ಬಣಜಿಗ ಸಮಾಜದ ಬಾಂಧವರು ನನ್ನನ್ನು ಕ್ಷಮಿಸಬೇಕು : ವೀಣಾ

0
79

ಜಮಖಂಡಿ: ಎಲ್ಲಾ ಜಾತಿ ಜನಾಂಗದ ಹಾಗೂ ಎಲ್ಲ ಸಮುದಾಯದ ಜೊತೆ ಅನೋನ್ಯವಾಗಿ ಬದುಕುತ್ತಿದ್ದು ದೇಶದ ಏಕತೆ ಹಾಗೂ ಅಖಂಡತೆಗಾಗಿ ನಮ್ಮ ಕುಟುಂಬ ಮೂರು ನಾಲ್ಕು ದಶಕಗಳಿಂದ ಸಕ್ರಿÃಯವಾಗಿ ಸಾಮಾಜಿಕ ಸೇವೆ ಮಾಡುತ್ತಾ ಬಂದಿದೆ. ಹೀಗಾಗಿ ನಾನು ಯಾರ ಮನಸ್ಸು ನೋವಿಸಲು ಇಷ್ಟ ಪಡುವುದಿಲ್ಲ ಆದರೆ ಇತ್ತಿಚೆಗೆ ಬಣಜಿಗ ಸಮಾಜಕ್ಕೆ ನನ್ನ ಮಾತಿನಿಂದ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಬಾಗಲಕೋಟ ಲೋಕಸಭಾದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಇಂದಿಲ್ಲಿ ಹೇಳಿದರು.
ಅವರು ನಗರದ ಜಂಬಗಿ ರಸ್ತೆಯಲ್ಲಿರುವ ಕಾಂಗ್ರೆÃಸ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು. ಈಗಾಗಲೇ ಹಲವಾರು ಬಾರಿ ಈ ವಿಷಯದ ಕುರಿತು ಕ್ಷಮೆಯಾಚಿಸಿದ್ದೆನೆ ಆದರೂ ಚುನಾವಣೆ ಹೊತ್ತಿನಲ್ಲಿ ನನ್ನ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಮತ್ತೆ ವೈರಲ್ ಆಗುತ್ತಿದ್ದು ನನ್ನ ಮನಸ್ಸಿಗೆ ಖೇಧ ಅನಿಸುತ್ತದೆ ಬಾಗಲಕೋಟ ಜಿಲ್ಲೆಯ ಸಮಸ್ತ ಬಣಜಿಗ ಸಮಾಜದ ಭಾಂಧವರು ನನ್ನಿಂದ ಆದ ಪ್ರಮಾದವನ್ನು ಮನ್ನಿಸಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ತ ಸದಸ್ಯ ಎಸ್ ಆರ್ ಪಾಟೀಲ, ಜನಪ್ರಿÃಯ ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕ ಎನ್ ಎಸ್ ಖೇಡ, ಮಾಜಿ ಭೂ ಸೇನಾ ನಿಗಮದ ಅಧ್ಯಕ್ಷ ಶ್ರಿÃಶೈಲ ದಳವಾಯಿ, ಇಲಾಯಿ ಕಂಗನೋಳ್ಳಿ, ನಜೀರ ಕಂಗನೊಳ್ಳಿ, ಹಿರಿಯರಾದ ಮುತ್ತಣ್ಣ ಹಿಪ್ಪರಗಿ, ಎನ್ ಎಸ್ ದೇವರವರ, ರವಿ ಬಬಲೇಶ್ವರ ಮುಂತಾದವರು ಉಪಸ್ಥಿತರಿದ್ದರು.

loading...