ಬಸ್ಸಾಪೂರ ಗ್ರಾಮ ಪಂಚಾಯತಿ ಪ್ರಗತಿ ಪರೀಶೀಲನೆ

0
33

ಹಿಡಕಲ್ ಡ್ಯಾಮ್  : ಇಲ್ಲಿಗೆ ಸಮೀಪದ ಬಸ್ಸಾಪೂರ ಗ್ರಾಮ ಪಂಚಾಯತಿಯ ಪ್ರಗತಿ ಪರೀಶಿಲನೆಯನ್ನು ಗುರುವಾರ ದಿ : 15 ರಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಪರೀಶೀಲನೆ ಮಾಡಿದರು. ಚುನಾಯಿತ ಪ್ರತಿನಿಧಿಗಳು, ತಮ್ಮ ಅನುದಾನದಲ್ಲಿ ಮಂಜೂರಾದ ಆದ ಕಾಮಗಾರಿಗಳನ್ನು ಮಾತ್ರ ಚಾಲನೆ ಮಾಡಬೇಕು ಇನ್ನೊಬ್ಬರ ಅನುದಾನದಲ್ಲಿ ಹಸ್ತಕ್ಷೆಪ ಮಾಡಬಾರದು ಗ್ರಾಮದ ಅಭಿವೃದ್ದಿ ವಿಷಯದಲ್ಲಿ ರಾಜಕೀಯ ಸಲ್ಲದು ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು ಪಂಚಾಯತ ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಮುತಾಲಿಕ ದೇಸಾಯಿ, ಬಸ್ಸಾಪೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಕುರಿತು. ವಿವರಿಸಿದರು. ಸಮಾರಂಭದಲ್ಲಿ ಬಸ್ಸಾಪೂರ ಗ್ರಾ.ಪಂ. ಅಧ್ಯಕ್ಷ ಶಂಕರ ಧೂಳಿ, ಉಪಾಧ್ಯಕ್ಷೆ ಯಲ್ಲವ್ವಾ ಅರ್ಜುನ ಮೆಟಕೇರಿ, ಇಮಾಮಹುಸೇನ ನಾಯಿಕ, ರಾಜಾಸಾಬ ದೇಸಾಯಿ, ಗಣಪತಿ ಕೆಂಚವ್ವಗೋಳ, ಅರ್ಜುನ ಮೆಟಕೇರಿ, ವಿಠ್ಠಲ ಬೋರನ್ನವರ, ಮಾರುತಿ ದಾದಿಖಾನ, ಬಸವರಾಜ ಸನ್ನರಾಯಿ ಅಬ್ದುಲಗಣಿ ದರ್ಗಾ, ವಿನೋದ ಡೊಂಗರೆ, ಹಾಗೂ ಗ್ರಾಮ ಪಂಚಾಯತ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು. ಶಿವಗೌಡಾ ಧೂಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here