ಪ್ರತಿಯೊಬ್ಬರು ಕನ್ನಡದ ಉಳಿವಿಗೆ ಶ್ರಮಿಸೋಣ : ಡಾ. ಹಾರುಗೊಪ್ಪ

ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ
ಕಿತ್ತೂರು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ.

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು.
ಭಾವನಾತ್ಮಕವಾಗಿ ನಾವೆಲ್ಲರು ಕನ್ನಡಿಗರು, ಆದರೆ ನಾವೆಲ್ಲರೂ ಕ್ರೀಯಾತ್ಮಕವಾಗಿ ಕನ್ನಡಿಗರಾಗಬೇಕಾಗಿದೆ ಎಂದು ಕಿತ್ತೂರು ಕನ್ನಡ ಸಾಹಿತ್ಯ ಪರಿಷತ ಅಧ್ಯಕ್ಷ ಡಾ. ಜಗದೀಶ ಹಾರುಗೊಪ್ಪ ಹೇಳಿದರು.
ಇವರು ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ತಾಲೂಕಿನ ಎಮ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಇರುವ ತಮ್ಮ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿ ಕರೆದು ಪ್ರತಿಯೊಬ್ಬರು ಕನ್ನಡದ ಉಳಿವಿಗೆ ಶ್ರಮಿಸುವ ಆದ್ಯ ಕರ್ತವ್ಯವಾಗಿದೆ ಎಂದು ಮಾತನಾಡಿದ ಅವರು ಪ್ರತಿಯೊಬ್ಬರಲ್ಲಿ ನಾಡು ನುಡಿ ಬಗ್ಗೆ ಸಾಕಷ್ಟು ಕಾಳಜಿ, ಪ್ರೀತಿ ಇದೆ ಇದನ್ನು ಇನ್ನು ಹೆಚ್ಚಿಸಲು ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳಿಸುವ ಮುಲಕ, ಕನ್ನಡದಲ್ಲಿ ವ್ಯವಹಾರಿಸುವ ಮೂಲಕ, ಶುದ್ಧವಾಗಿ ಕನ್ನಡ ಮಾತನಾಡುವ ಮೂಲಕ ಕನ್ನಡದ ಬೆಳವಣಿಗೆ ಶ್ರಮಿಸಬೇಕು ಎಂದರು. ಬಹುದು.
ಕನ್ನಡದಲ್ಲಿ ಎಲ್ಲ ವಿಷಯವನ್ನು ಕಲಿಯಬೇಕು ಜೊತೆಗೆ ಇಂಗ್ಲಿಷ್, ಹಿಂದಿ ಭಾಷೆಗಳನ್ನು ಅಧ್ಯಯನ ಮಾಡಬೇಕು. ಆದರೆ ಇತ್ತೀಚಿಗೆ ಇಂಗ್ಲೀಷನಲ್ಲಿಯೇ ಎಲ್ಲ ವಿಷಯ ಅಧ್ಯಯನ ಮಾಡುವಂತಾಗಿದೆ ಇದು ದೊಡ್ಡ ದುರಂತ, ಇದರಿಂದ ಕನ್ನಡದ ಬೆಳವಣಿಗೆಗೆ ಕುಂಟಿತವಾಗುತ್ತಿದೆ ಎಂದರು.
ಜಪಾನ, ಜರ್ಮನ, ಫ್ರಾನ್ಸ, ಚೀನಾದಂತ ರಾಷ್ಟ್ರದಲ್ಲಿ ಕಡ್ಡಾಯವಾಗಿ ಅವರ ಮಾತೃ ಭಾಷೆಯಲ್ಲಿ ಅಧ್ಯಯನ ಮಾಡುತ್ತಿರುವುದುರಿಂದ ಆ ರಾಷ್ಟ್ರಗಳು ತಂತ್ರಜ್ಞಾನದಲ್ಲಿ ಮುಂದು ವರೆಯುತ್ತಿವೆ. ಭಾಷೆಯನ್ನು ಹಾಳು ಮಾಡಿದರೆ ಅಲ್ಲಿಯ ಸಂಸ್ಕøತಿ ಹಾಳಾಗುತ್ತೆ ಅದಕ್ಕಾಗಿ ನಮ್ಮ ಸಂಸ್ಕøತಿಗಾಗಿ ನಮ್ಮ ಕನ್ನಡ ಭಾಷೆಯನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯಗಳು ಆಗಬೇಕು ಇದು ಸರಕಾರ ಅಷ್ಟೇ ಮಾಡಿದರೆ ಸಾಲದು ಅದನ್ನು ಪ್ರತಿಯೊಬ್ಬ ಕನ್ನಡಿಗ ತನ್ನ ನಿತ್ಯ ಜೀವನದಲ್ಲಿ ಪಾಲಿಸಬೇಕು.
