ಪ್ರಧಾನಿ ಭೇಟಿಗೂ ಮುನ್ನವೇ ಬಿಜೆಪಿ ನಾಯಕನ ಹತ್ಯೆ

0
20

ಭುವನೇಶ್ವರ:- ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಗೂ ಮುನ್ನವೇ ರಾಜ್ಯದಲ್ಲಿ ನೆತ್ತರು ಹರಿದಿದ್ದು, ಚುನಾವಣಾ ಹಿಂಸಾಚಾರಕ್ಕೆ ಬಿಜೆಪಿ ಹಿರಿಯ ನಾಯಕ ಮುಂಗಲಿ ಜೆನ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಈ ಘಟನೆಯನ್ನೂ ಖಂಡಿಸಿ ಬಿಜೆಪಿ 14 ಗಂಟೆಗಳ ಖೋರ್ಡ ಬಂದ್‌ಗೆ ಕರೆ ನೀಡಿದ್ದು, ಕೂಡಲೇ ಕೊಲೆ ಪಾತಕರನ್ನು ಬಂಧಿಸಬೇಕು ಮತ್ತು ಅವರ ವಿರುದ್ಧ ಸೂಕ್ರ ಕ್ರಮ ಜರುಗಿಸಬೇಕು ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೂಲಗಳ ಪ್ರಕಾರ, ಸ್ಕೂಟರ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಹಳ ಹತ್ತಿರದಿಂದ ಗುಂಡು ಹಾರಿಸಿದರು. ಇದರ ಪರಿಣಾಮ, ಮುಂಗಲಿ ಜೆನ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಿಜೆಪಿ ಕಚೇರಿ ಹಾಗೂ ಎಸ್‌ಪಿ ಕಚೇರಿ ಬಳಿಯೇ ಈ ಘಟನೆ ಜರುಗಿದೆ. ಈ ಸಮಯದಲ್ಲಿ ಕುದ್ರಾ ಬಿಜೆಪಿ ಅಭ್ಯರ್ಥಿ ಕಾಲು ಖಂಡಯಾತ್ರ ಹಾಜರಿದ್ದರು.

ಅಪರಿಚಿತ ದುಷ್ಕರ್ಮಿಗಳು ಬಹಳ ಹತ್ತಿರದಿಂದ ಜೆನ ಅವರ ಮೇಲೆ ಗುಂಡಿನ ಮಳೆಗರೆದು ನಂತರ ಮಿಂಚಿನ ವೇಗದಲ್ಲಿ ಪರಾರಿಯಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಆದರೆ ಈ ಘಟನೆಯಲ್ಲಿ ಬಿಜೆಪಿ ಅಭ್ಯರ್ಥಿ ಬಹಳ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೂಡಲೇ ಪೊಲೀಸರು ಧಾವಿಸಿ ಮೃತ ಜೆನ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ, ಹಂತಕರ ಪತ್ತೆಗೆ ವ್ಯಾಪಕ ಬಲೆ ಬೀಸಿದ್ದಾರೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿ, ಅಪರಾಧಿಗಳ ವಿರುದ್ಧ ಸೂಕ್ರ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.

ಮತ್ತೊಂದೆಡೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಇದನ್ನು ಬಲವಾಗಿ ಖಂಡಿಸಿ, ಆಡಳಿತಾರೂಢ ಬಿಜೆಡಿ, ಚುನಾವಣೆಯಲ್ಲಿ ಸೋಲಿಗೆ ಹೆದರಿ ರಕ್ತಪಾತ ಹರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಘಟನೆ ಎಸ್ಪಿ ಕಚೇರಿ ಬಳಿಯೇ ನಡೆದಿದ್ದರೂ ಕೊಲೆಯಾದ ಸ್ಥಳಕ್ಕೆ ಎಸ್ ಪಿ ಹೋಗಿಲ್ಲ ಎಂದರೆ ರಾಜ್ಯ ಸರ್ಕಾರ ಯಾವ ರೀತಿ ನಾಗರಿಕರಿಗೆ ರಕ್ಷಣೆ ಕೊಡುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ದೂರಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಳವಿಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳಿಸಿಕೊಳ್ಳಬೇಕು, ಚುನಾವಣೆಯನ್ನು ಚುನಾವಣೆಯ ರೀತಿಯಲ್ಲಿ ಎದುರಿಸಬೇಕು, ಅದಕ್ಕೆ ಬದಲಾಗಿ ಗುಂಡಿನ ಮೂಲಕ ಉತ್ತರ ಕೊಡುವುದು ಯಾರಿಗೂ ಶೋಭೆ ತರುವುದಿಲ್ಲ, ಅದಾಗಿಯೂ ಶಾಂತಿ ಕಾಪಾಡಿಕೊಂಡು ಬರುವಂತೆ ನಾಗರಿಕಲ್ಲಿ ಮನವಿ ಮಾಡಿದ್ದಾರೆ.
ಪ್ರದೇಶದಲ್ಲಿ ಪತ್ತೆಯಾದ ಎಲ್ಲಾ ಸಿ.ಸಿ.ಟಿ.ವಿ.ಗಳು ಕೆಲವು ಕುರುಹುಗಳನ್ನು ಸಂಗ್ರಹ ಮಾಡಿ ಅಪರಾಧಿಗಳನ್ನು ಕೂಡಲೇ ಬಂಧಿಸುವುದಾಗಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಮತ್ತು ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ.

ಬಿಜೆಪಿ ಭುವನೇಶ್ವರ ಲೋಕಸಭಾ ಅಭ್ಯರ್ಥಿ ಅಪರ್ಜಿತ ಶರಂಗಿ ಅವರು ಘಟನೆ ಖಂಡಿಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.

loading...