ಪ್ರೌಢ ಶಾಲಾ ಶಿಕ್ಷಕರಿಂದ ಮುಖ್ಯ ಮಂತ್ರಿಗಳಿಗೆ ಮನವಿ

0
12

ಬಾಗಲಕೋಟ: ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್‌ ಒಂದರಿಂದ ಜಾರಿಯಾದ 6 ನೇ ವೇತನ ಆಯೋಗದಲ್ಲಿ ಹಲವಾರು ಸೌಲಭ್ಯಗಳಿಂದ ವಂಚಿತರಾದ ಕರ್ನಾಟಕ ರಾಜ್ಯ ಬಡ್ತಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರು ಇಂದು ಮಾಣ್ಯ ಜಿಲ್ಲಾಧಿಕಾರಿಗಳ ಮೂಲಕ ಘನ ಸರ್ಕಾರದ ಮುಖ್ಯ ಮಂತ್ರಿಗಳಿಗೆ ವೇತನ ಆಯೋಗದ ಎರಡನೇ ಸಂಪುಟದ ಶಿಫಾರಸ್ಸುಗಳನ್ನು ಜಾರಿಗೆ ತರಲು ವಿನಂತಿಸಿ ಮನವಿ ಸಲ್ಲಿಸಿದರು.
ಪ್ರಾಥಮಿಕ ಶಾಲೆಯಲ್ಲಿ 10,15,20,25,30 ವರ್ಷಗಳ ಬಡ್ತಿಯಿಂದ ವಂಚಿತರಾದ ಬಡ್ತಿ ಪ್ರೌಢ ಶಾಲಾ ಶಿಕ್ಷಕರು ಅವರಿಗಿಂತ ಕಿರಿಯ ಹಾಗೂ ಬಡ್ತಿ ಪಡೆಯದೇ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಇರುವವರ ವೇತನಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಪರಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಸೂಚಿಸಿ 6 ನೇ ವೇತನ ಆಯೋಗದ ವರದಿಯ ಎರಡನೇ ಸಂಪುಟದಲ್ಲಿ ಇಂತಹ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ವೇತನ ವ್ಯತ್ಯಾಸ ಸರಿಪಡಿಸಲು ಶಿಫಾರಸ್ಸು ಮಾಡಿದ್ದರೂ ಇದುವರೆಗೆ ಮಾನ್ಯ ಮುಖ್ಯ ಮಂತ್ರಿಗಳು ಈ ವರದಿಯ ಅನುಷ್ಠಾನ ಮಾಡಿರುವುದಿಲ್ಲ. ಅಲ್ಲದೇ ಕುಮಾರ ನಾಯಕ ವರದಿಯನ್ವಯ ಒಂದು ಹೆಚ್ಚುವರಿ ವೇತನ ಬಡ್ತಿ ನೀಡಿರುವುದನ್ನು ಮೂಲ ವೇತನಕ್ಕೆ ಸೇರಿಸದೇ ಪ್ರತ್ತೇಕ ವಿಶೇಷ ವೇತನವೆಂದು ತೋರಿಸಿರುವುದು ಹಾಗೂ ವೇತನÀ ವ್ಯತ್ಯಾಸ ಸರಿಪಡಿಸಲು ನೀಡಿದ 400 ವಿಶೇಷ ವೇತನ ಬತ್ಯೆಯನ್ನು ದಿ.1-8-2018 ರ ನಂತರ ಬಡ್ತಿ ಹೊಂದಿದ ಪ್ರೌಢ ಶಾಲಾ ಶಿಕ್ಷಕರಿಗೆ ನಿರಾಕರಿಸಿ ಆದೇಶ ಹೊರಡಿಸಿರುವುದರಿಂದ ವೇತನದಲ್ಲಿ ತುಂಬಾ ವ್ಯತ್ಯಾಸವಾಗುವ ಸಾಧ್ಯತೆ ಇದ್ದು ಮೊದಲೇ ವೇತನದಲ್ಲಿ ವ್ಯತ್ಯಾಸ ಹೊಂದಿರುವ ನಮಗೆ ಮತ್ತಷ್ಟು ಅನ್ಯಾಯವಾಗಿದೆ. ಕಾರಣ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ 400 ರೂ.ವಿಶೇಷ ವೇತನ ಬಡ್ತಿ ಹೊಂದಿದ ಶಿಕ್ಷಕರಿಗೂ ಮುಂದುವರೆಸಲು ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಮಾನ್ಯ ಜಿಲ್ಲಾಧಿಕಾರಿಗಳಾದ ಕೆ.ಜಿ.ಶಾಂತಾರಾಮ ರವರು ಮನವಿಯನ್ನು ಮುಖ್ಯ ಮಂತ್ರಿಗಳಿಗೆ ಕಳಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಈ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದs ಎಸ್‌.ಬಿ.ಮಾಚಾ, ಜಿಲ್ಲಾ ಅಧ್ಯಕ್ಷ ಎಸ್‌.ಟಿ.ಬೆಳಕೊಪ್ಪದ, ಖಜಾಂಚಿÀ ಸಂಗಮೇಶ ಸಣ್ಣತಂಗಿ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಜಾನಮಟ್ಟಿ ಹಾಗೂ ವಿವಿಧ ತಾಲೂಕಾ ಪದಾಧಿಕಾರಿಗಳಾದ ಡಿ.ಯು.ಲಮಾಣಿ, ಎ.ಪಿ.ಮೇಟಿ, ಆರ್‌. ಎಂ.ಬಾಗವಾನ, ಎಸ್‌.ಎಂ.ನದಾಫ, ಆರ್‌.ಎಸ್‌.ಪಾಟೀಲ, ಎಸ್‌.ಜಿ.ಹುದ್ದಾರ, ಎಸ್‌.ಎಸ್‌.ಮಂತ್ರಿ, ವೈ.ಜಿ.ತಳವಾರ, ಬಿ.ಆರ್‌.ಪಾಟೀಲ, ಬಿ.ಆರ್‌.ಮಿಟ್ಟಲಕೋಡೈ.ಐ.ಜಿ.ಚಿತ್ತವಾನ ಹಾಜರಿದ್ದರು.

loading...