ಬಸವೇಶ್ವರ ಮೂಕಪ್ಪ ಶ್ರೀಗಳ ಅಂತ್ಯಕ್ರಿಯೆ

0
16

ಕನ್ನಡಮ್ಮ ಸುದ್ದಿ-ಹಿರೇಕೆರೂರ: ತಾಲೂಕಿನ ಸಾತೇನಹಳ್ಳಿ ಗ್ರಾಮದಲ್ಲಿ ಲಿಂ. ಶಿವಾಲಿ ಬಸವೇಶ್ವರ ಮಠದ ಪೀಠಾಧಿಪತಿ ಶಿವಾಲಿ(ವೃಷಭರೂಪಿ) ಬಸವೇಶ್ವರ ಮೂಕಪ್ಪ ಮಹಾ ಸ್ವಾಮಿಗಳ ಅಂತ್ಯಕ್ರಿಯೆ ಬುಧವಾರ ಮೂಲ ಕತೃ ಗದ್ದುಗೆಯ ಬಳಿ ನೆರವೇರಿತು.
ನಾಡಿನ ವಿವಿಧ ಭಾಗಗಳಿಂದ ಗ್ರಾಮಕ್ಕೆ ಆಗಮಿಸಿದ್ದ ಅಪಾರ ಭಕ್ತರು ಲಿಂಗೈಕ್ಯ ಶ್ರೀಗಳ ದರ್ಶನ ಪಡೆದರು. ಮದ್ಯಾಹ್ನ 12ಗಂಟೆಯಿಂದ ಗ್ರಾಮದ ಮಠದ ಆವರಣದಿಂದ ಶಿವಾಲಿ ಬಸವೇಶ್ವರ ಮೂಕಪ್ಪ ಮಹಾಸ್ವಾಮಿಗಳ ಕತೃ ಗದ್ದುಗೆಯವರೆಗೆ ಶ್ರೀಗಳ ಪಾರ್ಥೀವ ಶರೀರವನ್ನು ಮೆರವಣಿಗೆ ಮಾಡಲಾಯಿತು. ನಂತರ ಸಂಜೆ 5.30ಕ್ಕೆ ಹಿಂದೂ ಸಂಪ್ರದಾಯದಂತೆ ಶ್ರೀಗಳ ಅಂತ್ಯಕ್ರಿಯೆ ನೆರವೇರಿತು. ಮಡ್ಲೂರು ಮುರುಘಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕೊಳೆನೂರು ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಹೇರೂರು ಮಠದ ಗುಬ್ಬಿ ನಂಜುಂಡೇಶ್ವರ ಮಹಾಸ್ವಾಮಿಗಳು, ಹೋತನಳ್ಳಿ ಮಠದ ಶಂಕರಾನಂದ ಮಹಾಸ್ವಾಮಿಗಳು, ತೋಗರ್ಸಿ ಮಳಿಹಿರೇಮಠದ ಮಹಾಂತ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ ಅಪಾರ ಭಕ್ತರು ಇದ್ದರು.

loading...