ಒಬ್ಬ ವ್ಯಕ್ತಿಗೆ ಯಾವುದಾದರು ವಿಷಯವನ್ನು ಮಾತೃ ಭಾಷೆಯಲ್ಲಿ ಹೇಳಿದರೆ ಆತನ ಹೃದಯಕ್ಕೆ ಮುಟ್ಟತ್ತದೆ ತಮಗೆ ಗೊತ್ತಿದ್ದ ಭಾಷೆಯಲ್ಲಿ ಹೇಳಿದರೆ ಕೇಳುವ ವ್ಯಕ್ತಿಯ ಮೆದುಳಿಗೆ ಮಾತ್ರ ಮುಟ್ಟುತ್ತೆ ಎಂದು ನೆಲ್ಸೇನ್ ಮಂಡೇಲ್ ಅಭಿಪ್ರಾಯ ಪಟ್ಟಿದ್ದಾರೆ ಎಮದರು.
ಇಂಗ್ಲೀಷನ್ನು ಭಾಷೆಯಾಗಿ ಕಲಿಯಲೂ ಯಾರ ಅಭ್ಯಂರ್ಥರವಿಲ್ಲ ಆದರೆ ಪ್ರಥಮ ಆಧ್ಯತೆಯನ್ನು ಮಾತೃ ಭಾಷೆಗೆ ನೀಡಬೇಕು. ಅನಿವಾರ್ಯವಾಗಿ ನಮ್ಮ ಜೊತೆ ವ್ಯವಹರಿಸುವ ವ್ಯಕ್ತಿಗೆ ಕನ್ನಡ ಗೊತ್ತಿಲ್ಲದಿದ್ದಾಗ ಅನ್ಯ ಭಾಷೆ ಬಳಿಸಿದರೆ ತಪ್ಪಲ್ಲ. ಭಾವನಾತ್ಮಕ ಕನ್ನಡದ ಜೊತೆಗೆ ಕ್ರೀಯಾತ್ಮಕ ಕನ್ನಡವನ್ನು ನಾವು ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಪತ್ರ ವ್ಯವಹಾವನ್ನು ಕನ್ನಡದಲ್ಲಿ ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ಸರಕಾರ ಸಹ ಇದಕ್ಕೆ ಬದ್ಧವಾಗಿರಬೇಕು. ವಿಜ್ಞಾನ ತಂತ್ರಜ್ಞಾನದ ಬಗ್ಗೆ ಸುಲಭವಾಗಿ ತಿಳಿಯಲು ವಿಷಯ ವಸ್ತುವನ್ನು ಕನ್ನಡದಲ್ಲಿ ಮುದ್ರಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕು. ಉದಾಹಣೆಗೆ ಬೈಕ್ ಖರೀದಿಸಿದಾಗ ಅದಕ್ಕೆ ಬೈಕ್ ನಿರ್ವಹಣೆ ಪುಸ್ತಕ ಇಂಗ್ಲೀಷನಲ್ಲಿ ಇರುತ್ತದೆ ಇದು ಹಳ್ಳಿ ಜನರಿಗೆ ಯಾವ ರೀತಿ ಉಪಯೋಗವಾಗುವುದಿಲ್ಲ ಇಂತಹ ಸಣ್ಣ ಪುಟ್ಟ ವಿಚಾರಗಳು ಸಹ ಕನ್ನಡದಲ್ಲಿ ಮುದ್ರಣವಾದರೆ ಕನ್ನಡ ಅಭಿವೃದ್ದಿ ಇನ್ನು ಹೆಚ್ಚುತೆ ಎಂದರು. ಅದಕ್ಕಾಗಿ ಕನ್ನಡದ ಅಭಿಮಾನ ಕೇವಲ ಒಂದು ದಿನಕ್ಕೆ ಸಿಮೀತವಾಗದೆ ವರ್ಷವಿಡಿ ನಮ್ಮ ಶರೀರದ ಪ್ರತಿ ರಕ್ತ ಕಣದಲ್ಲೂ ಕನ್ನಡ ಬೆಳೆದರೆ ನಮ್ಮ ಮಾತೃ ಭಾಷೆ ಬೆಳೆಯಲು ಸಾಧ್ಯ ಅದಕ್ಕಾಗಿ ಪ್ರತಿಯೊಬ್ಬ ಕನ್ನಡಿಗ ಕಲಾವಿದ ಸಾಹಿತಿ ಯುವವರರಲ್ಲಿ ಕನ್ನಡದ ಉಳಿವಿಗಾಗಿ ಪಣ ತೊಟ್ಟು ನಿಲ್ಲಬೇಕು ಎಂದರು.

loading...