ಬಸ್ ಅಡಿಯಲ್ಲಿ ಸಿಲುಕಿ ಶಾಲಾ ಬಾಲಕ ಸಾವು

0
61

ಬೆಳಗಾವಿ:ಶಾಲೆಗೆ ತೆರಳುತ್ತಿರುವ ಮಗು ಆಯಾತಪ್ಪಿ ಬಸ್ ಅಡಿಯಲ್ಲಿ ಸಿಲುಕಿ ಸಾವನಪ್ಪಿದ ಘಟನೆ ದೇಸೂರ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲೂಕಿನ ದೇಸೂರ ಗ್ರಾಮದ ಶಾಲಾ ಬಾಲಕ ಮಹಮ್ಮದ ರಿಜ್ವಾನ್ ಔಧರಿ( 10) ಮೃತ ದುರ್ದೈವಿ, ತಾತನ ಜತೆ ಆಗಮಿಸಿದ ಬಾಲಕ ಶಾಲೆಗೆ ತೆರಳುವ ಸಂದರ್ಭದಲ್ಲಿ ಸಾರಿಗೆ ಬಸ್ ಹತ್ತುವಾಗ್, ಬಸ್ ಹಿಂಬದಿಗೆ ಚಲಿಸಿದರಿಂದ ಬಾಲಕ ಟೈಯರ್ ಅಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.

ಮೃತ ಬಾಲಕ ಪೀರನವಾಡಿಯ ಡಿವೈನ್ ಮರ್ಸಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ಮಾಹಿತಿ ಲಭ್ಯವಿದೆ.ವಡಗಾಂವ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...