ಪ್ರತಿಯೊಬ್ಬರೂ ಧರ್ಮಾಚರಣೆ ಮಾಡಬೇಕು

0
25

ಗೋಕಾಕ 05: ಹೆಚ್ಚು ಹೆಚ್ಚು ಧಾರ್ಮಿಕ ಆಚರಣೆಗಳನ್ನು ಆಚರಿಸುವುದರ ಮೂಲಕ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿ, ಸಮೃದ್ಧಿ ಬದುಕು ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಧರ್ಮಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಯುವ ಧುರೀಣ ಲಖನ್ ಜಾರಕಿಹೊಳಿ ಹೇಳಿದರು.
ಅವರು, ಇಲ್ಲಿಯ ಆದಿತ್ಯ ನಗರದ ಶ್ರೀ ಆಂಜನೇಯ ದೇವಸ್ಥಾನದ ಕಾರ್ತಿಕೋತ್ಸವದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶ, ನಾಡು ಮತ್ತು ಸಮಾಜವನ್ನು ಕಟ್ಟಿ ಬೆಳೆಸಲು ಧಾರ್ಮಿಕ ಆಚರಣೆಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ತಾವೂ ಕೂಡ ಈ ದಿಶೆಯಲ್ಲಿ ಸಾಗಿದ್ದೇವೆ. ಇದರ ಜೊತೆಗೆ ನಮ್ಮ ಹಿರಿಯ ಶಾಸಕ ಸಹೋದರ ರಮೇಶ ಜಾರಕಿಹೊಳಿ ಕೂಡ ಇದನ್ನು ಮನಗಂಡು ಅವರ ಕ್ಷೇತ್ರಾದ್ಯಂತ ಗುಡಿ ಗೋಪುರಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಲಖನ್ ಜಾರಕಿಹೊಳಿ ತಿಳಿಸಿದರು.
ಕಾರ್ತಿಕೋತ್ಸವದ ನಿಮಿತ್ಯ ದೇವರಿಗೆ ಅಭಿಷೇಕ, ಪಲ್ಲಕ್ಕಿ ಉತ್ಸವ, ಮದ್ದು ಹಾರಿಸುವುದು, ಮಹಾ ಪ್ರಸಾದ ಹಾಗೂ ರಾತ್ರಿ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ದೇವಸ್ಥಾನ ಕಮೀಟಿಯ ಅಧ್ಯಕ್ಷ ಕೆಂಚಗೌಡ ಗೌಡರ, ಉಪಾಧ್ಯಕ್ಷ ರಮೇಶ ಮಾವಿನಗಿಡದ, ಸಿ.ಎಸ್.ಮೆನಸಿನಕಾಯಿ, ಚಂದ್ರಶೇಖರ ಕಾಡನ್ನವರ, ಎಲ್.ಎಲ್.ಓಜಪ್ಪಗೋಳ, ನಗರಸಭೆ ಸದಸ್ಯ ಸಿದ್ದಪ್ಪ ಹುಚ್ಚರಾಯಪ್ಪಗೋಳ, ಪಾಂಡು ಮನ್ನಿಕೇರಿ ಸೇರಿದಂತೆ ಅನೇಕರು ಇದ್ದರು.

loading...

LEAVE A REPLY

Please enter your comment!
Please enter your name here