ಪ್ರಣಬ್ ಮುಖರ್ಜಿ, ಹಾಲಿ ಸದಸ್ಯ ವಸಂತಕುಮಾರ್, ಜಸ್ ರಾಜ್ ಗೆ ಲೋಕಸಭೆ ಕಂಬನಿ

0
5

ನವದೆಹಲಿ:- ಅಗಲಿದ ಮಾಜಿ ರಾಷ್ಟ್ರಪತಿ, ಹಿರಿಯ ರಾಜಕೀಯ ಧುರೀಣ ಪ್ರಣಬ್ ಮುಖರ್ಜಿ, ಹಾಲಿ ಸದಸ್ಯ ಎಚ್. ವಸಂತಕುಮಾರ್ ಮತ್ತು ಖ್ಯಾತ ಸಂಗೀತ ಗಾಯಕ ಪಂಡಿತ್ ಜಸರಾಜ್ , ದೇಶಕ್ಕಾಗಿ ಹುತಾತ್ಮರಾದ ಯೋಧರರಿಗೆ ಲೋಕಸಭೆ ಮೊದಲ ದಿನವೇ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿತು .
ಈ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಉಪಸ್ಥಿತರಿದ್ದರು ಮತ್ತು ಎಲ್ಲಾ ಸದಸ್ಯರು ಮುಖವಾಡಗಳನ್ನು ಧರಿಸಿ ದೂರ ಕುಳಿತಿದ್ದರು.
ದೇಶಕ್ಕಾಗಿ ಹುತಾತ್ಮರಾದ ಯೋಧರಿಗೂ ಸದನ ಗೌರವ ಸಲ್ಲಿಸಿತು.ವೈದ್ಯರು, ದಾದಿಯರು, ಆಶಾ ಕಾರ್ಮಿಕರು, ಕ್ಲೀನರ್‌ಗಳು ಮತ್ತು ಪೊಲೀಸ್ ಪ್ರತಿನಿಧಿಗಳು ಸೇರಿದಂತೆ ಕರೋನಯೋಧರಿಗೆ ಸ್ಪೀಕರ್ ಕೃತಜ್ಞತೆ ಸಲ್ಲಿಸಿದರು.ಸದನ ಸಮಾವೇಶಗಳ್ಳುತ್ತಿದ್ದಂತೆ ಸ್ಫೀಕರ್ ಒಂ ಬಿರ್ಲಾ ಸಂತಾಪ ನಿರ್ಣಯ ಕೈಗೊಂಡರು. ಮೊದಲಿಗೆ ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸಂತಾಪ ವ್ಯಕ್ತಪಡಿಸಿ ಅವರ ಸೇವೆಯನ್ನು ಸ್ಮರಿಸಿದರು.
ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಗೌರವಿಸಿದ ಮತ್ತು ಅತ್ಯಂತ ಯಶಸ್ವಿ ರಾಜಕಾರಣಿಯಾಗಿದ್ದ ಮುಖರ್ಜಿ ಎತ್ತರದ ನಾಯಕರಾಗಿದ್ದರು ಎಂದು ಗುಣಗಾನ ಮಾಡಿದರು. ಮುಖರ್ಜಿ ಆಗಸ್ಟ್ 31 ರಂದು ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾದರು.

ಅವರು ಸುದೀರ್ಘ ಮತ್ತು ಯಶಸ್ವಿ ರಾಜಕೀಯ ಜೀವನ ನಡೆಸಿದ್ದಾರೆ. ಹಲವು ಪುಸ್ತಕಗಳನ್ನು ಬರೆದಿದ್ದಾರೆ ಎಂದೂ ಸ್ಪೀಕರ್ ಹೇಳಿದರು.
ಕನ್ಯಾಕುಮಾರಿ ಕ್ಷೇತ್ರದ ಹಾಲಿ ಸದಸ್ಯ ಎಚ್ ವಸಂತಕುಮಾರ್, ಭಾರತೀಯ ಶಾಸ್ತ್ರೀಯ ಗಾಯಕ ಪಂಡಿತ್ ಜಸರಾಜ್ ಅವರ ನಿಧನಕ್ಕೂ ಸದನ ಸಂತಾಪ ವ್ಯಕ್ತಪಡಿಸಿತು.
ಪಂಡಿತ್ ಜಸರಾಜ್ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ್ ಪ್ರಶಸ್ತಿಗೂ ಭಾಜನರಾಗಿದ್ದರು ಎಂದು ಗುಣಗಾನ ಮಾಡಿದರು. ನಂತರ ಮೃತರ ಗೌರವಾರ್ಥ ಸದನ ಒಂದು ನಿಮಿಷ ಮೌನ ಆಚರಿಸಿತು.

loading...