ಪ್ರತ್ಯೆಕ ರಾಜ್ಯಕ್ಕೆ ಬೆಂಬಲವಿಲ್ಲ: ಕರವೇ ಪ್ರತಿಭಟನೆ

0
19

ಪ್ರತ್ಯೆಕ ರಾಜ್ಯಕ್ಕೆ ಬೆಂಬಲವಿಲ್ಲ: ಕರವೇ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ:ಅಭಿವೃದ್ಧಿಯಾಗಿಲ್ಲ ಎಂದು ಅಖಂಡ ಕರ್ನಾಟಕ ಒಡೆದು ಪ್ರತ್ಯೆಕ ಕರ್ನಾಟಕ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಬೆಂಬಲವಿಲ್ಲ,ಉತ್ತರ ಕರ್ನಾಟಕವನ್ನು ನಿರ್ಲಕ್ಷö್ಯವನ್ನು  ಸಹಿಸಲ್ಲ ಎಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಚನ್ನಮ್ಮಾ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಯಾವುದೇ ಕಾರಣಕ್ಕೂ ರಾಜ್ಯ ಒಡೆಯಲು ಬಿಡುವುದಿಲ್ಲ.ಅಭಿವೃದ್ಧಿಯಾಗಿಲ್ಲ ಅದಕ್ಕೆ ಸರಕಾರದ ಕಿವಿ ಹಿಂಡು ಕಾರ್ಯವನ್ನು ಇಲ್ಲಿನ ಜನಪ್ರತಿನಿಧಿಗಳು ಮಾಡಬೇಕು ಎಂದು ಒತ್ತಾಯಿಸಿದರು.ಕೇಲ ರಾಜಕಾರಣಿಗಳು ಅಭಿವೃದ್ಧಿಯಾಗಿಲ್ಲ ಜನ ಸಾಮಾನ್ಯರನ್ನು ದಾರಿ ತಪ್ಪಿಸಿ ಸ್ವಾರ್ಥ ರಾಜಕಾರಣಕ್ಕೆ ಪ್ರತ್ಯೆಕತೆ ಕೂಗು ಎಬ್ಬಸುತ್ತಿದ್ದಾರೆ ಇದನ್ನು ಕರವೇ ಖಂಡಿಸುತ್ತದೆ ಎಂದು ಆಕ್ರೊಶ ವ್ಯಕ್ತಪಡೆಸಿದರು.
ಈ ಸಂಧರ್ಭದಲ್ಲಿ ಜಿಲ್ಲಾದ್ಯಕ್ಷ ವಾಜೀದ್ ಹೀರೆಕುಡಿ,ಪ್ರಭು ಕಾಕತೀಕರ,ಭಾರತಿ ಸಮಸಶೇಟ್ಟಿ ಸೇರಿದಂತೆ ಇತರರು ಇದ್ದರು.

loading...