ಬದ್ರಬಾಹು ಶ್ರೀಗಳ ಜನ್ಮ ಜಯಂತಿ ಆಚರಣೆ

0
4

ಬೆಳಗಾವಿ.ಸೆ.14: ಸ್ಥಳೀಯ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿಂದು ವಿದ್ಯಾಪೀಠದ ಸಂಸ್ಥಾಪಕ ಅಧಿಷ್ಠಾತರಾದ ಪರಮ ಪೂಜ್ಯ ಜಿನೆಕ್ಯ 105 ಶ್ರೀ. ಬದ್ರಬಾಹು ಸ್ವಾಮೀಜಿಯವರ 84 ನೇ ಜನ್ಮ ಜಯಂತಿಯನ್ನು ಭಕ್ತಿಭಾವದಲ್ಲಿ ಆಚರಿಸಲಾಯಿತು.

ವಿದ್ಯಾಪೀಠದ ಅಧಿಷ್ಠಾತ ಹಾಗೂ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಅವರು ಶ್ರೀಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿದ್ಯಾಪೀಠದ ಅಂಗ ಸಂಸ್ಥೆಯ ಪ್ರಾಚಾರ್ಯಗಳಾದ ಎಸ್.ಕೆ.ಕಟ್ಟಿ, ಜೆ.ಡಿ.ದುರದುಂಡಿ, ತ.ಬಾ.ಹಮನಗೊಂಡ, ಮಂಗಲ ಕುಲಕರ್ಣಿ, ಕೆ.ಆರ್. ವ್ಯಾಹಳ, ಕಳಸೇಕರ, ಸೇ ರಿದಂತೆ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾಪೀಠದ ಗುರುಕುಲ ಬಸ್ತಿಯಲ್ಲಿ ವಿಶೇಷ ಪೂ ಜಾ ಕಾರ್ಯಕ್ರಮ ಜರುಗಿತು.

loading...