ಪ್ರವಾದಿ ಮಹ್ಮದ ಪೈಗಂಬರ ಜನ್ಮದಿನ ಆಚರಣೆ

0
161


ಘಟಪ್ರಭಾ : ಇಲ್ಲಿಯ ಅಹಲೆ ಸುನ್ನತ್ ಜಮಾತದ ವತಿಯಿಂದ ಪ್ರವಾದಿ ಮಹಮದ್ ಪೈಗಂಬರ ಜನ್ಮದಿನ (ಈದೆ-ಎ-ಮೀಲಾದ) ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ವಿವಿಧ ರೂಪಕಗಳ ಭವ್ಯ ಮೆರವಣಿಗೆ ಗುರುವಾರದಂದು ಶ್ರದ್ಧಾ ಭಕ್ತಿಯಿಂದ ಜರುಗಿತು.
ಸಂಜೆ 5 ಗಂಟೆಗೆ ಸುನ್ನಿ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡ ಮೆರವಣಿಯು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಪ್ರವಾದಿ ಮಹ್ಮದ ಪೈಗಂಬರ ಅವರ ಕುರಿತಾದ ಹಾಡುಗಳು (ನಾತ್) ಹಾಗೂ ಜೈ ಘೋಷಗಳನ್ನು ಕೂಗುತ್ತಾ ವಾಹನಗಳಿಗೆ ಮಕ್ಕಾ ಮದೀನಾ ಮಾದರಿ ಅಲಂಕರೀತ ರೂಪಕದ ದೃಶ್ಯ ಜನರನ್ನು ಆಕರ್ಷಿಸಿತು. ಮನೆ, ಅಂಗಡಿ, ಓಣಿಗಳು ದೀಪ ಅಲಂಕಾರದಿಂದ ಶೃಂಗಾರಗೊಂಡಿದ್ದವು. ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ತಂಪು ಪಾನಿಯ ಶರ್ಬತ್ ಹಾಗೂ ಸಿಹಿ ಹಂಚಲಾಯಿತು. ನಂತರ ಜಾಮಿಯಾ ಮಸೀದಿಗೆ ತಲುಪಿ ಪ್ರಾರ್ಥನೆಯೊಂದಿಗೆ ಮೆರವಣಿಗೆ ಸಮಾರೋಪಗೊಂಡಿತು.
ಈ ಸಂದರ್ಭದಲ್ಲಿ ಅಹಲೆ ಸುನ್ನತ್ ಜಮಾತದ ಹಿರಿಯರಾದ ಹಾಜಿ ಅಬ್ದುಲಗಣಿ ಮೋಮಿನ, ಸುಲ್ತಾನಸಾಬ ಕಬ್ಬೂರ, ನೂರ ಪೀರಜಾದೆ, ಹಾಜಿ ಉಮರಲಿ ಬಾಗವಾನ, ಅಹ್ಮದಹುಸೇನ ಬಾಗವಾನ, ಗೌಸ ಬಾಗವಾನ, ಗ್ರಾ.ಪಂ ಮಾಜಿ ಅಧ್ಯಕ್ಷ ಡಿ.ಎಂ.ದಳವಾಯಿ, ಮೌಲಾಲಿ ಬಾಗವಾನ, ಸಾಧೀಕ ಮೋಮಿನ, ಫಾರುಕ್ ಅತ್ತಾರ, ಇರ್ಶಾದ ವಾರಿಮನಿ, ಜಹಾಂಗೀರ ಬಾಗವಾನ, ಅಬುಫಜಲ್ ಬಳ್ಳಾರಿ, ದಿಲಾವರ ಬಾಳೇಕುಂದ್ರಿ, ಸಲೀಮ ಎಚ್.ಕಬ್ಬೂರ, ರಹೀಮಖಾನ ಪಠಾಣ, ದೌಲತ ದೇಸಾಯಿ, ದಿಲಾವರ ನದಾಪ, ಮೆಹಬೂಬ ಸಯ್ಯದ, ದಾದು ಬೇಪಾರಿ, ರಶೀದ ಚೌಧರಿ, ರಪೀಕ ಪೀರಜಾದೆ, ರಾಜೇಸಾಬ ಮುಲ್ಲಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಎಲ್ಲರೊಳಗೊಂದಾಗು ಮಂಕುತಿಮ್ಮ

loading...

LEAVE A REPLY

Please enter your comment!
Please enter your name here