ಬರದಿಂದ ಸಾಗುತ್ತಿರುವ ವದಗನಾಳ ಗ್ರಾಮದ ಶ್ರೀ ಹಮ್ಮಿಗೇಶ್ವರ ಜಾತ್ರೆ

0
90

ಕನ್ನಡಮ್ಮ ಸುದ್ದಿ-ಕೊಪ್ಪಳ : ತಾಲೂಕಿನ ವದಗನಾಳ ಗ್ರಾಮದಲ್ಲಿ ಶ್ರೀ ಹಮ್ಮಿಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಪ್ರಸಾದದ ವ್ಯವಸ್ಥೆ ಬರದಿಂದ ಸಾಗುತ್ತಿದೆ.
ಶ್ರೀ ಹಮ್ಮಿಗೇಶ್ವರ ಜಾತ್ರಾ ಅಂಗವಾಗಿ ಸಾಮೂಹಿಕ ವಿವಾಹಗಳು ಜರಗುವವು ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ವಿವಿಧ ಬಗೆಯ ಪ್ರಸಾದವನ್ನು ಏರ್ಪಡಿಸಲಾಗಿದ್ದು. ಪ್ರಸಾದ ವ್ಯವಸ್ಥೆ ಬರದಿಂದ ಸಾಗುತ್ತಿದೆ ಪ್ರಸಾದದ ವಿವರ ಇಂತಿದೆ.
13.ಕ್ವಿಂಟಲ್‍ಬುಂದೆ, 08.ಕ್ವಿಂಟಲ್ ಜಿಲೇಬಿ, 06 ಟನ್ ಬಾಳೆಹಣ್ಣು, 300 400 ಲಿಟರ್ ಮಜ್ಜಿಗೆ, 4.ಕ್ವಿಂಟಲ್ ಮಾಲದಿ, 10. ಕ್ವಿಂಟಲ್ ಜೋಳದ ರೊಟ್ಟಿ, 3-4 ಕ್ವಿಂಟಲ್ ಚಪಾತಿ, 30-50 ಕ್ವಿಂಟಲ್ ಅಕ್ಕಿ ಹಾಗೂ ಹಪ್ಪಳ, 15 ಚೀಲ ಸೊಂಡಿಗಿ ಸೇರಿದಂತೆ ಇನ್ನೂ ವಿವಿಧ ಬಗೆಯ ಪ್ರಸಾದವನ್ನು ಸೇವಾ ಸಮಿತಿಯವರು ತಯಾರಿಸುತ್ತಿದ್ದಾರೆ.
ದಿ: 12-04-2017 ರಂದು ನಡೆಯುವ ಜಾತ್ರಾ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಹಮ್ಮಿಗೇಶ್ವರ ಕೃಪೆಗೆ ಪಾತ್ರರಾಗಬೇಕೆಂದು ವದಗನಾಳ ಸದ್ಭಕ್ತಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...