ಪ್ರಚೋದನಕಾರಿ ಸುದ್ದಿ ಬಿತ್ತರಿಸುವ ಮರಾಠಿ ಮಾಧ್ಯಮ ವಿರುದ್ಧ ಕ್ರಮ; ಡಿಸಿ ಎಚ್ಚರಿಕೆ

0
158

 

ಸನ್ನಡಮ್ಮ ಸುದ್ದಿ.
ಬೆಳಗಾವಿ,
ಯೋಗ್ಯ ವರದಿ ಬಿತ್ತರಿಸಿ ನಮದೇನೂ ಅಭ್ಯಂತರ ಇಲ್ಲ. ಆದರೆ ಪ್ರಚೋಧಿಸುವ ಸುದ್ದಿಗಳನ್ನು ವೈಭವಿಕರಿಸಿ ಜನರ ಮುಂದಿಡುವ ಮರಾಠಿ ಮಾದ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮರಾಠಿ ಮಾದ್ಯಮಗಳು ಅತಿರೇಕದ ವರದಿಗಳನ್ನು ಪ್ರಕಟಿಸಿ ಶಾಂತಿ ಸುವ್ಯವಸ್ಥೆ ಹದಗೆಡಿಸುವವುದು ಉತ್ತಮ ಬೆಳವಣಿಗೆ ಅಲ್ಲ. ದುರುದ್ದೇಶದಿಂದ ಮಾಡಿದರೆ ಬರೆದ ವರದಿಗಾರ ಹಾಗೂ ಸಂಪಾದರಕ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

loading...