ಬಾಂಗ್ಲಾ ನುಸುಳುಕೋರರನ್ನು ಗಡಿಪಾರು ಮಾಡಿ: ಶ್ರಿರಾಮ ಸೇನೆ ಒತ್ತಾಯ

0
24

ಬಾಂಗ್ಲಾ ನುಸುಳುಕೋರರನ್ನು ಗಡಿಪಾರು ಮಾಡಿ: ಶ್ರಿರಾಮ ಸೇನೆ ಒತ್ತಾಯ

ಕನ್ನಡಮ್ಮ ಸುದ್ದಿ-ಬೆಳಗಾವಿ: ಅಸ್ಸಾಂ ರಾಜ್ಯದಲ್ಲಿ ನಡೆದ ಪೌರತ್ವ ನೊಂದಣಿ ಅಭಿಯಾನದಲ್ಲಿ ೪೦ ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿ ನುಸುಳುಕೋರರು ಇರುವ ಆಘಾತಕಾರಿ ಸತ್ಯ ಹೊರಬಂದಿರುತ್ತದೆ.ಆದ್ದರಿಂದ ದೇಶಾದ್ಯಂತ ಇಂತಹ ಬಾಂಗ್ಲಾ ನುಸುಳುಕೊರರು ಪಸರಿಸಿದ್ದು ತಕ್ಷಣ ಇಂತಹ ಅಕ್ರಮ ವಲಸಿಗರನ್ನು ಗಡಿ ಪಾರು ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಅವರಿಗೆ ಶ್ರಿರಾಮ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ರಾಮಸೇನೆ ಜಿಲ್ಲಾ ಘಟಕದ ಕಾರ‍್ಯಕರ್ತರು ದೇಶದ ಆಂತರಿಕ,ಭದ್ರತೆ,ಸಾಮಾಜಿಕ,ಆರ್ಥಿಕ,ರಾಜಕೀಯ ಸೇರಿದಂತೆ ಅಕ್ರಮ ನುಸುಳುಕೊರರು ಕಂಟಕವಾಗುತ್ತಿದ್ದು,ದೇಶಕ್ಕೆ ಅತಿಯ ಹಿನ್ನೆಡೆ ಹಾಗೂ ಹಾನಿಯಾಗುತ್ತಿರುವ ವಿಷಯವನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಆಕ್ರಮವಾಗಿ ನೆಲೆಸಿರುವ ಕೋಟ್ಯಾಂತರ ಬಾಂಗ್ಲಾ ದೇಶಿಯರನ್ನು ಹೊರ ಹಾಕಲು ಕಠಿಣ ಕಾನೂನು ಕ್ರಮ ಜರುಗಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಶ್ರಿÃ ರಾಮಸೇನೆ ಜಿಲ್ಲಾದ್ಯಕ್ಷ ವಿಕ್ರಮ ಬನಗೆ ಸೇರಿದಂತೆ ಇತೆರರು ಇದ್ದರು.

loading...