಣಕ್ಕೆ 100 ರೂಪಾಯಿ ಹಾಗೂ 1 ಕಡೆ ಮುದ್ರಣಕ್ಕೆ 60 ರೂಪಾಯಿ, 1.5*3 ಅಳತೆಯ ಹೋಡಿಂಗ್ಸ್‍ಗೆ 45 ರೂಪಾಯಿ, ಪ್ರತಿ ಚದರ ಅಡಿಯ ವುಡನ್ ಕಟೌಟ್ಸ್‍ಗೆ 100, ಬಟ್ಟೆಯ/ಪ್ಲಾಸ್ಟಿಕ್ ಕಟೌಟ್ಸ್‍ಗೆ 160ರೂಪಾಯಿ ನಿಗದಿಪಡಿಸಲಾಗಿದೆ.

ವಿಡಿಯೋ ಕ್ಯಾಸೆಚ್/ಡಿವಿಡಿ ಪ್ರದರ್ಶನ ವಸ್ತುಗಳು ಮತ್ತು ಮಾನವ ಸಂಪನ್ಮೂಲ ಬಳಕೆಗೆ ಪ್ರತಿ ದಿನಕ್ಕೆ 3,000 ರೂಪಾಯಿ, ಆಡಿಯೋ ಕ್ಯಾಸೆಟ್ ಬಳಕೆಗೆ 500ರೂಪಾಯಿ, 40*40 ಅಡಿ ಅಳತೆಯ ಎರಕ್ಷನ ಆಫ್‍ಗೇಟ್ಸ್…ಬಳಕೆಗೆ ಪ್ರತಿ ದಿನಕ್ಕೆ 950 ರಿಂದ 1300ರೂಪಾಯಿ, 5*5 ಅಡಿ ಅಳತೆಯ ಎರಕ್ಷನ್ ಆಫ್ ಆರ್ಚಸ್ ಬಳಕೆಗೆ ಪ್ರತಿ ದಿನಕ್ಕೆ 520 ರಿಂದ 780 ರೂಪಾಯಿ, ಗೂಡ್ಸ… ವಾಹನಗಳ ಬಳಕೆಗೆ ಪ್ರತಿ ದಿನವೊಂದಕ್ಕೆ(ಟೆಂಪೊ,ಟ್ರಕ್ ಇತ್ಯಾದಿ) 4400ರಿಂದ 5200 ರೂಪಾಯಿ ,ಮೋರ್ಟಾ ಕ್ಯಾಬ್ ವಾಹನಗಳ ಬಳಕೆಗೆ ಪ್ರತಿ ದಿನವೊಂದಕ್ಕೆ(ಸುಮೋ/ಕ್ವಾಲಿಸ್/ಜೀಪ್/ಕಾರ) 1900ರಿಂದ 2400 ರೂಪಾಯಿ, 3 ಚಕ್ರದ ಅಟೋರಿಕ್ಷಾ ಬಳಕೆಗೆ ಪ್ರತಿ ದಿನವೊಂದಕ್ಕೆ 1200 ರೂಪಾಯಿ, ಹೋಟೆಲ್ ರೂಮ್…/ಗೆಸ್ಟ್ ಹೌಸ್‍ಗಳ ಬಳಕೆಗೆ ಪ್ರತಿದಿನಕ್ಕೆ 600ರಿಂದ 1500ರೂಪಾಯಿ, ಚಾಲಕರ ವೇತನ ದಿನಕ್ಕೆ 500ರೂಪಾಯಿ, ಪ್ರತಿದಿನಕ್ಕೆ 1.5*6 ಅಳತೆಯ ಟೇಬಲ್‍ಗಳ ಬಳಕೆಗೆ 60ರೂಪಾಯಿ, ಆಮ್ಸ್…ರ್ ಸಹಿತ ಪ್ಲಾಸ್ಟಿಕ್ ಚೇರಗಳ ಬಳಕೆಗೆ ಪ್ರತಿ ಚೇರ್‍ಗೆ 4 ರೂಪಾಯಿ, ಆಮ್ಸ್…ರ್ ರಹಿತ ಪ್ಲಾಸ್ಟಿಕ್ ಚೇರ್‍ಗಳ ಬಳಕೆಗೆ ಪ್ರತಿ ಚೇರ್‍ಗೆ 3 ರೂಪಾಯಿ, ನಗರಸಭೆ ವ್ಯಾಪ್ತಿಯ ಪ್ರತಿ ಚದರ ಅಡಿಯ ಲೈಟಿಂಗ್ ರಹಿತ ಹೋಡಿಂಗ್ ಬಳಕೆಗೆ ಪ್ರತಿ ದಿನಕ್ಕೆ 10 ರೂಪಾಯಿ,ಲೈಟಿಂಗ್ ಸಹಿತ ಹೋಡಿಂಗ್ ಬಳಕೆಗೆ 50 ರೂಪಾಯಿ , ಡಯಾಸ್ ಬಳಕೆಗೆ ಪ್ರತಿದಿನಕ್ಕೆ 1.5 ಅಡಿ ಎತ್ತರದ ಪ್ರತಿ ಚದರ ಅಡಿಗೆ 8 ರೂಪಾಯಿ, 2.5 ಅಡಿ ಎತ್ತರದ ಚದರ ಅಡಿಯ ಡಯಾಸ್‍ಗೆ 10 ರೂಪಾಯಿ, 4 ಅಡಿ ಎತ್ತರದ ಚದರ ಅಡಿಯ ಡಯಾಸ್‍ಗೆ 25 ರೂಪಾಯಿ, 6 ಅಡಿ ಎತ್ತರದ ಚದರ ಅಡಿಯ ಡಯಾಸ್‍ಗೆ 32 ರೂಪಾಯಿ ವಿಧಿಸಲಾಗುತ್ತದೆ.
ಸೈಕಲ್ ರಿಕ್ಷಾ, ಗೋಡೆಬರಹಕ್ಕೆ ನಿಷೇಧ!:

