ಬಸವ ವಸತಿ ಯೋಜನೆಯ ಮನೆ ಹಂಚಿಕೆಗೆ ಆರ್.ಟಿ.ಸಿ ಕಡ್ಡಾಯ  ಅತೀ ಬಡವರಿಗೆ ಅನ್ಯಾಯ: ಶಾಸಕ ಕಾಗೇರಿ

0
44

30 SDP 1 A

ಸಿದ್ದಾಪುರ,31: ಸರಕಾರದ ವಸತಿ ಯೋಜನೆಯಲ್ಲಿ ಈ ಮೊದಲು ಮನೆ ನಂಬರ್ ಉಳ್ಳವರಿಗೆ ಮನೆ ನೀಡಲಾಗುತ್ತಿತು. ಇಂದು ಫಲಾನುಭವಿಗಳಿಗೆ ಆರ್.ಟಿ.ಸಿ ಇರುವುದು ಕಡ್ಡಾಯ ಎನ್ನುತ್ತಿದ್ದಾರೆ. ಇದರಿಂದ ಬಡವರಲ್ಲಿಯ ಬಡವರಿಗೆ ಮನೆಯನ್ನು ನೀಡವುದಕ್ಕೆ ಆಗುವುದಿಲ್ಲ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಬಸವ ವಸತಿ ಸಮಿತಿಯ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಬಹುತೇಕ ಬಡವರಿಗೆ ಉಳಿದುಕೊಳ್ಳಲು ಮನೆಯಿಲ್ಲ. ಅತಿಕ್ರಮಣ ಮಾಡಿಕೊಂಡು, ಅಲ್ಲಿ-ಇಲ್ಲಿ ವಾಸವಾಗಿದ್ದಾರೆ. ಅಂತವರಿಗೆ ಪಂಚಾಯತದ ಮನೆ ನಂಬರಿನ ಆದರದ ಮೇಲೆ ವಸತಿ ಯೋಜನೆಯಲ್ಲಿ ಮನೆ ನೀಡುವಂತಾಗಬೇಕು. ಈ ಬಗ್ಗೆ ನಿಯಮವನ್ನು ಸಡಲಿಸುವಂತೆ ಸರ್ಕಾರಕ್ಕೆ ಕೇಳಿಕೊಳ್ಳಲಾಗಿತ್ತು. ಆದರೆ ಅದು ಇನ್ನೂ ಆಗಿಲ್ಲ. ಆದರೆ ನಾಳೆ ಈ ಯಾದಿಯನ್ನು ಅಂತಿಮಗೊಳಿಸಿಬೇಕಾಗಿದೆ ತಾಲೂಕಾ ಪಂಚಾಯದದಿಂದ. ಇಲ್ಲವಾದರೆ ತಾಲೂಕಿಗೆ ಬಂದಿರುವ ಮನೆಗಳು ಹೊಗುತ್ತವೆ. ಕಾರಣ ನಮಗೆ ಬಡವರಲ್ಲಿಯ ಅತೀ ಬಡವರಿಗೆ ಮನೆಯನ್ನು ನೀಡಲಾಗುವುದಿಲ್ಲ ಎಂದು ತಿಳಿದು ಆರ್.ಟಿ.ಸಿ ಇದ್ದವರ ಯಾದಿ ಕೋಡಬೇಕಾಗಿದೆ.
ವಸತಿ ಯೋಜನೆಯಲ್ಲಿಯ ಸಮಸ್ಯೆಯನ್ನು ಸರಕಾರ ಪರಿಹರಿಸಬೇಕು. ವಸತಿ ಸಚಿವರಿದ್ದಾರೆ, ಸಂಪುಟವಿದೆ, ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ಅವರುಗಳ ಪೂರ್ಣಪ್ರಮಾಣದ ಭಾಗವಹಿಸುವಿಕೆ ಮುಖ್ಯ ಸಮಸ್ಯೆ ಬಗೆಹರಿಸುವಲ್ಲಿ. ಅಧಿಕಾರಿಗಳು ಮಾಡಿರುವ ಸೂತ್ತೋಲೆಯಲ್ಲಿಯ ಸಮಸ್ಯೆಗೆ ಸರ್ಕಾರ ತಿದ್ದುಪಡಿ ಮಾಡಬೇಕು. ಇದೊಂದೆ ಅಲ್ಲ. ಇನ್ನೂ ಅನೇಕ ಸಮಸ್ಯೆಗಳಿವೆ.ಆದರೆ ಸರ್ಕಾರ ಮಾಡುತ್ತಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಸಚಿವರಾದ ಎಚ್.ಕೆ.