ಪ್ರಸಾದ ದೇಶಪಾಂಡೆಯವರಿಂದ ಮನೆ ಮನೆ ಪ್ರಚಾರ

0
16

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರ ಸಭಾ ಚುನಾವಣೆಯ ನಿಮಿತ್ತ ಮಂಗಳವಾರ ನಗರದ ವಿವಿದೆಡೆಗಳಲ್ಲಿ ಸಚಿವ ದೇಶಪಾಂಡೆಯವರ ಸುಪುತ್ರ ಪ್ರಸಾದ ದೇಶಪಾಂಡೆಯವರು ಮನೆ ಮನೆ ಪ್ರಚಾರ ನಡೆಸಿ, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.
ಗಾಂಧಿನಗರ ವಾರ್ಡ್‌ ನಂ:02 ರಲ್ಲಿ ಪ್ರಚಾರ ಆರಂಭಿಸಿದ ಪ್ರಸಾದ ದೇಶಪಾಂಡೆಯವರು ಸ್ಥಳೀಯ ಮತದಾರರನ್ನು ಉದ್ದೇಶಿಸಿ, ಸಚಿವ ದೇಶಪಾಂಡೆಯವರ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಿ ಮತ್ತು ನಗರದ ಪ್ರಗತಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಈ ಬಾರಿಯೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಪ್ರಚಂಡ ಬಹುಮತಗಳಿಂದ ಆರಿಸಬೇಕೆಂದು ಕರೆ ನೀಡಿದರು. ಜನಾಭಿಪ್ರಾಯವನ್ನು ಸಂಗ್ರಹಿಸಿ ಪಕ್ಷದ ಸೂಕ್ತ ಅಭ್ಯರ್ಥಿಗಳಿಗೆ ಟಿಕೇಟ್‌ ನೀಡಿದ್ದು, ದೇಶಪಾಂಡೆಯವರ ಕೈ ಬಲಪಡಿಸಲು ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸಿ, ದಾಂಡೇಲಿಯನ್ನು ಸಮಗ್ರ ಮತ್ತು ಸದೃಢ ಅಭಿವೃದ್ಧಿ ನಗರವನ್ನಾಗಿಸಲು ಸಹಕರಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯದ ತಂಗಳ ಅವರು ಮಾತನಾಡಿ ನುಡಿದಂತೆ ನಡೆಯುವ ಈ ರಾಜ್ಯಕಂಡ ಮುತ್ಸದ್ದಿ ರಾಜಕಾರಣಿ, ರಾಜ್ಯದ ಪ್ರಭಾವಿ ಸಚಿವರಾದ ಆರ್‌.ವಿ.ದೇಶಪಾಂಡೆಯವರ ಕೈ ಬಲಪಡಿಸುವುದರ ಮೂಲಕ ದಾಂಡೇಲಿ ನಗರದ ಸರ್ವತೋಮುಖ ಪ್ರಗತಿಗಾಗಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡರುಗಳಾದ ರಾಧಾಕೃಷ್ಣ ಕನ್ಯಾಡಿ, ಕರೀಂ ಅಜ್ರೇಕರ, ಬಾಪು ಗೌಡ, ಪಕ್ಷದ ಅಭ್ಯರ್ಥಿ ರಫೀಕ ಖಾನ್‌, ಪಕ್ಷದ ಮುಖಂಡರುಗಳಾದ ಶಿವಪ್ಪ ನಾಯ್ಕ, ತುಕರಾಮ ಪರಸೋಜಿ, ಬೋರಪ್ಪ ತಳವಾರ, ಅವಿನಾಶ ಘೋಡಕೆ, ಪ್ರಶಾಂತ ಶಿಳ್ಳಿನ, ಚಂದ್ರು ಆರ್ಯ, ಮುರುಗೇಶ ನಾಯರ್‌, ಮಹೇಶ ಬೆಣ್ಣೆ, ಮಂಜುನಾಥ ಸುಂಕದ, ಸಲೀಂ, ಮಹಮ್ಮದಾಲಿ, ಆನಂದ ಎಲ್ಲೂರಿ ಮೊದಲಾದವರು ಉಪಸ್ಥಿತರಿದ್ದರು.

loading...