ಪ್ರಸ್ತುತ ಭಾರತದ ಅರಿವಿರಲಿ- ಓಲೇಕಾರ

0
40

ಮೂಡಲಗಿ, 27-ಇಲ್ಲಿಯ ಶ್ರೀ ಲಕ್ಷ್ಮಣ ವಾಯ್ ಅಡಿಹುಡಿ  ಕನ್ನಡ ಪ್ರಾಥಮಿಕ ಶಾಲೆ ಹಾಗೂ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ 66 ನೇ ಸ್ವಾತಂತ್ರೌತ್ಸವದ ನಿಮಿತ್ಯ ದ್ವಜಾರೋಹಣ ಸ್ಥಳೀಯ ಸಿಪಿಐ ಎಸ್.ಎಮ್. ಓಲೇಕಾರ ನೆರವೇರಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಬಿ.ಬಿ.ಹಂದಿಗುಂದ ವಹಿಸಿ, ಸ್ವತಂತ್ರ್ಯ ಭಾರತದ ಇಂದಿನ ವಿಧ್ಯಮಾನಗಳ ಬಗ್ಗೆ ಯುವ ಪಿಳಿಗೆ ಅವಲೋಕಿಸಬೇಕು. ಇಂತಹ ವ್ಯವಸ್ಥೆ ಯುವಕರ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕಾರಣ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ ಎಂದರು. ಮೂಡಲಗಿಯ ಪಿಎಸ್ಐ ಸುರೇಶಬಾಬು ಪವಾರ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಅಡಿಹುಡಿ, ಶಿವರಾಯ ಕಂಕಣವಾಡಿ, ಹಣಮಂತ ಕಂಕಣವಾಡಿ, ಮಹಾದೇವ ಕಂಕಣವಾಡಿ, ಸದಾಶಿವ ಕೊಡಗನೂರ, ರಾಮಣ್ಣಾ ಮಂಟೂರ, ಗೀತಾ ಕೊಡಗನೂರ, ಮಹಾದೇವಿ ಅಡಿಹುಡಿ, ಸದಾಶಿವ ಕೊಣ್ಣೂರ, ಸರಸ್ವತಿ ಶೇರಖಾನೆ, ಮೈತ್ರಾ ಪವಾರ, ವಿನಾಯಕ ಜೋಶಿ ಮತ್ತಿತರು ಇದ್ದರು. ಪದ್ಮಾ ಗೌಡಾ ಸ್ವಾಗತಿಸಿದರು. ಶ್ರೀದೇವಿ ಗೌಡಾ ನಿರೂಪಿಸಿದರು. ಶ್ಯಾಮಲಾ ಗೌಡಾ ವಂದಿಸಿದರು.

 

loading...

LEAVE A REPLY

Please enter your comment!
Please enter your name here