ಒಂದು ಚದರ ಅಡಿಯ ಕಾರ್ಪೆಟ್ ಬಳಕೆಗೆ ಪ್ರತಿದಿನಕ್ಕೆ 2 ರೂಪಾಯಿ, 10*20 ಅಳತೆಯ ಎಲ್‍ಇಡಿ ಸ್ಕ್ರೀನ್ ಬಳಕೆಗೆ ಪ್ರತಿದಿನಕ್ಕೆ 150 ರೂಪಾಯಿ, 1000 ವ್ಯಾಟ್ನ್ ಪೊಕಸ್ ಲೈಟ್ ಬಳಕೆಗೆ ಪ್ರತಿದಿನಕ್ಕೆ 200ರೂಪಾಯಿ, ಟ್ಯೂಬ್‍ಲೈಟ್ ಬಳಕೆಗೆ 40 ರೂಪಾಯಿ, 5 ಕಿಲೋವ್ಯಾಟ್ಸ್ ಜನರೇಟರ್ ಬಳಕೆಗೆ ಪ್ರತಿ ದಿನಕ್ಕೆ 1,800 ರೂಪಾಯಿ, 10 ಅಡಿಯ ಸೈಡ್ವಾಲ್ ಬಳಕೆಗೆ ಪ್ರತಿದಿನಕ್ಕೆ 300ರೂಪಾಯಿ, ಮಾನವ ಸಂಪನ್ಮೂಲ ಬಳಕೆಗೆ ಪುರುಷ ಮತ್ತು ಮಹಿಳೆಯರಿಗೆ ಪ್ರತಿದಿನಕ್ಕೆ 500 ರೂಪಾಯಿ, 25 ಲೀಟರ್ ಮಿನರಲ್ ವಾಟರ್ ಕ್ಯಾಂನ್ ಬಳಕೆಗೆ ಒಂದಕ್ಕೆ 30 ರೂಪಾಯಿ ಮತ್ತು ಚದರ ಅಡಿಯ ಡಿಜಿಟಲ್ ಫ್ಲೇಕ್ಸ್ ಬಳಕೆಗೆ 12 ರೂಪಾಯಿ ಲೆಕ್ಕಕ್ಕೆ ಪರಿಗಣಿಸಲಾಗುವುದು. ಪ್ರಚಾರಕ್ಕೆ ಸೈಕಲ್ ರಿಕ್ಷಾಗಳನ್ನು ಬಳಸುವಂತಿಲ್ಲ ಹಾಗೂ ಗೋಡೆ ಬರಹಗಳನ್ನು ನಿಷೇಧಿಸಲಾಗಿದೆ. ಈ ವಸ್ತುಗಳನ್ನು ಬಳಸಿದ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಚುನಾವಣಾ ವೆಚ್ಚದ ¯ಕ್ಕಕ್ಕೆ ಪರಿಗಣಿಸಲಾಗುವುದು ಎನ್ನಲಾಗಿದೆ.

loading...