ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಮನೆ ಕಟ್ಟಿಕೊಳ್ಳಿ: ಡಿಸಿ ಬೊಮ್ಮನಹಳ್ಳಿ

0
1

ಬೆಳಗಾವಿ

ಪ್ರವಾಹದಿಂದ ಮನೆ ಕಳೆದುಕೊಂಡವರ ಬ್ಯಾಂಕ ಖಾತೆಗೆ ಹಣ ಜಮೆ ಆಗಿ ೮ ತಿಂಗಳಾಗಿದೆ. ಆದರೆ ಹಲವರು ಮನೆ ನಿರ್ಮಾಣ ಕಾರ್ಯವನ್ನೇ ಆರಂಭಿಸಿಲ್ಲ. ಹೀಗಾದರೆ ಮುಂದಿನ ಹಂತದ ಹಣ ಬಿಡುಗಡೆಗೆ ತೊಂದರೆ ಆಗಲಿದೆ. ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿನಂತಿಸಿಕೊAಡಿದ್ದಾರೆ.

ನಗರದಲ್ಲಿ ಶುಕರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಮನೆ ಕಳೆದುಕೊಂಡವರ ಖಾತೆಗೆ ಸರ್ಕಾರದಿಂದ ಪರಿಹಾರ ಹಣ ಜಮೆ ಆಗಿ ೭ ರಿಂದ ೮ ತಿಂಗಳಾಗಿವೆ. ಆದರೂ ಕೆಲವು ಸಂತ್ರಸ್ತರು ಮನೆ ಕಟ್ಟಿಕೊಂಡಿಲ್ಲ. ಇದು ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಸರ್ಕಾರ ಮುಖ್ಯ ಕಾರ್ಯದರ್ಶಿ ಮನೆ ನಿರ್ಮಿಸಿಕೊಳ್ಳಬೇಕೆಂದು ಸಂತ್ರಸ್ತರಿಗೆ ಸೂಚನೆ ನೀಡಬೇಕು ಎಂದು ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆ ಕಟ್ಟಿಸಿಕೊಳ್ಳಬೇಕು. ಸಂತ್ರಸ್ತರು ಹಣ ಪಡೆದು ಮನೆ ನಿರ್ಮಿಸಿಕೊಳ್ಳದಿದ್ದರೆ ಕಷ್ಟವಾಗುತ್ತದೆ. ಸರ್ಕಾರದ ಕಾರ್ಯದರ್ಶಿ ಸಹ ಈ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಎಲ್ಲ ಸಂತ್ರಸ್ತರು ಸಹಕರಿಸಬೇಕು ಎಂದರು. ಇನ್ನು ಪ್ರವಾಹ ಸಂದರ್ಭ ಮತ್ತು ಈಗಿನ ಪರಿಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಳು ನಾಶವಾಗಿ ಹಾನಿಯಾದ ಬಗ್ಗೆ ದೂರುಗಳಿವೆ. ಈ ಕುರಿತು ತೋಟಗಾರಿಕೆ ಇಲಾಖೆ ಸರ್ವೇ ನಡೆಸಿ ಬೆಳೆ ನಾಶದ ಮಾಹಿತಿ ಪಡೆಯಬೇಕು ಎಂದರು.

loading...