ಪ್ರವಚನದಿಂದ ಮನಸ್ಸಿಗೆ ನೆಮ್ಮದಿ

0
15

ಗುಳೇದಗುಡ್ಡ: ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರು ಪುರಾಣ ಪ್ರವಚನ ಆಲಿಸಬೇಕು. ಮನಸ್ಸಿಗೆ ಆನಂದ, ನೆಮ್ಮದಿ ದೊರೆಯಲು ಇಂಥಹ ಆಧ್ಯಾತ್ಮಿÃಕ ಪ್ರವಚನ ಕೇಳುವ ಪ್ರವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಶ್ರಿÃ ಜಗದ್ಗುರು ಗುರುಸಿದ್ದೆÃಶ್ವರ ಬ್ರಹನ್ಮಠದ ಶ್ರಿÃಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಇಲ್ಲಿನ ಹೊಸಪೇಟೆಯ ಶ್ರಿÃಸಂಗನಬಸವೇಶ್ವರ ಗದ್ದುಗೆಯಲ್ಲಿ ಶ್ರಾವಣ ಮಾಸದ ನಿಮಿತ್ತ ಸಂಗನಬಸವೇಶ್ವರ ಸೇವಾ ಸಮಿತಿ ಹಾಗೂ ಸಂಗನಬಸವೇಶ್ವರ ಭಜನಾ ಮಂಡಳಿ ಸಂಯುಕ್ತವಾಗಿ ಆಯೋಜಿಸಿದ್ದ ಶಿವಶರಣ ಚರಿತಾಮೃತ ಆಧ್ಯಾತ್ಮಿಕ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಸಾನಿರ್ಧಯ ವಹಿಸಿ ಮಾತನಾಡಿದರು. ಮರಡಿಮಠದ ಅಭಿನವ ಕಾಡಸಿದ್ದೆÃಶ್ವರ ಶಿವಾಚಾರ್ಯ ಶ್ರಿÃಗಳು, ಶ್ರಿÃಗುರುಬಸವ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಿವಶರಣ ಚರಿತಾಮೃತ ಆಧ್ಯಾತ್ಮಿÃಕ ಪ್ರವಚನ ನೀಡಿದ ಶಿವಪುತ್ರಪ್ಪ ಹಟ್ಟಿ ಶಾಸ್ತಿçÃಗಳು, ಸಂಗನಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಸಿದ್ದಪ್ಪ ಮಾಳಗಿ ಮಾತನಾಡಿದರು. ಈಶ್ವರಪ್ಪ ರಾಜನಾಳ, ರವಿ ಅಲದಿ, ರವಿ ಗೌಡರ, ಹನಮಂತ ಪಲಮಾರಿ, ಶಿಶಿ ಹಾಲಿಹಾಳ, ಶಂಕರ ಲಕ್ಕುಂಡಿ, ಮಂಜುನಾಥ ಅಲದಿ, ಈರಣ್ಣ ಚಿಂದಿ ಮತ್ತಿತರರು ಇದ್ದರು.

loading...