ಪಾಟೀಲರನ್ನು ಯೋಜನ ಆಯೋಗಕ್ಕಿಂತ ಮೇಲಿನ ಮತ್ತೊಂದು ಆಯೋಗ ರಚನೆ ಮಾಡಿ ಜ್ಞಾನ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಿ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವ್ಯೆಂಗಮಾಡಿದರು. ಅವರು ಮಾಡುವ ಕೆಲಸ ಸರಿಯಾಗಿ ಮಾಡದಿದ್ದರು, ಉಳಿದೆಲ್ಲವನ್ನು ಮಾಡುತ್ತಾರೆ. ಹೊಸ -ಹೊಸ ಯೋಜನೆ ತರುತ್ತಾರೆ. ಗ್ರಾಮ ಪಂಚಾಯತಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಹೊಸ ಗ್ರಾಮ ಪಂಚಾಯತಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಇನ್ನೂ. ಅವರಿಗೆ ಕುಳಿತುಕೊಳ್ಳಲು ಕುರ್ಚಿ ಇಲ್ಲವಾಗಿದೆ. 14ನೇ ಹಣಕಾಸಿನ ಯೋಜನೆಯಲ್ಲಯೂ ಹೊಸ ಪಂಚಾಯತಕ್ಕೆ ಹಣ ಬಂದಿಲ್ಲ. ಉಳಿದ ಪಂಚಾಯತಕ್ಕೆ ಹಣ ಬಂದರೂ ಕರ್ಚು ಮಾಡುವಂತಿಲ್ಲ. ಮುಂದಿನ ಐದು ವರ್ಷದ ಮುನ್ನೋಟ ಸಿದ್ದಪಡಿಸಿ ಕ್ರಿಯಾಯೋಜನೆ ಮಾಡಬೇಕೆಂದು ಹೇಳಿದ್ದಾರೆ ನಿನ್ನೆ, ಇವರು ಐದು ವರ್ಷಕ್ಕೆ ಕೋಡುವ ಹಣ ಎಷ್ಟು ಮೊದಲು ಹೇಳಲಿ ಎಂದರು.
ತಾಲೂಕಿನಲ್ಲಿ ಒಟ್ಟು 450 ಮನೆಗಳ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಎಸ್.ಸಿ. ಮತ್ತು ಎಸ್.ಟಿ ಹಾಗೂ ಅಲ್ಪಸಂಖ್ಯಾತರ 73 ಮನೆಗಳು ಉಳಿದಿವೆ. ಅದನ್ನು ಸಾಮಾನ್ಯರಿಗೆ ಪರಿವರ್ತಿಸಲು ಕೆಳಲಾಗಿತ್ತು, ಆದರೆ ಅದು ಬರುವುದಿಲ್ಲ. ಆದರಿಂದ ಬೇರೆ ಪಂಚಾಯತದಲ್ಲಿಯ ಅಗತ್ಯ ಇರುವ ಎಸ್.ಸಿ. ಮತ್ತು ಎಸ್.ಟಿ ಹಾಗೂ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕುರಿತು ನಿರ್ಣಹಿಸಲಾಯಿತು.
ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಿಲ್ಲ, ಎಷ್ಟೆ ಕೇಳಿಕೊಂಡರು. ಅದರೆ ಈಗಲೇ ಅಲ್ಲಲ್ಲಿ ಕುಡಿಯುವ ನೀರಿನ ತೊಂದರೆ ಇದೆ ಎಮದು ಹೇಳಲಾಗುತ್ತಿದೆ. ಕರಣ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಆ ಬಗ್ಗೆ ಗಮನ ಹರಿಸಿ ಎಂದು ಸೂಚಿಸಿದರು.
ತಾ.ಪಂ ಅಧ್ಯಕ್ಷೆ ಶಾಂತಿ ಈಶ್ವರ ಹಸ್ಲರ್, ಜಿ.ಪಂ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ನಾಯ್ಕ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಶ್ರೀಧರ ಭಟ್ ಹಾಗೂ ತಾ.ಪಂ ಸದಸ್ಯರುಗಳಾದ ಪ್ರಸನ್ನ ಹೆಗಡೆ, ನೀಲಕಂಠ ಗೌಡರ್, ಮಾದೇವಿ ಗೌಡ, ಗೌರಿ ಗೌಡ, ಹಾಗೂ ವಿವಿಧ ಗ್ರಾ.ಪಂ ಅಧ್ಯಕ್ಷರು, ಪಿಡಿಓ ಗಳು ಉಪಸ್ಥಿದ್ದರಿದ್ದರು.

loading...

LEAVE A REPLY

Please enter your comment!
Please enter your name here