ಪ್ರತ್ಯೇಕ ಲಿಂಗಾಯಿತ ಧರ್ಮದ ಬಗ್ಗೆ ಮಾತನಾಡುವ ಹಕ್ಕು ಡಿ.ಕೆ ಶಿವಕುಮಾರ್‌ಗೆ ಇಲ್ಲ

0
8

ಬೆಂಗಳೂರು:- ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಧರ್ಮದ ಮುಖಂಡರೂ ಅಲ್ಲ ಹಾಗೂ ಕಾಂಗ್ರೆಸ್‌ ಹೈ ಕಮಾಂಡ್‌ ಅಲ್ಲ ಹಾಗಾಗಿ, ಲಿಂಗಾಯಿತ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ರಾಷ್ಟ್ರೀಯ ಬಸವದಳ‌ ಕೇಂದ್ರ ಸಮಿತಿ ಕಾರ್ಯದರ್ಶಿ ಬಸವಾನಂದ ಸ್ವಾಮೀಜಿಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್‌ ಕಾಂಗ್ರೆಸ್ ಪಕ್ಷದ ಮುಖಂಡರೋ ಅಥವಾ ವಿರೋಧಿಗಳೋ ? ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಅವರಿಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ಏಕೆಂದರೆ ಅವರು ಧರ್ಮದ ಮುಖಂಡರಲ್ಲ. ಅಲ್ಲದೆ, ಕಾಂಗ್ರೆಸ್ ಹೈಕಮಾಂಡೂ ಅಲ್ಲ.‌ ಈ ಬಗ್ಗೆ‌ ರಾಹುಲ್‌ಗಾಂಧಿ ಮಾತನಾಡಬೇಕು ಇಲ್ಲ ಪಕ್ಷದ ಅಧ್ಯಕ್ಷರು ಮಾತನಾಡಬೇಕು ಎಂದು ಹೇಳಿದರು.
೧೨ ನೇ ಶತಮಾನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಾಂವಿಧಾನಿಕ ಅಲ್ಪಸಂಖ್ಯಾತ ಸ್ಥಾನಮಾನ ಹಲವು ದಶಕಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಒಮ್ಮತ ಸೂಚಿಸಿದ್ದರು ಹಾಗೂ ಲಿಂಗಾಯಿತ ಪ್ರತ್ಯೇಕ ಧರ್ಮವನ್ನು ಸ್ಥಾಪನೆಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿತ್ತು ಎಂದು ತಿಳಿಸಿದರು.

ಆದರೆ, ಸಚಿವ ಡಿ.ಕೆ.ಶಿವಕುಮಾರ್ ಚುನಾವಣೆ ಬಂದಿರುವ ಸಂದರ್ಭದಲ್ಲಿ ತಮಗೆ ಸಂಬಂಧವಿಲ್ಲ ಎಂದು ಹೇಳಿರುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಸಂಬಂಧವಿಲ್ಲದ ಲಿಂಗಾಯತ ಪ್ರತ್ಯೇಕ ಧರ್ಮ‌ವಿಚಾರದಲ್ಲಿ ಮೂಗು ತೂರಿಸಬಾರದು. ಹಿಂದೆ ಶಿಫಾರಸ್ಸು ಮಾಡಿರುವುದು ತಪ್ಪು ಎಂದು ಪದೇ-ಪಡೆ ಹೇಳುವುದು ಒಳಿತಲ್ಲ. ಮುಗಿದ ಅಧ್ಯಾಯದ ಬಗ್ಗೆ ಇವರು ಪ್ರಸ್ತಾಪಿಸೋದು ಸರಿಯಲ್ಲ ಎಂದರು.
ಸಿದ್ದರಾಮಯ್ಯ ಹೆಸರು ಲಿಂಗಾಯತ ಪ್ರತ್ಯೇಕ ಧರ್ಮದಲ್ಲಿ ‌ಅಜರಾಮರವಾಗಿ ಉಳಿಯಲಿದೆ‌.
ಚುನಾವಣೆ ಮುಗಿದ ಬಳಿಕ ನಾವು ಮತ್ತೆ ನಮ್ಮ‌ ಹೋರಾಟವನ್ನು ಮುಂದುವರಿಸಲಿದ್ದೇವೆ.
ಹೊಸ ಸರ್ಕಾರ ಯಾವುದೇ ಇರಲಿ. ಅದು ಎನ್‌ಡಿಎ ಅಥವಾ ಯುಪಿಎ ಸರ್ಕಾರವೇ ಬರಲಿ ಕೇಂದ್ರ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ನಾವು ಆಗ್ರಹಿಸುತ್ತೇವೆ ಎಂದು ಹೇಳಿದರು.
ಶಿವನನ್ನು ಆರಾಧಿಸುವವರೆಲ್ಲ ಹಿಂದೂಗಳು ಎಂಬ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಪೇಜಾವರ ಶ್ರೀಗಳ ಈ ಹೇಳಿಕೆ ಖಂಡನೀಯ.‌ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ. ಬಸವಣ್ಣ ನವರ ಪ್ರಕಾರ ನಾವು ಪೌರಾಣಿಕ ಶಿವನ ಪೂಜೆ ಮಾಡಲ್ಲ. ಕೊರಳಲ್ಲಿರುವ ಶಿವಲಿಂಗವನ್ನು ನಿರಾಕಾರ ನಿರ್ಗುಣ ಇಷ್ಟಲಿಂಗ ಪೂಜೆ ಮಾಡುತ್ತೇವೆ‌. ಇದನ್ನು ಪೇಜಾವರ ಶ್ರೀಗಳು ತಿಳಿಯಬೇಕು.
ಹಿಂದು ವೈದಿಕ‌ ಧರ್ಮದಲ್ಲಿ ಬೇಧ-ಭಾವ ಇದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂತಿದೆ. ಆದರೆ ಸ್ವತಂತ್ರ‌ ಲಿಂಗಾಯತ ಧರ್ಮದಲ್ಲಿ ಜಾತಿ ಬೇಧ ಇಲ್ಲ” ಎಂದು ಹೇಳಿದರು.
ಮಹಾರಾಷ್ಟ್ರದ ಕಾಗ್ರೆಸ್ ಅಧ್ಯಕ್ಷ‌ ಲಿಖಿತ ರೂಪದಲ್ಲಿ ಪ್ರತ್ಯೇಕ ಧರ್ಮಕ್ಕೆ ಬೆಂಬಲ‌ ನೀಡಿದ್ದಾರೆ. ಅದನ್ನು ನಾವು ಸ್ವಾಗತಿಸಬೇಕು. ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ತಮ್ಮ‌ನಿಲುವನ್ನು ಲಿಖಿತ ರೂಪದಲ್ಲಿ ಸ್ಪಷ್ಟಪಡಿಸಬೇಕು.

loading...